#BPL Card | ರೇಷನ್​​ ಕಾರ್ಡ್​​​ದಾರರಿಗೆ ಸಿಹಿ ಸುದ್ದಿ​ ಕೊಟ್ಟ ಆಹಾರ ಸಚಿವ ಕೆ.ಎಚ್ ಮುನಿಯಪ್ಪ : ಕಾರ್‌ ಹೊಂದಿದವರ ಬಿಪಿಎಲ್‌ ಕಾರ್ಡ್‌ ಸದ್ಯಕ್ಕೆ ರದ್ದಾಗಲ್ಲ

August 26, 2023
10:30 PM
ಬಿಪಿಎಲ್ ಇದ್ದವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ನನ್ನ ಗಮನಕ್ಕೂ ಈ ವಿಚಾರ ಬಂದಿದೆ. ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ‌ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮೊದಲು ಬಿಪಿಎಲ್ ಕಾರ್ಡ್ ಅರ್ಹತೆ ಬಗ್ಗೆ ಪರಿಶೀಲನೆ ಮಾಡುತ್ತೇವೆ.

ಕಾಂಗ್ರೆಸ್‌ ಸರ್ಕಾರದ ಉಚಿತ ಯೋಜನೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಡಿತರ ಚೀಟಿ ಮಾಡಿಸಲು ಹೆಚ್ಚಿನ ಜನ ಅರ್ಜಿ ಹಾಕುತ್ತಿದ್ದಾರೆ. ಎಲ್ಲದಕ್ಕೂ ದಾಖಲಾತಿಯಾಗಿ ರೇಷನ್‌ ಕಾರ್ಡ್‌ ಕಡ್ಡಾಯವಾಗಿರೋದ್ರಿಂದ  ರೇಷನ್​ ಕಾರ್ಡ್​​ಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದ್ದು, ಸದ್ಯ ಹೊಸ ಕಾರ್ಡ್​​ಗಳನ್ನು ಕೊಡಲು ಆರ್ಥಿಕ ಇಲಾಖೆ ಅನುಮತಿ ನೀಡಬೇಕಿದೆ.

Advertisement

 ಬಿಪಿಎಲ್​​​ ಕಾರ್ಡ್​​ ಹೊಂದಿರುವ ಕುಟುಂಬಸ್ಥರು ವೈಟ್​​ ಬೋರ್ಡ್​ ಕಾರ್ಡ್​ ಹೊಂದಿದ್ದರೆ ರೇಷನ್​ ಕಾರ್ಡ್​ ರದ್ದು ಮಾಡಲಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಈ ಬಗ್ಗೆ ನಾವು ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಆಹಾರ ಸಚಿವರು, ರೇಷನ್​ ಕಾರ್ಡ್​​ಗಾಗಿ ಒಂದು ವರ್ಷದಿಂದ ಪೆಂಡಿಂಗ್ ಇರುವ 3 ಲಕ್ಷ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡುತ್ತೇವೆ. ಅರ್ಹ ಫಲಾನುಭವಿಗಳನ್ನು ಪರಿಶೀಲಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದರು. ಈ ಹಿಂದೆ 21 ಲಕ್ಷ ಕಾರ್ಡ್‌ಗೆ ಬ್ಯಾಂಕ್ ‌ಅಕೌಂಟ್ ಇರಲಿಲ್ಲ. 14 ಲಕ್ಷ ಬ್ಯಾಂಕ್ ‌ಅಕೌಂಟ್ ಲಿಂಕ್ ಆಗಿದೆ‌, ಇನ್ನು 7 ‌ಲಕ್ಷ ಆಗಬೇಕು. ಕೂಡಲೇ ಉಳಿದ ಲಿಂಕ್ ಮಾಡಲಾಗುತ್ತೆ ಎಂದು ಮುನಿಯಪ್ಪ ತಿಳಿಸಿದ್ದಾರೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-03-2025 | ಕೆಲವು ಕಡೆ ಇಂದೂ ಮಳೆ | ಎ.2 ರಿಂದ ಮುಂಗಾರು ಪೂರ್ವ ಮಳೆಯ ಲಕ್ಷಣ |
March 28, 2025
3:02 PM
by: ಸಾಯಿಶೇಖರ್ ಕರಿಕಳ
ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |
March 28, 2025
8:12 AM
by: ಮಹೇಶ್ ಪುಚ್ಚಪ್ಪಾಡಿ
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಹೇಮಕುಂಡ್ ಯಾತ್ರೆಗೆ ನೋಂದಾವಣೆ
March 28, 2025
8:00 AM
by: The Rural Mirror ಸುದ್ದಿಜಾಲ
ಹೇಮಾವತಿ ನದಿ ನೀರಿಗೆ ವಿಷ ಸೇರ್ಪಡೆ : ಮೀನುಗಳ ಸಾವು
March 28, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group