ಮೊಬೈಲ್ ಗೆ ಬಂದ ಪ್ಯಾನ್ ಅಪ್ಡೇಟ್ ಲಿಂಕ್ ಕ್ಲಿಕ್ ಮಾಡಿದ ದಾವಣಗೆರೆಯ ವ್ಯಕ್ತಿಯೊಬ್ಬರು 4.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಜನವರಿ 21ರಂದು ಘಟನೆ ನಡೆದಿದ್ದು, ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ವಿರೂಪಾಕ್ಷಪ್ಪ ವಂಚನೆಗೆ ಒಳಗಾದವರು. ಎಸ್.ಬಿ.ಐ. ನಲ್ಲಿ ಅವರು ಖಾತೆ ಹೊಂದಿದ್ದು, ಅವರ ಮೊಬೈಲ್ ಸಂಖ್ಯೆಗೆ ಜನವರಿ 21ರಂದು ರಾತ್ರಿ 10 ಗಂಟೆ ಸುಮಾರಿಗೆ ಎಸ್‌ಎಂಎಸ್ ಬಂದಿದೆ.ಎಸ್‌ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಪ್ಯಾನ್ ಅಪ್ ಡೇಟ್ ಮಾಡಲು ಲಿಂಕ್ ಒತ್ತಿ ಎಂದು ಅದರಲ್ಲಿ ತಿಳಿಸಲಾಗಿದ್ದು, ಲಿಂಕ್ ಕ್ಲಿಕ್ ಮಾಡಿದ ವಿರೂಪಾಕ್ಷಪ್ಪ ತಮ್ಮ ಖಾತೆಯ ಕುರಿತಾದ ಯಾವುದೇ ವಿವರ ನಮೂದಿಸಿಲ್ಲವಾದರೂ ಮರುದಿನ ಮಧ್ಯಾಹ್ನ ಅವರ ಖಾತೆಯಿಂದ ಹಣ ಕಡಿತವಾದ ಸಂದೇಶ ಮೊಬೈಲ್ ಗೆ ಬಂದಿದೆ.
ಕೂಡಲೇ ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಕ್ರಮವಾಗಿ 1.35 ಲಕ್ಷ ರೂ., 1 ಲಕ್ಷ ರೂ., 1.79 ಲಕ್ಷ ರೂ. ಸೇರಿದಂತೆ ಒಟ್ಟು 4.15 ಲಕ್ಷ ರೂ. ಕಡಿತವಾಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಬಳಿಕ ವಿರೂಪಾಕ್ಷಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆಯು ಹಬ್ಬದ…
ಎಳೆಯ ಹಲಸಿನ ಕಾಯಿ ಪಕೋಡ(Tender Jack Fruit)ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಗ್ರಾಮ ಪಂಚಾಯತ್, ಹೋಬಳಿ ಮಟ್ಟದಲ್ಲಿ ಹವಾಮಾನ ಮತ್ತು ಮಳೆಮಾಪನ ಕೇಂದ್ರಗಳನ್ನು ಅಳವಡಿಸಿದರೆ ಬೆಳೆಗಳಿಗೆ…
ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲರೆಡ್ಡಿ ಬಡಾವಣೆಯ ವೇಂಕಟೇಶ್ ಎಂಬುವರ ಮನೆಗೆ ನಿನ್ನೆ ನುಗ್ಗಿದ್ದ…
ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…