ಕೇರಳ ರಾಜ್ಯದಲ್ಲಿ ಫುಡ್ ಪಾಯ್ಸನಿಂಗ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪಾರ್ಸೆಲ್ ಕೊಡುವ ಆಹಾರದ ಪೊಟ್ಟಣಗಳ ಮೇಲೆ ಆಹಾರ ತಯಾರಾದ ದಿನ ಹಾಗೂ ಅಂತಿಮ ದಿನದ ಅಥವಾ ಸಮಯ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿದೆ.
ಇದನ್ನು ನಮೂದಿಸಿಲ್ಲದ ಆಹಾರ ಪದಾರ್ಥಗಳನ್ನು ನಿಷೇಧಿಸಿದೆ. ಆಹಾರ ತಯಾರಿಸಿದ ದಿನಾಂಕ ಮತ್ತು ಸಮಯ, ಪ್ಯಾಕ್ ಮಾಡಲಾದ ದಿನಾಂಕ ಮತ್ತು ಸಮಯ, ಆಹಾರವನ್ನು ತಿನ್ನಬಹುದಾದ ಅಂತಿಮ ದಿನಾಂಕವನ್ನು ಪ್ರಕಟಿಸುವುದು ಕಡ್ಡಾಯ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
‘ಆಹಾರ ಸುರಕ್ಷತಾ ಮಾನದಂಡದ ನಿಯಮಗಳ ಪ್ರಕಾರ, ಬಿಸಿ ಆಹಾರಗಳನ್ನು ತಯಾರಿಸಿದ 2 ಗಂಟೆಗಳ ಒಳಗೆ ತಿನ್ನಬೇಕು. ಇಂತಹ ಆಹಾರಗಳನ್ನು ಸಾಗಿಸುವಾಗ 60 ಡಿಗ್ರಿ ಉಷ್ಣಾಂಶ ಇರುವಂತೆ ನೋಡಿಕೊಳ್ಳಬೇಕು. 2 ಗಂಟೆಗಳಿಗೂ ಹೆಚ್ಚು ಕಾಲ ಸಾಮಾನ್ಯ ತಾಪಮಾನಕ್ಕೆ ತೆರೆದಿಟ್ಟಆಹಾರ ಪದಾರ್ಥವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಸುರಕ್ಷತಾ ಚೀಟಿಗಳು ಮತ್ತು ಎಕ್ಸ್ಪೈರಿ ದಿನಾಂಕಗಳಿಲ್ಲದ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ನಿಷೇಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ .

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಪಾರ್ಸೆಲ್ ಕೊಡುವ ಆಹಾರದ ಪೊಟ್ಟಣದ ಮೇಲೆ ಮ್ಯಾನಿಫ್ಯಾಕ್ಚರ್ ಡೇಟ್ ಕಡ್ಡಾಯ"