MIRROR FOCUS

ಹಬ್ಬದ ದಿನ 2 ಲಕ್ಷ ಸಸಿ ವಿತರಿಸಿದ ಅರಣ್ಯ ಇಲಾಖೆ

Share

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆಯು ಹಬ್ಬದ ದಿನದಂದು ಸಸಿಗಳನ್ನು ವಿತರಿಸುವ ಪ್ರಯತ್ನ ಮಾಡಿದೆ. ಈ ಬಾರಿ ಈದ್-ಉಲ್-ಫಿತರ್‌ನಲ್ಲಿ ಸಾರ್ವಜನಿಕರಿಗೆ ವಿವಿಧ ಜಾತಿಯ ಸುಮಾರು 2 ಲಕ್ಷ ಸಸಿಗಳನ್ನು ಉಚಿತವಾಗಿ ವಿತರಿಸಿತು.……..ಮುಂದೆ ಓದಿ…..

Advertisement

ಈದ್ ನಮಾಜ್ ನಂತರ ಈದ್ಗಾಗಳು ಮತ್ತು ಮಸೀದಿಗಳ ಬಳಿ ಸಸಿಗಳನ್ನು ವಿತರಿಸಿತು, ಇದರಲ್ಲಿ ಸಮುದಾಯದ ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದರು.ಅಲ್ಲಿನ ಅರಣ್ಯ ಸಚಿವ ಜಾವೇದ್ ಅಹ್ಮದ್ ರಾಣಾ ಅವರು ಸಸಿ ವಿತರಣೆಯನ್ನು ಆಯೋಜಿಸುವಲ್ಲಿ ಅರಣ್ಯ ಅಧಿಕಾರಿಗಳ ಪ್ರಯತ್ನಗಳನ್ನು ಶ್ಲಾಘಿಸಿದರು, ಈ ಉಪಕ್ರಮವು ಪರಿಸರ ಸುಸ್ಥಿರತೆ ಮತ್ತು ಅರಣ್ಯೀಕರಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು  ಹೇಳಿದರು. ಜನರು ತಮ್ಮ ಈದ್ ಆಚರಣೆಯ ಭಾಗವಾಗಿ ಗಿಡಗಳನ್ನು ನೆಡುವ ಮೂಲಕ ಹಬ್ಬವನ್ನು ಶಾಶ್ವತವಾಗಿರಿಸಬೇಕಯ ಹಾಗೂ ಆ ನೆನಪಲ್ಲಿ  ಹಸಿರು ಮತ್ತು ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದರು.ಭವಿಷ್ಯದ ಹಸಿರೀಕರಣ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವರು ಕರೆ ನೀಡಿದರು.

ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು  ಹಸಿರನ್ನು ಹೆಚ್ಚಿಸುವಲ್ಲಿ ಗಿಡ ನೆಡುವಿಕೆಯ ಮಹತ್ವದ ಬಗ್ಗೆ ಸ್ಥಳೀಯರಿಗೆ ಶಿಕ್ಷಣ ನೀಡುವುದು ಅಗತ್ಯವಾಗಿದೆ.  ಕಾಶ್ಮೀರದ ಈ ಯೋಜನೆಯು ದೇಶದ ಎಲ್ಲಾ ಕಡೆಗೂ ಅನ್ವಯಿಸಬಹುದಾದ ಯೋಜನೆ. ಹಬ್ಬದ ದಿನದಂದು ಕನಿಷ್ಟ ಗಿಡಗಳನ್ನು ವಿತರಿಸುವುದು ಅಥವಾ ಗಿಡ ನೆಡುವ ಯೋಜನೆಯನ್ನು ಜಾರಿ ಮಾಡಬಹುದಾಗಿದೆ. ಈ ಮೂಲಕ ಹವಾಮಾನದ ವೈಪರೀತ್ಯ, ಹವಮಾನ ಬದಲಾವಣೆಯಂತಹ ಪ್ರಮುಖವಾದ ಸವಾಲುಗಳನ್ನು ಎದುರಿಸಲು ಯೋಜನೆ ರೂಪಿಸಬಹುದಾಗಿದೆ. ಹೀಗಾಗಿ ರಾಜ್ಯದಲ್ಲೂ, ಈ ಬಗ್ಗೆ ಅರಣ್ಯ ಸಚಿವರು, ಇಲಾಖೆ ಯೋಚಿಸಬಹುದಾದ ಕಾರ್ಯಕ್ರಮ ಇದಾಗಿದೆ. ಹಸಿರುವ ಉಳಿಸಲು, ಹಬ್ಬ, ಹುಟ್ಟುಹಬ್ಬ ಸೇರಿದಂತೆ ವಿವಿಧ ದಿನಗಳಲ್ಲಿ ಗಿಡ ನೆಡುವ ಹಾಗೂ ಉಳಿಸುವ ವಿಶೇಷ ಯೋಜನೆಗಳ ಅನಿವಾರ್ಯತೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…

9 minutes ago

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

19 minutes ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

28 minutes ago

ಹವಾಮಾನ ವರದಿ | 10-04-2025 | ಎ.18 ರ ತನಕವೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆ

11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

15 hours ago

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

20 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

22 hours ago