ಕರಾವಳಿಯ ಮೂಲಕಸುಬು ಮೀನುಗಾರಿಕೆಗೆ ಹೊಡೆತ | ಹವಾಮಾನ ವೈಪರೀತ್ಯದಿಂದ ಮತ್ಸ್ಯಕ್ಷಾಮ | ಇದಕ್ಕೆ ಕಾರಣಗಳೇನು..?

November 25, 2023
1:39 PM
ಹವಾಮಾನ ವೈಪರೀತ್ಯ ಎಲ್ಲಾ ಕ್ಷೇತ್ರದಲ್ಲೂ ಸಂಕಷ್ಟ ತಂದೊಡ್ಡುತ್ತದೆ. ಇದೀಗ ಕರಾವಳಿಯ ಪ್ರಮುಖ ವಾಣಿಜ್ಯ ಚಟುವಟಿಕೆಯಾದ ಮೀನುಗಾರಿಕೆಯ ಮೇಲೂ ಪರಿಣಾಮ ಕಂಡುಬಂದಿದೆ. ಮತ್ಯಕ್ಷಾಮ ಈ ಬಾರಿ ಕಾಣುತ್ತಿದೆ. ಮತ್ಸ್ಯಕ್ಷಾಮಕ್ಕೆ ತಲೆದೋರಲು ಪ್ರಮುಖ ಕಾರಣ ಇತ್ತೀಚೆಗೆ ಕಾಡುತ್ತಿರುವ ಹವಾಮಾನ ವೈಪರೀತ್ಯ.

ಕರಾವಳಿ(Coastal)ಮಾತ್ರವಲ್ಲ ಇಡೀ ದೇಶ ಮೀನನ್ನು ಆಹಾರವಾಗಿ(Fish food) ಉಪಯೋಗಿಸುತ್ತಾರೆ. ಅದರಲ್ಲೂ ಕರಾವಳಿ ತೀರದ ಮಂದಿ ಜಾಸ್ತಿ ಇದನ್ನು ಕಸುಬಾಗಿ(career) ನೆಚ್ಚಿಕೊಂಡಿದ್ದಾರೆ. ಮತ್ಸೋದ್ಯಮ(Fisheries) ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ. ವರ್ಷಕ್ಕೆ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತದೆ. ಜೊತೆಗೆ ರಫ್ತಿನಲ್ಲೂ(Export) ಮೇಲುಗೈ ಸಾಧಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಯ  ಸಮುದ್ರದಲ್ಲಿ(Ocean)  ಮತ್ಸ್ಯಕ್ಷಾಮದ ಭೀತಿ ಎದುರಾಗಿದೆ. ಮೀನುಗಾರಿಕೆಯ (Fishing) ಖರ್ಚುವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗದೆ ಬೋಟುಗಳು ಅವಧಿಗೆ ಮುನ್ನವೇ ಕಡಲ ಕಿನಾರೆಯಲ್ಲಿ ಲಂಗರು ಹಾಕಲು ಆರಂಭಿಸಿದೆ. ಕಳೆದೊಂದು ತಿಂಗಳಿನಿಂದ ಪರ್ಸಿನ್ ಬೋಟ್‍ಗಳು ಸಮುದ್ರಕ್ಕಿಳಿಯುತ್ತಿಲ್ಲ. ಮತ್ಸ್ಯಕ್ಷಾಮಕ್ಕೆ ತಲೆದೋರಲು ಪ್ರಮುಖ ಕಾರಣ ಇತ್ತೀಚೆಗೆ ಕಾಡುತ್ತಿರುವ ಹವಾಮಾನ ವೈಪರೀತ್ಯ(weather extremes).

Advertisement

ಮಳೆ ಇಲ್ಲದಿರುವುದೇ ಕಾರಣ : ಈ ಬಾರಿ ಮಳೆಗಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಕಾಲ. ಈ ವೇಳೆ ಮಳೆ ನೀರಿನೊಂದಿಗೆ ಆಹಾರವೂ ಸಮುದ್ರ ಸೇರುತ್ತದೆ. ಆದರೆ ಮುಂಗಾರು ಕ್ಷೀಣಗೊಂಡಿದ್ದಲ್ಲದೇ, ಮೀನು ಸಂತತಿ ದಡದ ಬಳಿಗೆ ಬರಲು ಪೂರಕವಾಗುವಂತೆ ಸಮುದ್ರ ಮಂಥನವಾಗದಿರುವುದು ಮತ್ಸ್ಯಕ್ಷಾಮಕ್ಕೆ ಕಾರಣವಾಗಿದೆ.

ಅವೈಜ್ಞಾನಿಕ ಮೀನುಗಾರಿಕೆ : ಕೈಗಾರಿಕೆಗಳ ಕಲುಷಿತ ನೀರು ಸೇರಿದಂತೆ ಹಲವಾರು ಕಾರಣಗಳಿಂದ ಸಮುದ್ರ ಮಲೀನವಾಗುತ್ತಿದೆ. ಅಲ್ಲದೆ ಅವೈಜ್ಞಾನಿಕ ಮೀನುಗಾರಿಕೆಯು ಮತ್ತ್ಯಕ್ಷಾಮಕ್ಕೆ ಕಾರಣವಾಗುತ್ತಿದೆ. ಜೂನ್, ಜುಲೈನಲ್ಲಿ ಎರಡು ತಿಂಗಳ ಆಳ ಸಮುದ್ರ ಮೀನುಗಾರಿಕೆ ಸ್ಥಗಿತದ ಬಳಿಕ ಆಗಸ್ಟ್‍ನಿಂದ ಮೀನು ಹೇರಳವಾಗಿ ಸಿಗುವ ಕಾಲ. ಅದರಲ್ಲೂ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗೆ ಯಥೇಚ್ಛವಾಗಿ ಮೀನುಗಳು ಸಿಗುವ ಸಮಯ. ಆದರೆ ಈ ಅವಧಿಯಲ್ಲೇ ಮತ್ಸಕ್ಷಾಮ ಎದುರಾಗಿರುವುದು ಮೀನುಗಾರರಲ್ಲಿ ಮಾತ್ರವಲ್ಲದೆ, ಮೀನುಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ.

ಮಂಜುಗಡ್ಡೆ ಸಮಸ್ಯೆ : ಈ ಬಾರಿಯ ಮೀನುಗಾರಿಕಾ ಋತು ಆರಂಭಗೊಂಡಾಗ ಮೀನುಗಾರರು ಮಂಜುಗಡ್ಡೆ ಸಮಸ್ಯೆಯನ್ನು ಎದುರಿಸಿದ್ದರು. ಸದ್ಯ ಒಂದು ತಿಂಗಳಿನಿಂದ ಬೋಟ್‍ಗಳು ಸಾಕಷ್ಟು ಮೀನು ಸಿಗದೇ ವಾಪಸಾಗುತ್ತಿವೆ. ಅಲ್ಲದೆ ರಪ್ತಾಗುವ ಮಾಂಜಿ, ಅಂಜಲ್, ಮದಿಮಲ್ ಮೀನುಗಳ ಕೊರತೆಯಿಂದ ಮೀನುಗಾರರ ಜೇಬು ತುಂಬುತ್ತಿಲ್ಲ. ಇದರಿಂದ ದೋಣಿಗಳನ್ನು ಸಮುದ್ರಕ್ಕಿಳಿಸಲು ದೋಣಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಬೋಟ್‍ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದಾರೆ.

ಸೀಸನ್ ಕಾಲದಲ್ಲಿಯೇ ಮತ್ಸ್ಯಕ್ಷಾಮಕ್ಕೆ ಕಾರಣವಾಗಿ ಬೋಟ್‍ಗಳು ಅವಧಿಗೆ ಮುನ್ನವೇ ಲಂಗರು ಹಾಕಿದ್ದು, ಬೋಟ್ ಮಾಲೀಕರು, ಕಾರ್ಮಿಕರನ್ನು ಕಂಗೆಡಿಸುವಂತೆ ಮಾಡಿದೆ. ಮೀನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದ ಕಡಲ ಮಕ್ಕಳು ಅತಂತ್ರರಾಗಿದ್ದಾರೆ. ಕರಾವಳಿಯ ಆರ್ಥಿಕತೆಯ ಜೀವನಾಡಿಯಾದ ಮತ್ಸ್ಯೋದ್ಯಮವೇ ಕುಸಿದಿದ್ದು ಸರಕಾರ ನೆರವಿಗೆ ಬರಬೇಕಾಗಿದೆ.

here is a threat of fish famine in the coastal ocean. Unable to cover the cost of fishing, the boats have started anchoring at the seashore before the season. Persin boats are not entering the sea for the last one month. The main reason for the fish famine is the recent weather extremes.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group