ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಹರಡಿದ ಕಾಡ್ಗಿಚ್ಚು‌ | ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ

March 5, 2023
10:30 PM

ಬಿಸಿಲಿನ ತಾಪಕ್ಕೆ ಗುಡ್ಡ, ಬೆಟ್ಟ, ಕಾಡು, ಬಯಲು ಎಲ್ಲವು ಒಣಗಿ ನಿಂತಿದೆ.  ಕೊಂಚ ಎಚ್ಚರ ತಪ್ಪಿದರೂ ಬೆಂಕಿ ತಗುಲಿದರೆ ಇಡೀ ಪ್ರದೇಶವೇ ಸುಟ್ಟು ಭಸ್ಮವಾಗುತ್ತದೆ. ಈಗಾಗಲೇ ಹಲವು ಕಡೆ ಬೆಂಕಿ ಅವಘಡ ನಡೆದಿದೆ.  ಇದೀಗ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶವೂ ಭಾನುವಾರ ಹೊತ್ತಿ ಉರಿಯಲಾರಂಭಿಸಿದೆ. ಸಂಜೆಯ ವೇಳೆಗೆ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಆಲೇಖಾನ್ ಹೊರಟ್ಟಿ ಗುಡ್ಡಕ್ಕೆ ಯಾರೊ ಅನಾಮಿಕರು ಹಾಕಿದ ಬೆಂಕಿಯಿಂದ  ಅರಣ್ಯ ಉರಿಯುತ್ತಿದೆ ಎಂದು ಹೇಳಲಾಗಿದೆ. 

ಈ ಗುಡ್ಡ ಮುಂದಕ್ಕೆ ಚಾರ್ಮಾಡಿ ಘಾಟಿಯನ್ನು ಹೊಂದಿಕೊಂಡಿದೆ. ಎತ್ತರ ಪ್ರದೇಶದ ಗುಡ್ಡದಲ್ಲಿ ವಿಪರೀತ ಬೆಂಕಿ ಹೊತ್ತಿ ಉರಿಯುತ್ತಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಅರಣ್ಯ  ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗುತ್ತಿದೆ. ಗುಡ್ಡದಲ್ಲಿದ್ದ ಅಪಾರ ಸಂಖ್ಯೆಯ ಪ್ರಾಣಿ-ಪಕ್ಷಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ತಂಡ ದೌಡಾಯಿಸಿ, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ. ಅಧಿಕಾರಿಗಳಿಗೆ ಸ್ಥಳೀಯರು ಅಗ್ನಿ ದಮನಕ್ಕೆ  ಸಾಥ್ ನೀಡುತ್ತಿದ್ದಾರೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಕಷ್ಟ ಸಾಧ್ಯವಾಗಿದೆ. ಅಗಾಧವಾದ ಮರ ಗಿಡಗಳು ಗುಡ್ಡದಲ್ಲಿ ಇರುವುದರಿಂದ ಬೆಂಕಿ‌ ನಂದಿಸುವುದು ಅಷ್ಟು ಸುಲಭವಾದ ಕೆಲಸ ಅಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್
ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!
March 4, 2026
10:20 PM
by: ಮಿರರ್‌ ಡೆಸ್ಕ್
ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!
March 4, 2026
12:01 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror