#titanicsubmarine | ಅವಶೇಷ ನೋಡಲು ಹೋಗಿ ಸಾವಿನ ಮನೆ ಸೇರಿದ ಐವರು ಉದ್ಯಮಿಗಳು | ಅಮೆರಿಕಾ ಕೋಸ್ಟ್ ಗಾರ್ಡ್ ಸ್ಪಷ್ಟನೆ |

June 24, 2023
9:41 AM

ಇದನ್ನು ಗಟ್ಟಿತನ, ಧೈರ್ಯ ಅನ್ನಬೇಕೋ, ಹವ್ಯಾಸ ಅಂತ ಹೇಳಬೇಕೋ, ಅಥವಾ ಹುಚ್ಚುತನ, ದುಡ್ಡಿನ ಮದ ಅನ್ನಬೇಕೋ ಏನುಂತ ಗೊತ್ತಾಗುತ್ತಿಲ್ಲ. ಆದ್ರೆ ಹೋದ ಪ್ರಾಣ ಮತ್ತೆ ಬರಲ್ಲ. ಇವರನ್ನೇ ನಂಬಿದ್ದ ಜನ, ಕುಟುಂಬ ಈಗ ಪರಿತಪಿಸುವಂತಾಗಿದೆ.

ವಿಶ್ವವಿಖ್ಯಾತ ಟೈಟಾನಿಕ್ ಹಡಗು #TitanicShip ಮುಳುಗಿದ ಸ್ಥಳದಲ್ಲಿ ಅದರ ಅವಶೇಷ  ನೋಡಲು ತೆರಳಿದ್ದ ಐವರು ಮೃತಪಟ್ಟಿರುವ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ ಐವರು ತೆರಳಿದ್ದರು. ಈ ವೇಳೆ ಸ್ಛೋಟಗೊಂಡು ಐವರು ನಾಪತ್ತೆಯಾಗಿದ್ದರು. ಇದೀಗ ಈ ಐವರು ಮೃತಪಟ್ಟಿರುವುದಾಗಿ ಅಮೆರಿಕಾ ಕೋಸ್ಟ್ ಗಾರ್ಡ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement
Advertisement

ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಐವರೂ ಸಾವು ;ಉತ್ತರ ಅಟ್ಲಾಂಟಿಕ್ ಸಾಗರದ ಮೇಲ್ಮೈಯಿಂದ 3,800 ಮೀಟರ್‌ಗಳಷ್ಟು ಕೆಳಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಐವರು ಬಿಲಿಯನೇರ್‌ ಉದ್ಯಮಿಗಳು ಮತ್ತು ಪರಿಶೋಧಕರು ತೆರಳಿದ್ದರು. ಆದರೆ ಅವರೆಲ್ಲ ಮಿಸ್ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅವರೆಲ್ಲ ಸಾವನ್ನಪ್ಪಿದ್ದಾರೆ ಅಂತ ಅಮೆರಿಕಾ  ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ. ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ನಿರ್ವಹಿಸುವ ಟೈಟಾನ್ ಸಬ್‌ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿದೆ ಎಂದು ತಿಳಿಸಿದೆ.

Advertisement

ಈ ಐವರು ಬ್ರಿಟನ್ ಹಾಗೂ ಪಾಕಿಸ್ತಾನದ ಉದ್ಯಮಿಗಳು ಎನ್ನಲಾಗಿದೆ. ಬಿಲಿಯನೇರ್ ಮತ್ತು ಅನ್ವೇಷಕರಾಗಿದ್ದ ಹಮೀಶ್ ಹಾರ್ಡಿಂಗ್​, ಫ್ರೆಂಚ್ ಪರಿಶೋಧಕ ಪಾಲ್ ಹೆನ್ರಿ ನರ್ಜಿಯೊಲೆಟ್ ಹಾಗೂ ಪ್ರಮುಖ ಪಾಕಿಸ್ತಾನಿ ಕುಟುಂಬದ ಸದಸ್ಯರಾದ ಶಹಜಾದಾ ದಾವೂದ್ ಮತ್ತು ಅವನ ಮಗ ಸುಲೇಮಾನ್ ದಾವೂದ್ ಮತ್ತು  ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಿಎಒ ಎಂದು ತಿಳಿದುಬಂದಿದೆ.

ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು.

Advertisement

ಜಲಂತರ್ಗಾಮಿ ನಾಪತ್ತೆಯಾದ ಕ್ಷಣದಿಂದ ಅಂದರೆ ಕಳೆದ 3-4 ದಿನದಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಿರಂತರವಾಗಿ ಅವರನ್ನು ಹುಡುಕುವ ಪ್ರಯತ್ನ ಮಾಡಲಾಗಿತ್ತು. ಆದರೆ ಅವರ ಪತ್ತೆಯೇ ಆಗಿರಲಿಲ್ಲ. ನಾಪತ್ತೆಯಾದ ಜಲಾಂತರ್ಗಾಮಿಯಲ್ಲಿ ನಿನ್ನೆ ಸಂಜೆ 7.15ರ ತನಕ ಸಾಕಾಗುವಷ್ಟು ಮಾತ್ರ ಆಮ್ಲಜನಕ ಬಾಕಿ ಇತ್ತು.

1912ರಲ್ಲಿ ಮುಳುಗಿದ್ದ ವಿಶ್ವವಿಖ್ಯಾತ ಟೈಟಾನಿಕ್ ಹಡಗು ;ವಿಶ್ವವಿಖ್ಯಾತ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಮಹಾ ಸಾಗರದಲ್ಲಿ ಮುಳುಗಿತ್ತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಇದೀ ಹೆಸರಲ್ಲಿ ಸಿನಿಮಾ ನಿರ್ಮಾಣವಾಗಿ, ಜಗತ್ತಿನಾದ್ಯಂತ ಜನಪ್ರಿಯವಾಗಿದ್ದು ಈಗ ಇತಿಹಾಸ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ
ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ
November 25, 2024
8:07 PM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ
November 25, 2024
8:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror