Advertisement
Opinion

ಫ್ರೀ ಫ್ಲೋಯಿಂಗ್ ಸಾಲ್ಟ್ – ಬೇಕಿದೆ ಎಚ್ಚರಿಕೆ | ಪ್ರಾರಂಭಿಸಬೇಕಿದೆ ಮತ್ತೊಂದು ಉಪ್ಪಿನ ಸತ್ಯಾಗ್ರಹ!

Share

ಪ್ರಾರಂಭಿಸಬೇಕಿದೆ ಮತ್ತೊಂದು ಉಪ್ಪಿನ ಸತ್ಯಾಗ್ರಹ!(Salt satyagraha) ಬ್ರಿಟಿಷರು(British) ಉಪ್ಪಿಗೆ ಅಂದು ಕರ(Tax for salt) ಹೇರಿದ್ದರು. ಈಗ ನಾವು ಈ ಉಪ್ಪು ತಿಂದರೆ ನಮ್ಮ ಜೀವಕ್ಕೆ ನಾವು ಕರ ತೆರಬೇಕಾದಿತು. ಪ್ರತಿ ಮನೆಯಲ್ಲಿ ನಾವಿಂದು ಬಳಸುವ ಪುಡಿ ಉಪ್ಪು(salt powder) ಈಗ ಫ್ರೀ ಫ್ಲೋಯಿಂಗ್ ಸಾಲ್ಟ್(Free flowing salt) ಆಗಿದೆ. ಈ ಉಪ್ಪು ನೇರವಾಗಿ ರಾಸಾಯನಿಕ ಫ್ಯಾಕ್ಟರಿಗಳಿಂದ(Chemical Factory) ಬಂದ ಬಿಳಿ ಪುಡಿ ಉಪ್ಪು ಆಗಿರಬಹುದು ಅಥವಾ ಸಮುದ್ರ ಅಥವಾ ಉಪ್ಪಿನಗುಡ್ಡ (ಸೈಂದವ ಲವಣ)ಗಳಿಂದ ಬಂದ ಉಪ್ಪು ಆಗಿದ್ದರೂ ಕೂಡ ಪುಡಿ ಉಪ್ಪಿನಲ್ಲಿ ಮುದ್ದೆಯಾಗದಿರುವಂತಹ ರಾಸಾಯನಿಕಗಳನ್ನು ಬೆರೆಸಿರುತ್ತಾರೆ.

Advertisement
Advertisement

ಇವುಗಳಿಗೆ ಆಂಟಿ ಕೇಕಿಂಗ್ ಏಜೆಂಟ್ಸ್(Anti caking agent) ಎಂದು ಕರೆಯುತ್ತಾರೆ. ಅವು ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂಬುದು ವಿಜ್ಞಾನಿಗಳ ಊಹೆಯಾಗಿತ್ತು. ಆದರೆ ಅದು ತಪ್ಪಾಗಿ ಅವುಗಳು ಗುದನಾಳದ ಕ್ಯಾನ್ಸರ್(Cancer) ತರುತ್ತವೆ ಎಂಬುದು ಈಗ ಸಾಬೀತಾಗಿದೆ. ಈ ಕ್ಯಾನ್ಸರ್ ಬಂದಾಗ ವೈದ್ಯರು ಗುದನಾಳವನ್ನು ಕಟ್ ಮಾಡಿ ಬಿಸಾಕುತ್ತಾರೆ. ಮಲ ಹೊರ ಹೋಗಲು ಸೊಂಟದಲ್ಲಿ ಪ್ಲಾಸ್ಟಿಕ್ ಚೀಲ ಹಾಕುತ್ತಾರೆ. ತುಂಬಿದಾಗ ಬಿಸಾಕಿ ಹೊಸ ಚೀಲ ಹಾಕಿಕೊಳ್ಳಬೇಕು. ಅದರೊಂದಿಗೇ ಮಲಗಬೇಕು. ಹತ್ತಿರ ಬಂದರೆ ಕೆಟ್ಟ ವಾಸನೆ!

