ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆಯೊಂದು ಚೆಂಗಲ್‌ಪೇಟ್ ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ ನಡೆದಿದೆ.
ಗಿರಿಜಾ (63) , ಅವರ ಸಹೋದರಿ ರಾಧಾ (55), ಸಹೋದರ ರಾಜಕುಮಾರ್ (47) ಮೃತಪಟ್ಟವರು.
ಗುಡುವಂಚೇರಿಯಲ್ಲಿರುವ ಆರ್‌ಆರ್ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿರುವ ದಿ. ವೆಂಕಟರಾಮನ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ.
ದುಬೈನಲ್ಲಿ ನೆಲೆಸಿರುವ ದಿ. ವೆಂಕಟರಾಮನ್ ಅವರ ಪತ್ನಿ ಗಿರಿಜಾ ಸಹಿತ ಕುಟುಂಬದವರು ದಿವಂಗತರಾದ ವೆಂಕಟರಾಮನ್ ಅವರ ವರ್ಷದ ಪೂಜೆ ಹಿನ್ನೆಲೆ ಮನೆಗೆ ಆಗಮಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಗಾಯಾಳುಗಳಾದ ರಾಜ್‌ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೋಟದ ಶಬ್ಧ ಕೇಳಿ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ನವರು ಓಡಿ ಬಂದಿದ್ದು, ಬಾಗಿಲು ಒಡೆದು ಒಳ ಹೋಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel