ಸುಮಾರು ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಚೆಂಬು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು. ಮಳೆ ಹಾಗೂ ಪ್ರವಾಹದ ಕಾರಣದಿಂದ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕಡೆ ಸೇತುವೆ, ಕಾಲು ಸಂಕ ಕೊಚ್ಚಿ ಹೋಗಿತ್ತು. ಇದೀಗ ಅಂತಹ ಕಡೆಗಳಲ್ಲಿ ಸೇತುವೆ ರಚನೆ ಆಗಬೇಕಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಕನಸು ಹೊತ್ತಿರುವ ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಸಂಘ ಕಾಲು ಸಂಕ ರಚನೆ ಮಾಡಿಕೊಟ್ಟಿದೆ.
In the rural area the youth constructed a footbridge as an alternative to the bridge that was washed away by the rain. #sampaje pic.twitter.com/KYELFdT6sr
Advertisement— theruralmirror (@ruralmirror) September 11, 2022
ಕೆಲವು ತಿಂಗಳ ಹಿಂದೆ ವಿಪರೀತ ಮಳೆಯಿಂದಾಗಿ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಯು.ಪಿ.ರವೀಂದ್ರ ಇವರ ಮನೆಗೆ ಭೀಕರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಹಾನಿಯಾಗಿತ್ತು. ದಿನ ಬಳಕೆಗೆ ಉಪಯೋಗ ಮಾಡುವಂತಹ ಕಟ್ಟಿಗೆ ಸಾಮಾಗ್ರಿಗಳು ಮತ್ತು ಇತರ ಸಾಮಾಗ್ರಿಗಳು ನೀರು ಪಾಲಾಗಿತ್ತು. ಅದಲ್ಲದೆ ಈ ಮನೆಗೆ ತೆರಳುವ ಹಾಗೂ ಸಮೀಪದ ಮನೆಗೆ ತೆರಳುವ ರಸ್ತೆಯ ಹತ್ತಿರ ಇರುವ ಹೊಳೆಗೆ ಅಡ್ಡಲಾಗಿ ಸಂಪರ್ಕ ಕಾಲುಸೇತುವೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ ರವೀಂದ್ರ ಮತ್ತು ಮನೆಯವರಿಗೆ ಹಾದುಹೋಗಲು ಕಷ್ಟಕರವಾಗಿರುವುದರಿಂದ ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಸಂಘದ ವತಿಯಿಂದ ನಡೆದಾಡಲು ಕಾಲುಸೇತುವೆ ನಿರ್ಮಾಣ ಮಾಡಲಾಯಿತು.
ಈ ಶ್ರಮದಾನ ಕಾರ್ಯದಲ್ಲಿ ಪಯಸ್ವಿನಿ ಯುವಕ ಸಂಘ ಸಂಪಾಜೆ ಕೊಡಗು ಇದರ ಹಿರಿಯ ಸದಸ್ಯರುಗಳು, ಸಂಘದ ಎಲ್ಲಾ ಸದಸ್ಯರುಗಳು ಹಾಗೂ ಯು.ಪಿ.ರವೀಂದ್ರ ಮತ್ತು ಮನೆಯವರು ಭಾಗವಹಿಸಿದರು. ಯುವಕರ ಗ್ರಾಮೀಣ ಕಾಳಜಿ ಹಾಗೂ ಸೇವಾ ಮನೋಭಾವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.