ಈ ಜೀವನ ಸಾಕೆಂದು ರೋಗಿ ನಿಶ್ಚಯಿಸಿಬಿಡುತ್ತಾನೆ. ಇಂತಹ ಜೀವನ ಯಾರಿಗೂ ಬೇಡ. ನಮಗಿನ್ನೂ ಈ ಕ್ಯಾನ್ಸರ್ ಬಂದಿಲ್ಲ. ಏಕೆಂದರೆ ಚಿಕ್ಕಂದಿನಿಂದ ನಾವು ಈ ಉಪ್ಪನ್ನು ಬಳಸಿಲ್ಲ. ಆದರೆ ನಮ್ಮ ಮಕ್ಕಳಿಗೆ ನಾವು ಚಿಕ್ಕ ವಯಸ್ಸಿನಿಂದಲೇ ಈ ಉಪ್ಪನ್ನು ತಿನಿಸುತ್ತಿದ್ದೇವೆ. ನಮ್ಮ ಮಕ್ಕಳಿಗೆ ಈ ಕ್ಯಾನ್ಸರ್ ಬಂದಾಗ ನಾವಿರುವುದಿಲ್ಲ. ಆದರೆ ಕಾರಣ ನಾವಾಗಿರುತ್ತೇವೆ! ಮುದ್ದೆ ಆಗಲಿ ಬಿಡಿ, ನಮಗೆ ಬೇಕಿರುವುದು ಉಪ್ಪು ತಾನೇ, ಅದರೊಂದಿಗೆ ಬರುವ ವಿಷ ರಾಸಾಯನಿಕಗಳಲ್ಲವಲ್ಲ!

ಸರ್ಕಾರದ ತಪ್ಪಿಗೆ ನಾವೇಕೆ ಬಲಿಯಾಗಬೇಕು? ಸರ್ಕಾರ ನಡೆಸುವವರ ಆದಾಯಕ್ಕಾಗಿ ನಾವು ಕಾಯಿಲೆಗೆ ಒಳಗಾಗಬೇಕೇ? ಎಲ್ಲದಕ್ಕೂ ಸರ್ಕಾರದತ್ತ ನೋಡುವುದಕ್ಕಿoತ ನಾವಿಂದು ಜಾಣರಾಗಬೇಕಿದೆ. ಮನೆಯಲ್ಲಿರುವ ಪುಡಿ ಉಪ್ಪನ್ನು ಈಗಲೇ ಬಿಸಾಕಿ. ಫ್ರೀ ಫ್ಲೋಯಿಂಗ್ ಸಾಲ್ಟ್ ಬಳಸಬೇಡಿ. ಆರ್ಗಾನಿಕ್ ಅಂಗಡಿಗಳಲ್ಲಿ ದೊರೆಯುವ ನೈಸರ್ಗಿಕ ಸಮುದ್ರದ ಉಪ್ಪನ್ನು,/ ಗಟ್ಟಿ ಉಪ್ಪು/ಗಟ್ಟಿ ಸೈಂಧವ ಲವಣ ತೆಗೆದುಕೊಂಡು, ಪುಡಿ ಮಾಡಿ ಬಳಸಿ. ಗಟ್ಟಿ ಉಪ್ಪನ್ನು ನೀರಲ್ಲಿ ಕರಗಿಸಿ ಬಳಸಿ. ಪುಡಿ ಉಪ್ಪು ಬೇಕಾಗುವುದೇ ಇಲ್ಲ. ಕ್ಯಾನ್ಸರ್ ನಿಂದ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ.

ಬರಹ :
ಡಾ. ಶ್ರೀಶೈಲ ಬದಾಮಿ
,  M.Pharm.,PhD , ಧಾರವಾಡ,

The salt powder that we use in every home is now free flowing salt. This salt can be white powder salt directly from chemical factories or even if it is salt from sea or pickled salt (Saindava salt), chemicals are mixed in the powder salt so that it does not become lumpy.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್

2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…

14 hours ago

ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ

ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…

15 hours ago

ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…

15 hours ago

ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ

ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…

15 hours ago

ಅಡಿಕೆ ಮಾರುಕಟ್ಟೆ ಸಮೀಕರಣ : ಬೆಲೆ ನಿರ್ಧಾರದ ಹಿಂದಿನ ಅರ್ಥಶಾಸ್ತ್ರ ಮತ್ತು ಮನೋವಿಜ್ಞಾನ

ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…

23 hours ago

ಅಡಿಕೆ ಕಳ್ಳಸಾಗಣೆ ಜಾಲಕ್ಕೆ ಮಿಝೋರಂ ಸರ್ಕಾರದ ಬಿಗಿ ಹಿಡಿತ – ಅಡಿಕೆ ಮಾರುಕಟ್ಟೆ ಚೇತರಿಕೆ ಸಾಧ್ಯತೆ

ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…

24 hours ago