ಮೀನುಗಾರಿಕಾ ದೋಣಿಯಲ್ಲಿ 450 ಚೀಲ ಅಡಿಕೆ ಪತ್ತೆ | 14 ಜನರ ಬಂಧನ |

April 11, 2025
9:11 PM

ಭಾರತೀಯ ಕರಾವಳಿ ರಕ್ಷಣಾ ಪಡೆಯು ಸಮುದ್ರದ ಮೂಲಕ ಅಡಿಕೆ ಕಳ್ಳಸಾಗಣೆ ಮಾಡುವ ಪ್ರಕರಣವನ್ನು ಪತ್ತೆ ಮಾಡಿದೆ. ಕರಾವಳಿ ರಕ್ಷಣಾ ಪಡೆ ಹಡಗು ‘ವರದ್’  ಬಂಗಾಳ ಕೊಲ್ಲಿಯಲ್ಲಿ ಗಸ್ತು ನಡೆಸುತ್ತಿದ್ದಾಗ ಮೀನುಗಾರಿಕಾ ದೋಣಿಯಲ್ಲಿ ಅಡಿಕೆ ಸಾಗಾಣಿಕೆ ಪ್ರಕರಣ ಒಡಿಸ್ಸಾ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. ಮೀನುಗಾರಿಕಾ ದೋಣಿಯಲ್ಲಿ 450 ಚೀಲ ಅಡಿಕೆ ಪತ್ತೆಯಾಗಿದ್ದು, ಪ್ರತಿಯೊಂದು ಚೀಲವು ಸುಮಾರು 50 ರಿಂದ 60 ಕೆಜಿ ತೂಕವಿತ್ತು. ಈ ಅಡಿಕೆಯ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.…..ಮುಂದೆ ಓದಿ….

Advertisement

ಪಶ್ಚಿಮ ಬಂಗಾಳದ ಕಾಕ್‌ದ್ವೀಪ್ ಮೀನುಗಾರಿಕಾ ಬಂದರಿನಲ್ಲಿ ನೋಂದಾಯಿಸಲಾದ  ಮೀನುಗಾರಿಕಾ ದೋಣಿಯು ಯಾವುದೇ  ದಾಖಲೆಗಳಿಲ್ಲದೆ ಅಡಿಕೆ ಸಾಗಿಸುತ್ತಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ  ತಿಳಿಸಿದೆ. ಮೀನುಗಾರಿಕಾ ದೋಣಿಯ 14 ಸಿಬ್ಬಂದಿಗಳ ಬಳಿಯೂ ಯಾವುದೇ  ಬಯೋ-ಮೆಟ್ರಿಕ್ ಕಾರ್ಡ್‌ಗಳು ಕೂಡಾ ಇರಲಿಲ್ಲ. ದೋಣಿಯಲ್ಲಿ ಯಾವುದೇ ಮೀನುಗಾರಿಕೆ ಸಲಕರಣೆಗಳು ಅಥವಾ ಯಾವುದೇ ಮೀನು ಹಿಡಿಯುವ  ಸಾಧನಗಳು ಕಂಡುಬಂದಿಲ್ಲ. ಹೆಚ್ಚಿನ ತನಿಖೆಗಾಗಿ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯ ಪ್ಯಾರದೀಪ್ ಬಂದರಿಗೆ ಸಾಗಿಸಲಾಗಿದೆ  ತನಿಖೆ ನಡೆಯುತ್ತಿದೆ. ನಮ್ಮ ವ್ಯಾಟ್ಸಪ್‌ ಚಾನೆಲ್‌ಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group