ಮೈಸೂರು ಅರಮನೆ(Mysore Palace) ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು(Fruit and Flower Show) ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನ- 2023 ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು(CM Siddaramayya) ಉದ್ಘಾಟಿಸಿದ್ದರು. ವಿಶೇಷವಾಗಿ ಹೂವುಗಳಿಂದ ಅನೇಕ ಆಕೃತಿಗಳನ್ನು ಆಕರ್ಷಕವಾಗಿ ತಯಾರಿಸಿ ಇಡಲಾಗಿದೆ. ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಕಳೆಗಟ್ಟಿದೆ. ಪ್ರದರ್ಶನದಲ್ಲಿ ಜಿಲ್ಲೆಯ ಪ್ರಮುಖ ಆಕರ್ಷಕ ಕೇಂದ್ರಗಳಾದ ಸೋಮನಾಥೇಶ್ವರ ದೇವಾಲಯ, ಸಿರಿ ಧಾನ್ಯದಿಂದ ನಿರ್ಮಿಸಿದ ಮಲೆ ಮಹದೇಶ್ವರ ಪ್ರತಿಮೆ, ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ವಿಗ್ರಹ, ಬ್ರಾಂಡ್ ಮೈಸೂರು ಲೋಗೋ, 8 ಬಾರಿ ಅಂಬಾರಿ ಹೊತ್ತ ಅರ್ಜುನ ಅನೆ ಆಕೃತಿ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಕೆಂಪ ನಂಜಮ್ಮಣಿ, ಶ್ರಿ ಕಂತ ದತ್ತ ಒಡೆಯರ್, ಮೈಸೂರು ಅರಮನೆ ಮಂಡಳಿ, ಹಾಗೂ ವಿವಿಧ ರೀತಿಯ ಪ್ರಾಣಿಗಳ ಪ್ರತಿಮೆಗಳು ಕಂಡುಬಂದವು. ಅದರ ಜತೆಗೆ ಇನ್ನಷ್ಟು ಕಲಾಕೃತಿಗಳು ಕೂಡಾ ಪ್ರವಾಸಿಗರಿಗೆ ಮುದ ನೀಡುತ್ತಿದೆ.
ಸೋಮನಾಥಪುರ ಚನ್ನಕೇಶವ ದೇವಾಲಯವನ್ನು ಕೆಂಗುಲಾಬಿ, ಚೆಂಡು ಹೂ ಹಾಗೂ ವಿವಿಧ ಬಗೆಯ ಗುಲಾಬಿಗಳಿಂದ 50 ಅಡಿ ಅಗಲ, 20 ಅಡಿ ಉದ್ದ, 28 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.ಇನ್ನು ಅಂಬೇಡ್ಕರ್, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ ಹೂವಿನ ಕಲಾಕೃತಿಗಳು ಭಾರೀ ಆಕರ್ಷಿಸುತ್ತಿವೆ. ಮಕ್ಕಳಿಗಂತೂ ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಭಾರೀ ಮುದ ನೀಡುತ್ತಿದೆ. ಹೀಗೆ 4 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಸಿಕೊಂಡು ನೂರಾರು ಕಲಾಕೃತಿಗಳನ್ನು ರಚಿಸಲಾಗಿದೆ.
– ಅಂತರ್ಜಾಲ ಮಾಹಿತಿ