ಆಲಿವ್ ರಿಡ್ಲಿ ಮತ್ತು ಹಸಿರು ಸಮುದ್ರ ಆಮೆಗಳು ಸೇರಿದಂತೆ ಆಳಿವಿನಂಚಿನಲ್ಲಿರುವ 260 ಸಮುದ್ರ ಜಾತಿಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಕಳೆದ ಮೂರು ವರ್ಷಗಳಲ್ಲಿ 40.78 ಲಕ್ಷ ರೂಪಾಯಿ ಪರಿಹಾರವನ್ನು ಗಳಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
138 ಆವಿವ್ ರಿಡ್ಲಿ ಆಮೆಗಳು, 67 ಹಸಿರು ಸಮುದ್ರ ಆಮೆಗಳು, 5 ಹಾಕ್ಸ್ಬಿಲ್ ಆಮೆಗಳು, ಎರಡು ಲೆದರ್‌ಬ್ಯಾಕ್ ಸಮುದ್ರ ಆಮೆಗಳು, 37 ಜಿಂಕೆ ಶಾರ್ಕ್ ಗಳು, ಆರು ದೈತ್ಯ ಗಿಟಾರ್ ಮೀನುಗಳು, ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ಮತ್ತು ನಾಲ್ಕು ಫಿನ್‌ಲೆಸ್ ಪೋರ್ಪೊಯಿಸ್‌ಗಳನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಾಗಿದೆ.
ಅಪರೂಪದ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯದ ಅರಣ್ಯ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಪರಿಹಾರವನ್ನು ನೀಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುರುವಾರದಂದು ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel