ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ

January 10, 2025
7:03 PM

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 3ನೇ ಸುತ್ತಿನ ಎರಡನೇ ಹಂತದ ಕಂದು ರೋಗ ಲಸಿಕಾ ಕಾರ್ಯಕ್ರಮ ಜನವರಿ 10 ರಿಂದ 25 ರವರೆಗೆ ದಕ ಜಿಲ್ಲೆಯಾದ್ಯಂತ ದನ ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ಮಾತ್ರ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.

Advertisement
Advertisement
Advertisement
Advertisement

ಲಸಿಕೆಯನ್ನು ಕರುಗಳಿಗೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೀಡಬೇಕು. ಕಂದು ರೋಗವು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು ಜಾನುವಾರುಗಳಲ್ಲಿ ಜ್ವರ, ಗರ್ಭಪಾತ, ಗರ್ಭಧಾರಣೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಪ್ರಾಣಿಜನ್ಯ ರೋಗವಾಗಿದ್ದು ಮನುಷ್ಯರಿಗೂ ಹರಡಬಹುದಾಗಿದೆ ಇದರ ಚಿಕಿತ್ಸೆ ದುಬಾರಿ ಮತ್ತು ತ್ರಾಸದಾಯಕವಾಗಿದ್ದು,  ಒಟ್ಟಾರೆ ರೈತರಿಗೆ ತುಂಬಾ ಆರ್ಥಿಕ ನಷ್ಟ ಉಂಟು ಮಾಡುತ್ತದೆ. ರೈತ ಬಾಂಧವರು ತಮ್ಮ 4 ರಿಂದ 8 ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸುವುದೊಂದೇ ಕಂದು ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ.

Advertisement

ಹೆಚ್ಚಿನ ಮಾಹಿತಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ಎಂದು ಮಂಗಳೂರು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಾವಿನ ನಂತರ  ಬಾಳೆಯು ಪ್ರಮುಖ ಹಣ್ಣಿನ ಬೆಳೆ
February 11, 2025
6:50 AM
by: The Rural Mirror ಸುದ್ದಿಜಾಲ
ಜಲಜೀವನ್ ಮಿಷನ್ ಯೋಜನೆ | ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ
February 11, 2025
6:47 AM
by: The Rural Mirror ಸುದ್ದಿಜಾಲ
ಕೃಷಿ ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ ವಿಶ್ವವಿದ್ಯಾಲಯ ಶ್ರಮಿಸಬೇಕು
February 11, 2025
6:39 AM
by: The Rural Mirror ಸುದ್ದಿಜಾಲ
ಫೆ.21 “ಭಾವತೀರ ಯಾನ” ಸಿನಿಮಾ ಬಿಡುಗಡೆ | ಇಬ್ಬರು ಗೆಳೆಯರ ಭಾವಯಾನ | ಮಲೆನಾಡಿನಲ್ಲಿ ನಡೆದಿದೆ ಚಿತ್ರೀಕರಣ |
February 10, 2025
6:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror