ದೇಶದ ಎಲ್ಲ ನಾಗರಿಕರಿಗೂ ಆಹಾರ ಭದ್ರತೆ | ಪಡಿತರ ವ್ಯವಸ್ಥೆಯ ಲೋಪ ಸರಿಪಡಿಸಲು ಕ್ರಮ

November 18, 2024
10:19 AM

ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವುದು ಸರ್ಕಾರದ ಪ್ರಮುಖ  ಕರ್ತವ್ಯವಾಗಿದೆ. ಇದಕ್ಕಾಗಿ  ಕೇಂದ್ರ ಸರ್ಕಾರ  ಪ್ರತಿವರ್ಷ  2 ಲಕ್ಷ 11 ಸಾವಿರ ಕೋಟಿ ರೂಪಾಯಿ  ವೆಚ್ಚ ಮಾಡುತ್ತಿದೆ ಎಂದು  ಕೇಂದ್ರ ಆಹಾರ ಮತ್ತು  ನಾಗರಿಕ ಪೂರೈಕೆ ಸಚಿವ  ಪ್ರಲ್ಹಾದ್ ಜೋಷಿ  ಹೇಳಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ  ಸುದ್ದಿಗಾರರೊಂದಿಗೆ ಅವರು, ನಗರ ಪ್ರದೇಶದಲ್ಲಿ  ಶೇಕಡ 50ರಷ್ಟು, ಗ್ರಾಮೀಣ ಪ್ರದೇಶದಲ್ಲಿ  ಶೇಖಡ 75ರಷ್ಟು ಜನರಿಗೆ  ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ  ಎಪಿಎಲ್  ಪಡಿತರ ಚೀಟಿಗಳನ್ನು  ರದ್ದುಪಡಿಸಲು  ಉದ್ದೇಶಿಸಿದೆ. ಇದು  ಆತಂಕಕಾರಿ ವಿಷಯವಾಗಿದ್ದು, ಯಾವುದೇ ಕಾರಣಕ್ಕೂ  ಎಪಿಎಲ್  ಪಡಿತರ ಚೀಟಿಗಳನ್ನು  ರದ್ದುಪಡಿಸದಂತೆ  ರಾಜ್ಯ ಸರ್ಕಾರವನ್ನು  ತಾವು ಒತ್ತಾಯಿಸುವುದಾಗಿ ಹೇಳಿದ್ದಾರೆ.  ಇದಕ್ಕೂ  ಮುನ್ನ  ಅವರು,  ಗಾನ ಗಂಧರ್ವ ಪಂಡಿತ್  ಅರ್ಜುನ ಸಾ ನಾಕೋಡ  ರಾಷ್ಟ್ರೀಯ ಸ್ಮಾರಕ  ಟ್ರಸ್ಟ್ ಹಾಗೂ ಕ್ಷಮತಾ ಸೇವಾ ಸಂಸ್ಥೆ ಮತ್ತು ಸ್ವರ್ಣ ಗ್ರೂಪ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ  ಸಂಗೀತ ಮಹೋತ್ಸವ-24 ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂಡಿತ್ ಬಾಲಚಂದ್ರ ನಾಕೋಡ, ಸ್ವರ್ಣ ಗ್ರೂಪ್ ಸಂಸ್ಥೆಯ ಮುಖ್ಯಸ್ಥ  ಸಿ.ಎಸ್.ವಿ.ಪ್ರಸಾದ್  ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಜಯತೀರ್ಥ್ ಮೆವುಂಡಿ  ಅವರ ತಂಡ  ಸುಮಧುರ ಗಾಯನ  ಪ್ರಸ್ತುತಪಡಿಸಿದರು.

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 05-04-2025 | ಇಂದೂ ಅಲ್ಲಲ್ಲಿ ಗುಡುಗು ಸಹಿತ ಮಳೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ ಸಾಧ್ಯತೆ |
April 5, 2025
1:02 PM
by: ಸಾಯಿಶೇಖರ್ ಕರಿಕಳ
ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ | ಮಾಜಿ ಸಚಿವ ನರಸಿಂಹ ನಾಯಕ್
April 5, 2025
12:22 PM
by: The Rural Mirror ಸುದ್ದಿಜಾಲ
2025 ರಲ್ಲಿ ಲಕ್ಷ್ಮಿ ನಾರಾಯಣ ಯೋಗ | ಮಹಾಸಪ್ತಮಿ ದಿನದ ವಿಶೇಷ ಲಾಭ
April 5, 2025
9:48 AM
by: ದ ರೂರಲ್ ಮಿರರ್.ಕಾಂ
ಹಬ್ಬದ ದಿನ 2 ಲಕ್ಷ ಸಸಿ ವಿತರಿಸಿದ ಅರಣ್ಯ ಇಲಾಖೆ
April 5, 2025
8:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group