ಆಹಾರ ಕಲಬೆರಕೆ | ಹೊರಗೆ ತಿನ್ನುವ ಮುಂಚೆ ಈ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ

July 1, 2024
11:25 AM

ನಿನ್ನೆ ಪತ್ನಿ ಅಂಗಡಿಯಿಂದ(Shop) ಗಿಣ್ಣು ತರಿಸಿದ್ದಳು.. ರಾತ್ರಿ ಟಿವಿ ನೋಡುತ್ತಿದ್ದಾಗ ಅದನ್ನು ಕುಯ್ದು ಬರ್ಫಿಯಂತೆ ತುಂಡು ಮಾಡಿಕೊಂಡೆವು. “ಇದು ಎಷ್ಟು ರುಚಿಯಾಗಿದೆ(Taste) ಅಲ್ವಾ?” ಎಂದಳು. ಹೌದು.. ಚೆನ್ನಾಗಿದೆ.. ಹಾಲಿನಲ್ಲಿ(Milk) ಜಿಲಾಟಿನ್(Gelatin) ಬೆರಸಿ ಅದರಿಂದ ಮಾಡಿದ ಗಿಣ್ಣನ್ನು ಮೊದಲ ಚಮಚದಲ್ಲೇ ಗುರುತಿಸಿದೆ.. ಆದರೆ ನನ್ನ ಹೆಂಡತಿಯ ಮುಂದೆ ನಾನು ಚೆನ್ನಾಗಿದೆ ಎಂದು ಹೇಳಬೇಕಾಗಿತ್ತು..

Advertisement
Advertisement

ನಮ್ಮ ಗೋಶಾಲೆಯಲ್ಲಿ (ಒಂದು ಕಾಲದಲ್ಲಿ) ಒಂದು ವರ್ಷದಲ್ಲಿ 4/5 ಎಮ್ಮೆಗಳು ಕರು ಹಾಕುತ್ತಿದ್ದವು. ತದನಂತರ ಅಮ್ಮ/ಅಜ್ಜಿ ವಿವಿಧ ಬಗೆಯ ಗಟ್ಟಿ ಗಿಣ್ಣು, ತೆಳು ಗಿಣ್ಣು, ಗಿಣ್ಣಿನ ಬರ್ಫಿಗಳನ್ನು ಮಾಡುತ್ತಿದ್ದರು. ಈ ಗಿಣ್ಣು ತಯಾರಕರು ಪ್ರತಿದಿನ 200/250 ಕೆಜಿ ಗಿಣ್ಣನ್ನು ತಯಾರಿಸುತ್ತಾರೆ. ದಾದರ್ ವರೆಗೆ ಅನೇಕ “ಹೋಟೆಲ್‌ಗಳಿಗೆ” ಅದನ್ನು ಒದಗಿಸಲಾಗುತ್ತದೆ. ಈಗ ಯೋಚಿಸಿ, 200 ಕೆಜಿ. ಶುದ್ಧವಾದ ಗಿಣ್ಣನ್ನು ಮಾಡಲು ಕನಿಷ್ಠ 200 ಕೆಜಿ ಗಿಣ್ಣು ಹಾಲು ಬೇಕಾದರೆ ಪ್ರತಿದಿನ ಕನಿಷ್ಠ 80-100 ಎಮ್ಮೆಗಳು ಕರು ಹಾಕಬೇಕು, ಅದಕ್ಕೆ ದನದ ಕೊಟ್ಟಿಗೆಯಲ್ಲಿ ಕನಿಷ್ಠ 5000 ಎಮ್ಮೆಗಳು ಬೇಕು. ಮುಂಬೈ ನಗರದಲ್ಲಿ ಇಂತಹ ಅನೇಕ ಗಿಣ್ಣು ತಯಾರಕರು ಇದ್ದಾರೆ. ನನಗಂತೂ ಇದು ಕೇವಲ ಅಸಾಧ್ಯ ಎಂದೆನಿಸುತ್ತದೆ!…..

ಇಷ್ಟು ಎಮ್ಮೆಗಳನ್ನು ಸಾಕಿ ಅವುಗಳ ಆರೈಕೆ ಮಾಡುವ ಬದಲು ಅವನು ದನದ ಕೊಟ್ಟಿಗೆಯನ್ನು ಮಾರಿ ಸಾಕಷ್ಟು ಹಣವನ್ನು ಸಂಪಾದಿಸಬಹುದು. ಸ್ವಲ್ಪ ಹೆಚ್ಚು ಯೋಚಿಸಿದೆ, ಜೆಲಾಟಿನ್ + ಹಾಲು = ಗಿಣ್ಣು ಹಾಲು ಸಿದ್ಧವಾಯಿತು..! ಗಿಣ್ಣದ ಈ ಸೂತ್ರ ಅರ್ಥವಾಯಿತು! ಹಾಗೆಯೇ ಬಾಟಲಲ್ಲಿ ತುಂಬಿಸಿದ “ಉಪ್ಪಿನಕಾಯಿ” ಅದರ ಮೇಲೆ ತೇಲುವ ಎಣ್ಣೆ ನೋಡಿದ ಮೇಲೆ ನನಗೆ ಅದೇ ಅನುಮಾನ ಬಂತು..  ಅಡುಗೆ ಎಣ್ಣೆಯ ಬೆಲೆ, ಉಪ್ಪಿನಕಾಯಿಯಲ್ಲಿ ಎಣ್ಣೆಯ ಪ್ರಮಾಣ ಮತ್ತು ಉಪ್ಪಿನಕಾಯಿ ಬೆಲೆ ಹೊಂದಾಣಿಕೆಯಾಗುತ್ತಿಲ್ಲ.. ಎರಡು ಅಥವಾ ನಾಲ್ಕು ಸ್ಥಳಗಳಲ್ಲಿ ಪರೀಕ್ಷಿಸಿದೆ.. ಆಗ ಬಹಿರಂಗವಾಯಿತು. ” ಮಾರುಕಟ್ಟೆ ಉಪ್ಪಿನಕಾಯಿಯಲ್ಲಿ ಬಳಸುವ ಎಣ್ಣೆ ಅಡುಗೆ ಎಣ್ಣೆ (ಕಡಲೆ) ಅಲ್ಲ. ಆದು ಹತ್ತಿ ಬೀಜದ ಎಣ್ಣೆ..

ಮಾರುಕಟ್ಟೆಯಲ್ಲಿ ಲಸ್ಸಿ ಕುಡಿದರೆ ನನಗೆ ಸಿಟ್ರಿಕ್ ಆಮ್ಲ ನೆನಪಾಗುತ್ತದೆ. ಬ್ಲೋಟಿಂಗ್ ಪೇಪರ್ + ಸಿಟ್ರಿಕ್ ಆಸಿಡ್ = ಬೊಂಬಾಟ್ ಲಸ್ಸಿ..! ಈ ಸಿಟ್ರಿಕ್ ಆಮ್ಲವು ಮಜ್ಜಿಗೆಯನ್ನು ತಯಾರಿಸಲು ಹಾಲಿನ ಪುಡಿಯೊಂದಿಗೆ ಬರುತ್ತದೆ. ಮಜ್ಜಿಗೆ ಕುಡಿದ ನಂತರ, ನಾಲಿಗೆಗೆ ಕಹಿ ಹುಳಿ ರುಚಿ ಉಳಿದುಕೊಂಡರೆ ಸಿಟ್ರಿಕ್ ಆಮ್ಲದ ಕಲಬೆರಕೆ ಎಂದು ತಿಳಿಯಿರಿ. ಈ ಸಿಟ್ರಿಕ್ ಆಮ್ಲ + ಸುಣ್ಣ “ಪಾನಿ-ಪುರಿ”ಯಲ್ಲಿಯೂ ಕಂಡುಬರುತ್ತದೆ. ನಾವು ಸಿಟ್ರಿಕ್ ಆಮ್ಲವನ್ನು ಹುಣಸೆಹಣ್ಣು ಎಂದು ಕುಡಿಯುತ್ತೇವೆ, ಸುಣ್ಣವನ್ನು ಮೆಣಸಿನಕಾಯಿ ಎಂದು ಸೇವಿಸುತ್ತೇವೆ

ಅಣ್ಣ, ಸ್ವಲ್ಪ ಇನ್ನು ಸ್ವಲ್ಪ ಪಾನಿ.. ಎಂದು ಹೆಚ್ಚಿಗೆ ಕೇಳಿ ಪಡೆದು ಬಾಯಿ ಚಪ್ಪರಿಸಿ ಆನಂದಿಸುತ್ತೇವೆ. ಏಕೆಂದರೆ, ಈ ಎರಡೂ ರಾಸಾಯನಿಕಗಳು ಮೆಣಸಿನಕಾಯಿ ಮತ್ತು ಹುಣಸೆಹಣ್ಣುಗಳಿಗಿಂತ ಹೆಚ್ಚು ಅಗ್ಗವಾಗಿವೆ. ಬೇಸಿಗೆಯಲ್ಲಿ ಕಬ್ಬಿನ ರಸ ಒಳ್ಳೆಯದು. ಆದರೆ ಕೆಲವು ಅಂಗಡಿಯವರು ಇದರಲ್ಲಿ “ಸ್ಯಾಕರಿನ್” ಅನ್ನು ಬಳಸುತ್ತಾರೆ.. ಸ್ವಲ್ಪ ಜ್ಯೂಸ್‌ನಲ್ಲಿ ಸಾಕಷ್ಟು ನೀರು + ಸ್ಯಾಕರಿನ್ = ಬಹಳಷ್ಟು ರಸ ಮತ್ತು ಬಹಳಷ್ಟು ಲಾಭ..! ಆದರೂ ಇದು ಅಷ್ಟೊಂದು ರೂಢಿಯಲ್ಲಿಲ್ಲ. ಟೊಮೇಟೊ ಸಾಸ್ ಅನ್ನು ಕುಂಬಳಕಾಯಿಯಿಂದ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ ಹೋಟೆಲ್ಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಾಟಲಿಗಳ ರಾಶಿ ಇರುತ್ತದೆ.

Advertisement

ನೆಸ್ಲೆ / ಎಚ್.ಎಲ್.ಎಲ್. ಇತ್ಯಾದಿ ಕಂಪನಿಗಳು ಟೊಮೆಟೊದಿಂದ ಟೊಮೆಟೊ ಸಾಸ್ ತಯಾರಿಸುತ್ತಿರಬಹುದು ಎಂಬ ನಂಬಿಕೆ ಅನೇಕರಿಗಿದೆ. ಇದೆಲ್ಲಾ ಕೇವಲ ಒಂದು ಝಲಕ್ ಮಾತ್ರ..! ಕಲಬೆರಕೆಯ ಕಥೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ. ಅಲ್ಲಿಯವರೆಗೆ “ವಡಪಾವದ ಬೆಳ್ಳುಳ್ಳಿ ಚಟ್ನಿ”ಯಲ್ಲಿ ಕೊಬ್ಬರಿ/ಕಡಲೆಕಾಯಿ ಮತ್ತು ಅಷ್ಟೇ ಪ್ರಮಾಣದ ಮರದ ಸಿಪ್ಪೆಗಳು/ತುರಿದ ರಟ್ಟಿನ ಅಂಶ ಇರುವುದಿಲ್ಲವೇ?

ಹೀಗೂ ಉಂಟೆ?! ಎಂದು ಎಷ್ಟೋ ಜನ ಅಚ್ಚರಿ ಪಡುತ್ತಾರೆ. ಅನೇಕರಿಗೆ ಇದೆಲ್ಲ ನಂಬಿಕೆಯೆ ಆಗಲ್ಲ. ಇನ್ನೂ ಅನೇಕರಿಗೆ “ಅದೇನೇ ಇದ್ದರೂ ತಾವು ಹೊರಗಡೆಯಿಂದ ರುಚಿ ರುಚಿಯಾದ ಪದಾರ್ಥಗಳನ್ನು ತಿನ್ನೋದು ಬಿಡುವುದಿಲ್ಲ” ಎಂಬ ಮೊಂಡು ಹಠ ಇರುತ್ತದೆ. ಆದರೆ, ಕೆಟ್ಟ ನಂತರ ಬುದ್ದಿ ಬಂದರೆ ಏನೂ ಪ್ರಯೋಜನವಿಲ್ಲ. ಸಮಯವಿರುವಾಗ ಜಾಗರೂಕರಾದವರೆ ಜಾಣರು. ಹೊರಗೆ ತಿನ್ನುವ ಮುಂಚೆ ಈ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ ಅಥವಾ ಸಾಧ್ಯವಾದಷ್ಟು ಹೊರಗೆ ತಿನ್ನುವ ಅಭ್ಯಾಸವನ್ನು ತಪ್ಪಿಸಿ

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ,ಹೋಮಿಯೋಪತಿ ತಜ್ಞ,

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group