ಪಾನ್ ಕಾರ್ಡ್ ಅಪ್ಡೇಟ್ ಮಾಡುವುದಾಗಿ ವಂಚನೆ | ದೂರಿನ ಬಳಿಕ 3 ಲಕ್ಷ ವಾಪಸ್ ಖಾತೆಗೆ ಜಮೆ |

November 6, 2022
5:53 PM

ಪಾನ್ ಕಾರ್ಡ್ ಅಪ್ಡೇಟ್​ ಮಾಡಬೇಕು ಎಂದು ಮಹಿಳೆಯೊಬ್ಬರು ಬ್ಯಾಂಕ್ ಖಾತೆಯಿಂದ 3.24 ಲಕ್ಷ ರೂ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾದ ತಕ್ಷಣ ಪೊಲೀಸರು ಹಣ ವರ್ಗಾವಣೆಗೆ ಬ್ಯಾಂಕ್ ಮೂಲಕ ತಡೆ ಹಿಡಿದ ಹಿನ್ನೆಲೆ ಮಹಿಳೆಗೆ 3 ಲಕ್ಷ ರೂ. ವಾಪಸ್​ ಬಂದ ಘಟನೆ ನಡೆದಿದೆ.

ಕಳೆದ ಅಕ್ಟೋಬರ್ ಕೊನೆಯ ವಾರ ಕಾರವಾರ ನಗರದ ನಿವಾಸಿ ವಿದ್ಯಾ ಕಾಮತ್ ಅವರು 3.24 ಲಕ್ಷ ರೂ. ಸೈಬರ್ ವಂಚನೆಯಾದ ಬಗ್ಗೆ ದೂರು ದಾಖಲಿಸಿದ್ದರು. ಅವರು ತಮ್ಮ ಚಿಕ್ಕಮ್ಮನ ಎಸ್​ಬಿಐ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಪಾನ್ ಕಾರ್ಡ್ ಅಪ್ಡೇಟ್​ ಮಾಡಿಸಬೇಕು ಎಂದು ಬಂದ ಎಸ್​ಎಂಎಸ್ ಲಿಂಕ್​ನಲ್ಲಿ ಖಾತೆಯ ಎಲ್ಲ ಮಾಹಿತಿ ನಮೂದಿಸಿದ್ದರು. ಬಳಿಕ ಅವರ ಚಿಕ್ಕಮ್ಮನ ಖಾತೆಯಿಂದ 99 ಸಾವಿರ ರೂ.ನಂತೆ ಮೂರು ಬಾರಿ ಹಾಗೂ ಒಮ್ಮೆ 24 ಸಾವಿರ ರೂ. ಇನ್ನೊಂದು ಖಾತೆಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ವಿದ್ಯಾ ಅವರು ಕಾರವಾರ ಸೈಬರ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಹಣ ವರ್ಗಾವಣೆಯಾದ ಖಾತೆಯನ್ನು ತಡೆ ಹಿಡಿದಿದ್ದಾರೆ. ನಂತರ ಮಹಿಳೆಯ 3 ಲಕ್ಷ ರೂ. ಹಣವನ್ನು ಮರಳಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಇನ್ನೂ ಉಳಿದ 24 ಸಾವಿರ ರೂ. ಹಾಗೂ ಆರೋಪಿಗಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?
October 6, 2026
1:39 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ
October 6, 2026
7:09 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್
October 6, 2026
7:03 AM
by: ದ ರೂರಲ್ ಮಿರರ್.ಕಾಂ
ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ
October 6, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror