Advertisement
ಸುದ್ದಿಗಳು

ಮೇವು ಪೂರೈಸಿದರೂ ಬಿಲ್‌ ನೀಡಿಲ್ಲ..! | ಪ್ರಧಾನಿಗೆ ಪತ್ರ ಬರೆದ ಚಿಕ್ಕಬಳ್ಳಾಪುರದ ಉದ್ಯಮಿ |

Share

ರಾಜ್ಯದಲ್ಲಿ  ಮತ್ತೆ ಕಮಿಶನ್‌ ವ್ಯವಹಾರ ಸದ್ದು ಮಾಡುತ್ತಿದೆ. ಗುತ್ತಿಗೆದಾರರ ಸಂಘವು ಕಮಿಶನ್‌ ವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಮೇವು ವ್ಯವಹಾರದಲ್ಲೂ ಕಮಿಶನ್‌ ಬಗ್ಗೆ ಆರೋಪ ಬಂದಿದೆ. ಈ ಬಗ್ಗೆ ಉದ್ಯಮಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.

Advertisement
Advertisement

ಬೆಳಗಾವಿಯ ಸಂತೋಷ್ ಅವರು ಕಮಿಶನ್‌ ಆರೋಪ ಮಾಡಿ ಉಡುಪಿಯಲ್ಲಿ ಆತ್ಮಹತ್ಯೆ‌ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಕಮಿಶನ್‌ ವ್ಯವಹಾರವು ಬಹುದೊಡ್ಡ ಸದ್ದು ಮಾಡಿದೆ. ಗುತ್ತಿಗೆದಾರರ ಸಂಘವು ಕಮಿಶನ್‌ ವ್ಯವಹಾರದ ಬಗ್ಗೆ ನೇರ ಆರೋಪ ಮಾಡಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಬಹುಕೋಟಿ ಮೇವು ಹಗರಣ ಸದ್ದು‌ ಮಾಡಿದೆ. ಮೇವು ಪೂರೈಸಿದರೂ ಕಮಿಷನ್ ಕಾರಣ ನೀಡಿ ಬಿಲ್ ನೀಡಿಲ್ಲ ಎಂದು ಹರ್ಷ ಅಸೋಸಿಯೇಟ್ಸ್​ನ ಜಿ.ಎಂ ಸುರೇಶ್ ಎಂಬವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಇದೀಗ ತಾನು ಸಾಲಕ್ಕೆ ಸಿಲುಕಿಕೊಂಡಿದ್ದು, ಪ್ರಾಣಕ್ಕೆ ಹಾನಿಯಾದರೆ ಇದೇ ಕಾರಣ ಎಂದು ಹೇಳಿದ್ದಾರೆ‌.

Advertisement

ಸುರೇಶ್ ಅವರು ರೈತರಿಂದ ಮೇವು ಖರೀದಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ 591 ಟನ್ ಮೇವು ಸರಬರಾಜು ಮಾಡಿದ್ದರು. ಆದರೆ ಕಮಿಷನ್ ಆಸೆಗಾಗಿ ಬೇಕೆಂದೇ ಬಿಲ್ ವಿಳಂಬ ಮಾಡುತ್ತಿದ್ದಾರೆ. ಹಳೇ ಡೇಟ್ ಗೆ ಪ್ರೊಸೀಡಿಂಗ್ಸ್ ಮಾಡಿ ಅನ್ಯಾಯ ಮಾಡಿದ್ದಾರೆ. ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಬರಬೇಕಾದ ಬಿಲ್ ಬಂದಿಲ್ಲ. 3 ಲೋಡ್ ಮೇವಿಗೆ ಒಂದು ಲೋಡ್ ಮೇವಿನ ದರ ನೀಡುತ್ತಿದ್ದಾರೆ. ಇದಕ್ಕಾಗಿ ಹೇಳೇ ಡೇಟ್ ಗೆ ದಾಖಲೆ ತಯಾರಿಸಿದ್ದಾರೆ ಎಂದು ಸುರೇಶ್ ಪತ್ರದಲ್ಲಿ ಆರೋಪಿಸಿದ್ದಾರೆ.

ಆದರೆ, ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಪಶಸಂಗೋಪನೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಡಾ.ರವಿ ಅವರು ‘ಸುರೇಶ್ ಅವರು ಒಣ ಮೇವಿನ ಬದಲು ಹಸಿ ಮೇವನ್ನು ಪೂರೈಸಿದ್ದರು. 1 ಕೆಜಿ ಒಣ ಮೇವು, 3 ಕೆ.ಜಿ ಹಸಿ ಮೇವಿಗೆ ಸಮವಾಗುತ್ತದೆ. ಇದೇ ರೀತಿ ಡಿಸಿ ಆಫೀಸ್​​ನಿಂದ ಪೇಮೆಂಟ್ ಮಾಡಿದ್ದಾರೆ. ಆದ್ರೆ ಹೆಚ್ಚು ಪೇಮೆಂಟ್​ ಬೇಕೆಂದು ಸುರೇಶ್ ಅವರು ದೂರು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |

ಮಿಲ್ಲೆಟ್ಸ್‌ ಬೆಳೆಯ ಕಾರಣದಿಂದ ನೀರಿನ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೃಷಿ ಉಳಿಸುವ, ಮಣ್ಣಿನ…

20 mins ago

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

20 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago