ಭಾರತದಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ವಿದೇಶದಲ್ಲೂ ತಲೆನೋವು…! |

July 16, 2024
9:41 PM

ಭಾರತದ ಅಡಿಕೆ ಬೆಳೆ ವಿಸ್ತರಣೆ ಹಾಗೂ ಇಲ್ಲಿನ ಅಡಿಕೆ ಮಾರುಕಟ್ಟೆಯ ಬಗ್ಗೆ ವಿದೇಶಗಳಲ್ಲೂ ಚರ್ಚೆ, ತಲೆನೋವಾಗುತ್ತಿದೆ. ಇಂಡೋನೇಶ್ಯಾದಲ್ಲಿ ಅಡಿಕೆ ರಫ್ತು ಪ್ರಕ್ರಿಯೆಗೆ ಚಾಲನೆ ನೀಡಿದ ವಾಣಿಜ್ಯ ಸಚಿವ ಜುಲ್ಕಿಫ್ಲಿ ಹಸನ್, ಅಡಿಕೆಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ, ನಮ್ಮ ಬೆಲೆಗಳು ಭಾರತದ ಮೇಲೆ ಅವಲಂಬಿತವಾಗಿವೆ, ಈಗ ಅವರು ದೇಶೀಯವಾಗಿ ಸಾಕಷ್ಟು ಉತ್ಪಾದನೆಯನ್ನು ಹೊಂದಿದ್ದಾರೆ , ಇದು ನಮ್ಮ  ಸವಾಲು” ಎಂದು ಅವರು ಹೇಳಿದರು. 

ಇಂಡೋನೇಶ್ಯಾದ ಜಂಬಿ ಪ್ರಾಂತ್ಯದಿಂದ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶಕ್ಕೆ ಅಡಿಕೆ ಮತ್ತು ಇತರ ಕೆಲವು ಕೃಷಿ ಉತ್ಪನ್ನಗಳ ರಫ್ತು ವಹಿವಾಟು ಪ್ರಕ್ರಿಯೆಗೆ ಚಾಲನೆ ನೀಡಿದರು. ಜಂಬಿ ಪ್ರದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.  ಹೀಗಾಗಿ ಇಲ್ಲಿನ ಅಡಿಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು ಎಂದು ಬಯಸುತ್ತೇನೆ.ವಿಶ್ವದ ಅಡಿಕೆ ಪೂರೈಕೆಯ 35 ಪ್ರತಿಶತವನ್ನು ಹೊಂದಿದೆ ಎಂದು ಅವರು ಗಮನಿಸಿದರು. ಆದ್ದರಿಂದ ಇಂಡೋನೇಷ್ಯಾ ಈ ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದು ಸಚಿವರು ಅಲ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಾಗರೋತ್ತರ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಮೂಲಕ, ರಫ್ತಿಗೆ ನೆರವು ನೀಡುವ ಮೂಲಕ  ಅಡಿಕೆ ಉತ್ಪನ್ನಗಳು ಸೇರಿದಂತೆ ರಾಷ್ಟ್ರೀಯ ರಫ್ತುಗಳನ್ನು ಬೆಂಬಲಿಸಲು ವ್ಯಾಪಾರ ಸಚಿವಾಲಯವು ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಅಡಿಕೆ ಬೆಲೆಯಲ್ಲಿನ ಪ್ರಸ್ತುತ ಕುಸಿತಕ್ಕೂ ಕಾರಣವಿದೆ, ಬಳಕೆ ಮಾಡುವ ದೇಶದಲ್ಲೂ ಈಗ ಅಡಿಕೆ ಹೆಚ್ಚಾಗಿ ಬೆಳೆಯಲಾಗುತ್ತಿದೆ ಎಂದು ಹಸನ್ ಅಲ್ಲಿನ ಜನರಿಗೆ ಮನವರಿಕೆ ಮಾಡಿದ್ದಾರೆ. ಅಡಿಕೆ ಬೆಲೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಿದ್ದೇವೆ. ನಾನು ಭಾರತೀಯ ವಾಣಿಜ್ಯ ಸಚಿವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಭಾರತವು ಅಡಿಕೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ, ನಮ್ಮ ಬೆಲೆಗಳು ಅವುಗಳ ಮೇಲೆ ಅವಲಂಬಿತವಾಗಿವೆ, ಈಗ ದೇಶೀಯವಾಗಿ ಅಡಿಕೆ ಉತ್ಪನ್ನಗಳನ್ನು ಹೊಂದಿದ್ದಾರೆ, ಅದು ನಮ್ಮ ಮುಂದಿರುವ ಸವಾಲು. ಆದಾಗ್ಯೂ, ಸಚಿವಾಲಯವು ವ್ಯಾಪಾರ ರಾಜತಾಂತ್ರಿಕತೆಯನ್ನು ಮುಂದುವರಿಸುತ್ತದೆ ಎಂದು ಅವರು ಭರವಸೆ ನೀಡಿದರು  ಎಂಬುದು ವರದಿ.

Indonesian Trade Minister Zulkifli Hasan on Saturday, released export consignments of arecanuts  from Jambi province to Saudi Arabia and Bangladesh. “the export of arecanut commodities in Kumpeh, Muaro Jambi. This area is known as one of the largest arecanut production centers in Jambi. Hence, I want to ensure that this mainstay commodity can compete in the international market, he said.

Source : Indonesia media

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!
March 18, 2026
1:40 PM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ
March 18, 2026
7:15 AM
by: ದ ರೂರಲ್ ಮಿರರ್.ಕಾಂ
ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ
March 18, 2026
6:51 AM
by: ಮಿರರ್‌ ಡೆಸ್ಕ್
ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು
March 18, 2026
6:44 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror