50 ವರ್ಷಗಳಿಂದ ವಾಸವಿದ್ದ ಕುಟುಂಬವನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆ – ಕಾರಣ ಏನು..?

November 4, 2025
10:56 AM

ಕುದುರೆಮುಖಿರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಅರಸಿನಮಕ್ಕಿಯಲ್ಲಿ ಕಳೆದ ಐದು ದಶಕದಿಂದಲೂ ಪಿ.ಟಿ.ಜೋಸೆಫ್ ಎಂಬವರನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದು, ಮಾತ್ರವಲ್ಲದೆ ಅವರ ಮನೆಯನ್ನು ದ್ವಂಸಗೊಳಿಸಿರುವ ಘಟನೆಯು ನಡೆದಿದೆ.

Advertisement
Advertisement

ಜೋಸೆಫ್ ಅವರ ಕುಟುಂಬ ಕಳೆದ 50 ವರ್ಷಗಳಿಂದ ವಾಸವಿದ್ದ ಮನೆಯನ್ನು ನಾಶಪಡಿಸಲಾಗಿದ್ದು, ಮಾತ್ರವಲ್ಲದೆ ಸುಮಾರು ಎರಡು ಎಕರೆ ಜಾಗದಲ್ಲಿದ್ದ ಫಲಭರಿತ ಅಡಿಕೆಮರ, ತೆಂಗಿನಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ, ಹಾಗೂ ಅರಣ್ಯ ಗಿಡಗಳನ್ನು ನೆಡಲಾಗಿದೆ.  ಆರಂಭದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಬರುವ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿತ್ತು. ಜಮೀನಿನ ದಾಖಲೆಗಳು ಇರದಿದ್ದರೂ ಕೃಷಿಗೆ ಹಾಗೂ ಮನೆಗೆ ಪರಿಹಾರ ನೀಡಿ ಹೊರಬರುವ ಕುಟುಂಬಕ್ಕೆ ಸಹಾಯಧನವನ್ನೂ ನೀಡಲಾಗುತ್ತಿತ್ತು. ಕೆಲವು ವರ್ಷಗಳಿಂದ ಪುನರ್ವಸತಿ ಪ್ಯಾಕೇಜ್ ಸ್ಥಗಿತಗೊಂಡಿದೆ. ಇದೀಗ ಯಾವ ಪರಿಹಾರಧನವೂ ನೀಡದೆ ಒಕ್ಕಲೆಬ್ಬಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ಕೃಷಿಕರು ಆರೋಪಿಸಿದ್ದಾರೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror