ಇತ್ತೀಚಿನ ದಿನಗಳು ಹೇಗಾಗಿದೆ ಎಂದರೆ ನಾಳೆ ಹೇಗಾದರು ಸರಿ, ಇವತ್ತು ಬದುಕಿದರೆ ಸಾಕು ಅನ್ನೋ ಮನಸ್ಥಿತಿ ನಮ್ಮದು. ನಮ್ಮ ಕೃಷಿ ಭೂಮಿಯಲ್ಲಿ, ನಮ್ಮ ಸುತ್ತ ಮುತ್ತ ಪರಿಸರ, ಕಾಡು, ಅರಣ್ಯದಲ್ಲಿ ಕಳೆ ಬೆಳೆಯೋದು ಇಂದು ನಿನ್ನೆಯದಲ್ಲ. ಪ್ರಕೃತಿ ನಿರ್ಮಿತ. ಆದರೆ ಅದನ್ನು ಹಿಂದೆ ನಮ್ಮ ಹಿರಿಯರು ಕಳೆ ಕಡಿದು ನಾಶ ಮಾಡುತ್ತಿದ್ದರು. ಆದರೆ ಈಗ ಇದಕ್ಕೆ ಜನನೂ ಸಿಗಲ್ಲ, ಸಮಯವೂ ಇಲ್ಲ. ಅದಕ್ಕೆ ಬಂದಿದೆ ಕಳೆ ನಾಶಕ. ಒಮ್ಮೆ ಭೂ ತಾಯಿ ಮಡಿಲಿಗೆ ವಿಷ ಹರಡಿದರೆ ಅಲ್ಲಿಗೆ ನಮ್ಮ ಈ ವರ್ಷದ ಕಳೆ ತೆಗೆಯುವ ಕೆಲಸ ಮುಗಿಯಿತು. ಆದರೆ ಅದರಿಂದ ಆಗುವ ಅನಾಹುತದ ಬಗ್ಗೆ ಗೊತ್ತಿದ್ದರೂ ಜಾಣ ಕಿವುಡರಂತೆ ವರ್ತಿಸುತ್ತೇವೆ. ಇದರ ಪರಿಣಾಮವೇ ಇಂದು ಈ ಅಧಿಕಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುವಂತಾಯಿತು…!
ಕಳೆನಾಶಕ ಸಿಂಪಡಿಸಿದ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ #ForestOfficer ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಯೋಗೇಶ ನಾಯಕ್ ಮೃತ ದುರ್ದೈವಿ. ಯೋಗೇಶ ನಾಯಕ್ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬ ಆಗಿದೆ ಎನ್ನಲಾಗಿದೆ. ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ಗಳು ಡ್ಯಾಮೇಜ್ ಆಗಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗೆ ಯೋಗೇಶ್ ನಾಯ್ಕ್ ಕೋಮಾ ಸ್ಥಿತಿಗೆ ತಲುಪಿದ್ದರು. ಅಲ್ಲೂ ಕೂಡ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್ಗೆ ಶಿಪ್ಟ್ ಆಗಿದ್ದರು. ಜು.07ರಂದು ಸಂಜೆ ಯೋಗೇಶ್ ನಾಯ್ಕ್ ಸಾವನ್ನಪ್ಪಿದ್ದಾರೆ. ಇದೀಗ ಹೆಂಡತಿ ಮಗುವನ್ನು ಹೊಂದಿದ್ದ ಅಧಿಕಾರಿಯ ಕುಟುಂಬ ಅತಂತ್ರವಾಗಿದೆ.