ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಪರ್ವತಶ್ರೇಣಿಯ ಚಂದ್ರದ್ರೋಣ ಪರ್ವತದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು 25 ಎಕೆರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದೆ. ಸೀತಾಳಯ್ಯನಗಿರಿ ಸಮೀಪದ ಬೆಟ್ಟಕ್ಕೆ ಸೋಮವಾರ ಸಂಜೆ ಬೆಂಕಿ ಹೊತ್ತಿಕೊಂಡಿದ್ದು ಸಾಕಷ್ಟು ಜೌಷಧೀಯ ಗುಣಗಳಿರುವ ಸಸ್ಯಗಳು, ಇತರೆ ಮರಗಿಡಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು ಬೆಂಕಿ ಹತೋಟಿಗೆ ಬಂದಿದೆಯಾದರು ಪೂರ್ಣ ಪ್ರಮಾಣದಲ್ಲಿ ನಂದಿಸಲು ಸಾಧ್ಯವಾಗಿಲ್ಲ. ಪ್ರವಾಸಿಗರು ಸೇರಿದಂತೆ ಜನರು ಅರಣ್ಯ ಪ್ರದೇಶಕ್ಕೆ ತೆರಳಿ ಧೂಮಪಾನ ಮಾಡುವುದು, ಬೆಂಕಿ ಹಾಕಿ ಅಡುಗೆ ಮಾಡುವುದು ಇಂತಹ ಕೆಲಸ ಮಾಡಬಾರದು ಎಂದು ಚಿಕ್ಕಮಗಳೂರು ವಲಯ ಅರಣ್ಯ ಉಪ ಸಂರಕ್ಷಣಾ ಅಧಿಕಾರಿ ರಮೇಶ್ ಬಾಬು ಮನವಿ ಮಾಡಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement