ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎತ್ತಿನ ಭುಜ ವ್ಯಾಪ್ತಿಯಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ವಿಧಿಸಿದೆ. ಈ ಕುರಿತಂತೆ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ನೀಡಿದೆ. ಮೂಡಿಗೆರೆ ವಲಯದ ಎತ್ತಿನ ಭುಜ ಸುತ್ತಮುತ್ತ ಮಳೆ ಹಾಗೂ ಮಂಜು ಕವಿದ ವಾತವರಣವಿದೆ. ಜೊತೆಗೆ ಕೆಲವೆಡೆ ಭೂ-ಕುಸಿತಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜುಲೈ 31 ರವರೆಗೆ ಚಾರಣ ಮಾಡುವುದನ್ನು, ಪ್ರವಾಸಿಗರು ಕಾಡಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel