ತಾಜಾ ಹಾಲೇ ಅತ್ಯಂತ ಶ್ರೇಷ್ಠ | ಕೆಲವೇ ವರ್ಷಗಳಲ್ಲಿ ಶುದ್ಧ ಹಾಲಿಗಾಗಿ ಮುಂಗಡ ಬುಕ್ ಮಾಡಿ ಕಾಯುವ ಸ್ಥಿತಿ ಒದಗಬಹುದು..!

December 6, 2023
1:01 PM
ಶುದ್ಧ ಹಾಲು ಬಗ್ಗೆ ರಾಮಚಂದ್ರ ಕಂಜರ್ಪಣೆ ಅವರು ಪೇಸ್‌ ಬುಕ್‌ ವಾಲ್‌ ನಲ್ಲಿ ಬರೆದಿರುವ ಬರಹ ಇಲ್ಲಿದೆ...

ಹಾಲು(Milk) ಅತ್ಯಂತ ಸೂಕ್ಷ್ಮ ವಸ್ತು. ಅತ್ಯಂತ ಸ್ವಚ್ಛ ಸ್ಥಿತಿಯಲ್ಲಿ ಇಟ್ಟರೂ, ಅದನ್ನು ಹಾಳು ಮಾಡಲು ವಾತಾವರಣದ ಬ್ಯಾಕ್ಟೀರಿಯಾಗಳು(Bacteria) ಸಾಕು. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ. (ಪಶು ವೈದ್ಯರೊಬ್ಬರು ಹೇಳಿದ್ದು) ಹೈನುಗಾರಿಕೆಯೇ(Dairy farming) ಪ್ರಧಾನವಾದ ವಿದೇಶಗಳಲ್ಲಿ, ಅತ್ಯಂತ hygienic, sterilized ಸ್ಥಿತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಕೂಡಾ ಕೆಚ್ಚಲುಬಾವು ರೋಗ ಬಾಧಿಸುತ್ತದೆ. ಈ ವಿಷಯವನ್ನು ಹಾಲು ಎಷ್ಟೊಂದು ಸೂಕ್ಷ್ಮ ಪ್ರತಿಕ್ರಿಯೆಯ ವಸ್ತು ಎನ್ನುವುದಕ್ಕೆ ಉದಾಹರಣೆಯಾಗಿ ಹೇಳಿದೆ. ಹೇಳಬೇಕಾದ ಮುಖ್ಯ ವಿಚಾರ ಮುಂದಿದೆ.

ತರಕಾರಿಗಳು(Vegetable) ಬೇಯಿಸುವಾಗ ಪೋಷಕಾಂಶಗಳು ನಷ್ಟವಾಗುತ್ತದೆ. ಅದನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಕೆಲವೊಂದು ನಿಯಮಗಳಿವೆ. ಇದೇ ಥಿಯರಿಯನ್ನು ಹಾಲಿಗೆ ಅನ್ವಯಿಸಿ ನೋಡಿ. ಆಗಷ್ಟೇ ಕರೆದ ನೊರೆ ಹಾಲು ಉತ್ಕೃಷ್ಟ ಗುಣಮಟ್ಟದ ಪೇಯ. ಆದರೆ ಹಾಲು ಕರೆಯುವ ವಿಚಾರದಲ್ಲಿ ಕಟ್ಟುನಿಟ್ಟಿನ ಸ್ವಚ್ಛತಾ ನಿಯಮಗಳನ್ನು ಪಾಲಿಸಬೇಕು.

ರೈತರು ಕರೆದ ಹಾಲನ್ನು ನಿಯಮಿತ ಅವಧಿಯ ಒಳಗೆ ಸ್ಟೀಲ್ ಕ್ಯಾನ್ ಗಳಲ್ಲಿ ತುಂಬಿ ಹಾಲಿನ ಡಿಪೋಗಳಿಗೆ ತಲುಪಿಸುವುದು. ಅದನ್ನು ಅಷ್ಟೇ ಶೀಘ್ರವಾಗಿ ಶೀತಲೀಕರಣ ಘಟಕಗಳಿಗೆ ವರ್ಗಾವಣೆ. ಮುಂದೆ ಅಂಥದ್ದೇ ಸಾಗಾಟ ವಾಹನಗಳ ಮೂಲಕ ಸಂಗ್ರಹ ಕೇಂದ್ರಕ್ಕೆ ವರ್ಗಾವಣೆ. ಅಲ್ಲಿ ಹಾಲಿನ ಪ್ಯಾಸ್ಚರೈಸೇಷನ್ ಮುಂತಾದ ಪ್ರಕ್ರಿಯೆಗಳಿಗೆ ಒಳಪಡಿಸಿ ದಾಸ್ತಾನು ಮಾಡುವುದು. ಈ ರೀತಿಯ ಶಿಸ್ತು ಬದ್ಧವಾಗಿ ಸಂಸ್ಕರಿಸಿದ ಹಾಲು ನಮಗೆ “ನಂದಿನಿ”ಯ ಮೂಲಕ ದೊರಕುತ್ತಿರುವುದು. ಇಲ್ಲಿ ಆಧುನಿಕ ಯಂತ್ರಗಳು, ವೃತ್ತಿ ಪರಿಣತರು, ಎಲ್ಲಾ ಸೌಲಭ್ಯಗಳು ಲಭ್ಯವಿರುವ ಕಾರಣ ಮತ್ತು ಇದೊಂದು ಸಾಕಷ್ಟು ಬಂಡವಾಳ ಉಳ್ಳ ಸಹಕಾರಿ ಸಂಸ್ಥೆಯಾದ ಕಾರಣ., ಯಾವುದೇ ಸಂಶಯವಿಲ್ಲದೆ ಈ ಹಾಲು ಬಳಸಬಹುದು.

ಕೆಲವೊಂದು ಖಾಸಗಿ ಸಂಸ್ಥೆಗಳು ಮಾರಾಟ ಮಾಡುವ ಹಾಲು ಪರಿಶುದ್ಧವಾಗಿಲ್ಲದಿರುವ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿತ್ತು. “ಸಂಗ್ರಹ ಮತ್ತು ವಿತರಣೆ” ವ್ಯವಸ್ಥೆಯ ಸರಪಳಿಯೇ ಸರಿಯಾಗಿಲ್ಲದ ಸಂಸ್ಥೆಗಳು/ಕಂಪೆನಿಗಳು, ಯಾವಾಗ ಬೇಕಾದರೂ ಎಷ್ಟು ಬೇಕಾದರೂ ಹಾಲು ಸರಬರಾಜು ಮಾಡುವ ಶಕ್ತಿ ಹೊಂದಿವೆ ಎಂದ ಮೇಲೆ ಅವರನ್ನು ಸಂಶಯಿಸಬೇಕಾದದ್ದೇ. ಸಂಗ್ರಹ ಮತ್ತು ಸಂಸ್ಕರಣೆಯ ದಾರಿ ವೆಚ್ಚದಾಯಕವಾದುದರಿಂದ ಕಲಬೆರಕೆ ಅಥವಾ ರಾಸಾಯನಿಕ ವಸ್ತುಗಳ ಬೆರಕೆ ಮೂಲಕ ಹಾಲು ಸಂಗ್ರಹ ಮತ್ತು ದಾಸ್ತಾನು ಸುಲಭ ಮತ್ತು ಕಡಿಮೆ ವೆಚ್ಚದ ದಾರಿ.

ಅರ್ಧ ಅಥವಾ ಒಂದು ಲೀಟರ್ ಹಾಲು ಖರೀದಿಸಿ ಬಳಸುವವರಿಗೆ ಕಲಬೆರಕೆಯ ಅನುಭವ ಕಷ್ಟ. ಈ ಕಲಬೆರಕೆಯಲ್ಲಿ ಬಳಸುವ ರಾಸಾಯನಿಕಗಳು ತಕ್ಷಣ ಪ್ರಭಾವ ಬೀರದೇ ಇರಬಹುದು ಅಥವಾ ದೀರ್ಘ ಕಾಲದ ನಂತರ ಸಮಸ್ಯೆಗಳನ್ನು ತಂದೊಡ್ಡಬಹುದು ಅಥವಾ ಇದು ಹಾಲಿನ ಉತ್ಪನ್ನಗಳ ಬಳಕೆಯಿಂದ ಬಂದ ಸಮಸ್ಯೆ ಎಂದು ತಿಳಿಯದೆಯೂ ಇರಬಹುದು. ಆದುದರಿಂದ ನಂಬಲರ್ಹ, ರೈತರ ನೇರ ಸಂಪರ್ಕ ಇರುವ ನಂದಿನಿ ಹಾಲನ್ನೇ ಬಳಸಿ ಎನ್ನುವ ಸಲಹೆ, ಕೋರಿಕೆ.

ತಾಜಾ ಹಾಲೇ ಅತ್ಯಂತ ಶ್ರೇಷ್ಠ. ಆದರೆ ಹೈನುಗಾರಿಕೆ/ಹೈನೋದ್ಯಮ ಪತನದ ದಾರಿಯಲ್ಲಿ ಸಾಗುತ್ತಿದೆ. ಬೇರೆ ಬೇರೆ ಕಾರಣಗಳಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಅತ್ತ ಬಿಡಲೂ ಆಗದೇ ಮುಂದುವರಿಸಲೂ ಆಗದೆ ಒದ್ದಾಡುವ ತ್ರಿಶಂಕು ಸ್ಥಿತಿ ರೈತರದ್ದು. ಯುವ ಪೀಳಿಗೆಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ. ಕೆಲವೇ ವರ್ಷಗಳಲ್ಲಿ ಶುದ್ಧ ಹಾಲಿಗಾಗಿ ಮುಂಗಡ ಬುಕ್ ಮಾಡಿ ಕಾಯುವ ಸ್ಥಿತಿ ಬರಲಿದೆ ಎನ್ನುವ ಸ್ಪಷ್ಟ ವಾಕ್ಯದೊಂದಿಗೆ..

ಬರಹ :
ರಾಮಚಂದ್ರ ಕಂಜರ್ಪಣೆ, ಮಡ್ಯಾಂತಾರು
,  (ಅವರ ಫೇಸ್‌ಬುಕ್‌ ವಾಲ್ನಿಂದ)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ
ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ
October 13, 2026
9:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror