ಕಳೆದ ಎರಡು ವಾರಗಳಿಂದ ಅಡಿಕೆ ಮಾರುಕಟ್ಟೆಯ ಮೇಲೆ ಅಡಿಕೆ ಕಳ್ಳಸಾಗಾಣಿಕೆ ಪರಿಣಾಮ ಬೀರುತ್ತಿದೆ. ದೇಶದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬೇಡಿಕೆ ಇದ್ದರೂ ಕಳ್ಳ ದಾರಿಯ ಮೂಲಕ ವ್ಯಾಪಕವಾಗಿ ಅಡಿಕೆ ಆಮದಾಗುತ್ತಿದೆ. ಇದರ ಕಾರಣದಿಂದ ಅಡಿಕೆ ಮಾರುಕಟ್ಟೆಯು ಅಸ್ಥಿರತೆಯಿಂದ ಸಾಗಿದೆ. ಈ ನಡುವೆಯೇ ಅಕ್ರಮವಾಗಿ ಭಾರತದೊಳಕ್ಕೆ ಸಾಗಾಟ ಮಾಡುತ್ತಿದ್ದ 2 ಕೋಟಿ ರೂಪಾಯಿ ಮೌಲ್ಯದ 200 ಚೀಲ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ಸಾಗಾಟ ಮಾಡುತ್ತಿದ್ದ 4 ಜನ ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ.ಮಣಿಪುರ-ಮ್ಯಾನ್ಮಾರ್ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಸಿದ್ದರು.
ದೇಶದಲ್ಲೂ ಅಡಿಕೆ ಮಾರುಕಟ್ಟೆಯೂ ಅಸ್ಥಿರವಾಗಿದೆ. ಆಮದು ಅಡಿಕೆಯು ದೇಶೀಯ ಮಾರುಕಟ್ಟೆಯ ಮೇಲೆ ಇದೀಗ ಪರಿಣಾಮ ಬೀರಿದೆ. ಕಳೆದ ಎರಡು ವಾರಗಳಿಂದ ಏರಿಕೆ ಕಾಣುತ್ತಿದ್ದ ಅಡಿಕೆ ಧಾರಣೆ, ಇದೀಗ ಕಳೆದ ಒಂದು ವಾರದಿಂದ ಅಡಿಕೆ ಧಾರಣೆಯು ಅಸ್ಥಿರತೆಯಿಂದ ಕೂಡಿದೆ.ಈಗಾಗಲೇ ಕಳ್ಳ ದಾರಿಯ ಮೂಲಕ ಭಾರತದೊಳಕ್ಕೆ ಬಂದಿರುವ ಅಡಿಕೆಯು ಹಲವು ಕಡೆ ದಾಸ್ತಾನು ಇರುವ ಬಗ್ಗೆ ಮಾಹಿತಿ ಇದೆ. ಗಣೇಶ ಚತುರ್ಥಿಯ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಗಣನೀಯವಾದ ಚೇತರಿಕೆ ಕಾಣುವ ನಿರೀಕ್ಷೆ ಇದೆ.