#Elephant | ಆನೆ-ಮಾನವ ಸಂಘರ್ಷ ತಡೆಗಟ್ಟಲು ಅರಣ್ಯಾಧಿಕಾರಿಗಳಿಂದ ಪ್ಲಾನ್ | ರೈಲ್ವೇ ಕಂಬಿಗಳೇ ಕಾಡಾನೆಗಳಿಗೆ ಚಕ್ರವ್ಯೂಹ |

August 18, 2023
2:42 PM
ಆನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ಚಾಮರಾಜನಗರದ ಅರಣ್ಯಾಧಿಕಾರಿಗಳು ಅರಣ್ಯದಂಚಿನಲ್ಲಿ ರೈಲ್ ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ. ರಾಜ್ಯದ ವಿವಿಧ ಅರಣ್ಯಗಳ ಅಂಚಿನಲ್ಲಿ ಈವರೆಗೆ 312ಕಿಲೋಮೀಟರ್ ಉದ್ದದ ರೈಲು ಕಂಬಗಳ ತಡೆಗೋಡೆಯನ್ನು ನಿರ್ಮಿಸಿ, ಸಂಘರ್ಷ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡಾನೆ ಮತ್ತು ಮಾನವ ಸಂಘರ್ಷ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ. ಅರಣ್ಯ ಇಲಾಖೆಯಂತೂ ಈ ವಿಷಯದಲ್ಲಿ ಅನೇಕ ಐಡಿಯಾಗಳನ್ನು ಮಾಡುತ್ತಲೇ ಇದೆ. ಕೆಲವು ಕಡೆ ಕೆಲವು ಯೋಜನೆಗಳಿಗೆ ಫಲ ಸಿಕ್ಕಿದೆ. ಇನ್ನೂ ಕೆಲವು ಕಡೆ ವ್ಯರ್ಥ ಪ್ರಯತ್ನವಾಗಿದೆ. ಆದರೆ ಈಗ ಈ ಸಂಘರ್ಷವನ್ನು ತಡೆಗಟ್ಟಲು ಚಾಮರಾಜನಗರದ ಅರಣ್ಯ ಇಲಾಖೆ  ಹೊಸ ಮಾದರಿಯೊಂದನ್ನು ಕಂಡುಕೊಂಡಿದೆ. ಈ ಮೂಲಕ ಅರಣ್ಯ ಇಲಾಖೆ ರೈತರಿಗೆ ನೆರವಾಗಿದೆ.

Advertisement

ಕರ್ನಾಟಕದ ಹಲವೆಡೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದರಿಂದ ರೈತರು ರೋಸಿಹೋಗಿದ್ದಾರೆ. ಹೊಲ-ಗದ್ದೆ ತೋಟಗಳಿಗೆ ನುಗ್ಗಿ ರೈತ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಆನೆಗಳಿಗೆ ಕಡಿವಾಣ ಹಾಕುವಂತೆ ರೈತರು, ಅರಣ್ಯ ಇಲಾಖೆಗೆ ಮನವಿ ಮಾಡುತ್ತಲ್ಲೇ ಇದ್ದಾರೆ. ಆದರೂ ಪದೇ ಪದೇ ಕಾಡಾನೆಗಳ ದಾಂಧಲೆ ಪ್ರಕರಣಗಳು ಹೆಚ್ಚುತ್ತಲ್ಲೇ ಇವೆ. ಹೀಗಾಗಿ ಆನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ಚಾಮರಾಜನಗರದ ಅರಣ್ಯಾಧಿಕಾರಿಗಳು ಅರಣ್ಯದಂಚಿನಲ್ಲಿ ರೈಲು ಬ್ಯಾರಿಕೇಡ್ ಗಳನ್ನು ನಿರ್ಮಾಣ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ರಾಜ್ಯದ ವಿವಿಧ ಅರಣ್ಯಗಳ ಅಂಚಿನಲ್ಲಿ ಈವರೆಗೆ 312ಕಿಲೋಮೀಟರ್ ಉದ್ದದ ರೈಲು ಕಂಬಗಳ ತಡೆಗೋಡೆಯನ್ನು ನಿರ್ಮಿಸಿ, ಸಂಘರ್ಷ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಧಾನದ ವಿಡಿಯೋ ತುಣುಕನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯದಂಚಿನಲ್ಲಿ ಯಾವುದೇ ಅಡೆತಡೆ ಇಲ್ಲದೆ ಬೆಳೆ ಬೆಳೆಯುತ್ತಿದ್ದರು. ಬೆಳೆಗಳಿಗೆ ಆನೆ ದಾಳಿಯಿಂದಾಗುವ ನಷ್ಟದಿಂದ ರೈತರು ಬೇಸತ್ತಿದ್ದರು. ಇದೀಗ ತಡೆಗೋಡೆಯನ್ನು ನಿರ್ಮಿಸಿದ್ದರಿಂದ ಆನೆ ದಾಳಿಯಿಂದ ಆ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಲಾರ್ ಬೇಲಿ, ಆನೆಕಂದಕಗಳಿಗಿಂತ ರೈಲು ಬ್ಯಾರಿಕೇಡ್‌ ಗಳು ಹೆಚ್ಚು ಪರಿಣಾಮಕಾರಿಯಾಗಿದೆ.

ಆದರೆ, ಸಂಪೂರ್ಣವಾಗಿ ಆನೆ ದಾಳಿಯನ್ನು ನಿಯಂತ್ರಿಸಲು ಇನ್ನೂ 331 ಕಿ.ಮೀ ಉದ್ದದ ರೈಲು ಬ್ಯಾರಿಕೇಡ್ ನಿರ್ಮಾಣದ ಅಗತ್ಯವಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ಕುರಿತು ಅರಣ್ಯ ರಕ್ಷಕ ಆಯಾಜ್ ನೇರ್ಲಿ ಮಾಡಿದ 2 ನಿಮಿಷ 22 ಸೆಕೆಂಡ್​ಗಳ ವಿಡಿಯೋ ವೈರಲ್ ಆಗಿದೆ. ಈ ಮೊದಲು ಸೋಲಾರ್ ಬೇಲಿಗಳನ್ನು ನಿರ್ಮಾಣ ಮಾಡುವುದು, ಆನೆ ಕಂದಕಗಳನ್ನು ನಿರ್ಮಿಸುವುದು ಹೀಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆನೆಗಳು ಜೇನುಹುಳುಗಳಿಗೆ ಹೆದರುವುದರಿಂದ ಜೇನುಗೂಡಿನ ಬೇಲಿಗಳನ್ನು ನಿರ್ಮಿಸಿ ಆನೆ ದಾಳಿಯನ್ನು ತಡೆಯುವ ಪ್ರಯತ್ನ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ರೈಲು ಬ್ಯಾರಿಕೇಡ್​ಗಳ ನಿರ್ಮಾಣವು, ಆನೆ ಮತ್ತು ಮಾನವರ ನಡುವೆ ಸಾಮರಸ್ಯ ಕಲ್ಪಿಸುವ ಈ ವಿನೂತನ ಮಾದರಿಯು ಸಹಕಾರಿಯಾಗಿದೆ.

ಇದೇ ರೀತಿ ಇತರ ಕಾಡಂಚಿನ ಭಾಗಗಳಿಗೂ ರೈಲು ಬೇಲಿಗಳನ್ನು ಹಾಕಿದರೆ, ತಕ್ಕ ಮಟ್ಟಿನ ಕಾಡಾನೆ ಹಾವಳಿಯನ್ನು ತಡೆಯಬಹುದು. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ಇಲ್ಲೂ ಹಲವು ಪ್ರಯತ್ನಗಳು ನಡೆಯುತ್ತಿದೆ. ಪ್ರತೀ ವರ್ಷ ಕೃಷಿ ಹಾನಿ ವಿಪರೀತವಾಗುತ್ತಿದೆ. ಇಲ್ಲಿ ಕೃಷಿಕರು ಆನೆ ಓಡಿಸಲೇ ಹರಸಾಹಸ ಪಡುತ್ತಿದ್ದಾರೆ.

Source: Social Media and Video

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |
March 28, 2025
8:12 AM
by: ಮಹೇಶ್ ಪುಚ್ಚಪ್ಪಾಡಿ
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಹೇಮಕುಂಡ್ ಯಾತ್ರೆಗೆ ನೋಂದಾವಣೆ
March 28, 2025
8:00 AM
by: The Rural Mirror ಸುದ್ದಿಜಾಲ
ಹೇಮಾವತಿ ನದಿ ನೀರಿಗೆ ವಿಷ ಸೇರ್ಪಡೆ : ಮೀನುಗಳ ಸಾವು
March 28, 2025
7:35 AM
by: The Rural Mirror ಸುದ್ದಿಜಾಲ
ಬೇಸಿಗೆ ರಜೆ ಹಿನ್ನೆಲೆ | ಮುಂಬೈನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ
March 28, 2025
7:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group