MIRROR FOCUS

ಜನನ ಪ್ರಮಾಣ ಪತ್ರವೇ ಇನ್ನು ದಾಖಲೆಗಳಿಗೆ ದಾಖಲೆ | ಅ.1 ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ್ ಸಂಖ್ಯೆ ಬದಲಾವಣೆ, ಸರ್ಕಾರಿ ಉದ್ಯೋಗಕ್ಕೆ ಜನನ ಪ್ರಮಾಣಪತ್ರ ಒಂದೇ ದಾಖಲೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಯಾವುದಾದರೊಂದು ಸರ್ಟಿಫಿಕೇಟ್‌ ಮಾಡಿಸ ಬೇಕಾದ್ರೆ ಅದಕ್ಕೆ ದಾಖಲಾತಿಗಳನ್ನು ಕೊಟ್ಟು ಕೊಟ್ಟು ಜನ ಹೈರಾಣಾಗುತ್ತಿದ್ದರು. ಅದಿದ್ರೆ ಇದು ಇಲ್ಲ, ಇದು ಇದ್ರೆ ಅದಿಲ್ಲ.. ಅದನ್ನು ತನ್ನಿ, ಇದನ್ನು ತನ್ನಿ…!  ಒಂದು ಕಾರ್ಡ್‌ ಮಾಡಿಸುವ ಹೊತ್ತಿಗೆ ಜನ ಸಾಮಾನ್ಯ ಬೇಸತ್ತು ಹೋಗುತ್ತಿದ್ದ. ಆದರೆ ಇದೀಗ ಅಕ್ಟೋಬರ್ 1ರಿಂದ, ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ಪಡೆಯುವುದು, ಮತದಾರರ ಪಟ್ಟಿ ತಿದ್ದುಪಡಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಉದ್ಯೋಗ ನೇಮಕಾತಿ ಇತ್ಯಾದಿ ಸೇರಿದಂತೆ ಹಲವಾರು ನಿರ್ಣಾಯಕ ಸೇವೆಗಳನ್ನು ಪಡೆಯಲು ಜನನ ಪ್ರಮಾಣಪತ್ರವನ್ನು(birth certificate) ಒಂದೇ ದಾಖಲೆಯಾಗಿರುತ್ತದೆ.

Advertisement

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023ರ ಅನುಷ್ಠಾನವನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಇದು ಜನನ ಮತ್ತು ಮರಣಗಳ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ ಮತ್ತು ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಹಾಗೂ ಡಿಜಿಟಲ್ ನೋಂದಣಿಯ, ಪಾರದರ್ಶಕವಾದ ದಾಖಲೆಗಳನ್ನು ನೀಡುವ ಸಲುವಾಗಿ ಈ ಕ್ರಮವನ್ನು ತರಲಾಗಿದೆ.

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 (2023 ರ 20) ನ ಕ್ರಮ 1 ಮತ್ತು ಉಪ-ಕ್ರಮ (2) ರ ಆಧಾರದ ಮೇಲೆ, ಈ ಕಾಯಿದೆ ಅನುಷ್ಠಾನವನ್ನು ತರಲಾಗುವುದು. ಜತೆಗೆ ಈ ಪ್ರಕ್ರಿಯೆಗೆ ನೂತನ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದೆ. ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ಈ ಕಾಯಿದೆ ಜಾರಿಗೆ ಬರಲಿದೆ ಎಂದು ಹೇಳಿದೆ. ಇನ್ನು ಈ ಮಸೂದೆಯನ್ನು ಸಂಸತ್ತಿನ ಮಾನ್ಸೂನ್ ಅಧಿವೇಶನದ ಕೊನೆ ದಿನದಂದು ಎರಡೂ ಸದನಗಳು ಅಂಗೀಕರಿಸಿತ್ತು. ರಾಜ್ಯಸಭೆಯು ಆಗಸ್ಟ್ 7 ರಂದು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ ಮತ್ತು ಲೋಕಸಭೆಯು ಆಗಸ್ಟ್ 1 ರಂದು ಅಂಗೀಕರಿಸಿದೆ.

ಈ ಕಾಯಿದೆಯ ಪ್ರಮುಖ ಅಂಶಗಳು:

1. ಈ ಕಾಯಿದೆಯು ಜನನ ಮತ್ತು ಮರಣಗಳ ರಾಷ್ಟ್ರೀಯ ನೋಂದಣಿಯನ್ನು ಮೇಲ್ವಿಚಾರಣೆ ಮಾಡಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ ಅಧಿಕಾರವನ್ನು ನೀಡುತ್ತದೆ. ರಾಜ್ಯದಿಂದ ನೇಮಕಗೊಂಡ ಮುಖ್ಯ ರಿಜಿಸ್ಟ್ರಾರ್‌ಗಳು ಮತ್ತು ರಿಜಿಸ್ಟ್ರಾರ್‌ಗಳು ಈ ರಾಷ್ಟ್ರೀಯ ಡೇಟಾಬೇಸ್‌ಗೆ ಡೇಟಾವನ್ನು ನೀಡುತ್ತಾರೆ. ಆದರೆ ಮುಖ್ಯ ರಿಜಿಸ್ಟ್ರಾರ್‌ಗಳು ರಾಜ್ಯ ಮಟ್ಟದ ಡೇಟಾಬೇಸ್‌ಗಳನ್ನು ನಿರ್ವಹಿಸುತ್ತಾರೆ.

2. ಈ ಹಿಂದೆ, ಕೆಲವು ವ್ಯಕ್ತಿಗಳು ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್‌ಗೆ ವರದಿ ಮಾಡುವ ಅವಶ್ಯಕತೆ ಇತ್ತು.

Advertisement

3. ಉದಾಹರಣೆಗೆ, ಮಗುವಿನ ಜನನದ ಆಸ್ಪತ್ರೆಯ ಉಸ್ತುವಾರಿ ವೈದ್ಯಕೀಯ ಅಧಿಕಾರಿಯು ಜನನವನ್ನು ವರದಿ ಮಾಡಬೇಕು. ಇದಲ್ಲದೆ, ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗಿದೆ. ಜೈಲು, ಹೋಟೆಲ್ ಅಥವಾ ಲಾಡ್ಜ್‌ನಲ್ಲಿ ಹೆರಿಗೆಯಾದ ಪ್ರಕರಣಕ್ಕೂ ಈ ನಿಯಮ ಅನ್ವಯಿಸುತ್ತದೆ. ಇಲ್ಲಿ, ಜೈಲರ್ ಮತ್ತು ಹೋಟೆಲ್ ಮ್ಯಾನೇಜರ್ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

4. ಹೊಸ ಕಾಯಿದೆಯ ಅಡಿಯಲ್ಲಿ, ಇದನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ. ದತ್ತು ಪಡೆದ ಪೋಷಕರು, ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗು ಮತ್ತು ಒಂಟಿ ಪೋಷಕರಿಗೆ ಅಥವಾ ಅವಿವಾಹಿತ ತಾಯಿ ಮಗುವಿನ ಜನನದ ಸಂದರ್ಭದಲ್ಲಿ ಯಾರು ಪೋಷಕರು ಇರುತ್ತಾರೆ ಅವರ ದಾಖಲೆಗಳನ್ನು ನೀಡಬಹುದು.

5.ಹೊಸ ಶಾಸನವು ಕೇಂದ್ರ ಸರ್ಕಾರದ ಅನುಮೋದನೆಗೆ ಒಳಪಟ್ಟು ಜನಸಂಖ್ಯೆಯ ನೋಂದಣಿಗಳು, ಮತದಾರರ ಪಟ್ಟಿಗಳು ಮತ್ತು ಇತರ ಅಧಿಕೃತ ಪ್ರಾಧಿಕಾರಗಳೊಂದಿಗೆ ರಾಷ್ಟ್ರೀಯ ಡೇಟಾಬೇಸ್​​ನ್ನು ಹಂಚಿಕೊಳ್ಳಲು ಅನುಮತಿ ನೀಡಲಾಗಿದೆ. ಜತೆಗೆ ರಾಜ್ಯದ ಡೇಟಾಬೇಸ್‌ಗಳನ್ನು ರಾಜ್ಯ-ಅನುಮೋದಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.

6.ಕಾಯಿದೆಯ ಪ್ರಕಾರ, ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ರ ಸರಿಯಾಗಿ ಪ್ರಕ್ರಿಯೆ ಅಥವಾ ಮನವಿಯನ್ನು ಸ್ವೀಕರಿಸದಿದ್ದರೆ, ಜಿಲ್ಲಾ ರಿಜಿಸ್ಟ್ರಾರ್ ಅಥವಾ ಮುಖ್ಯ ರಿಜಿಸ್ಟ್ರಾರ್‌ಗೆ ಮೇಲ್ಮನವಿ ಸಲ್ಲಿಸಬಹುದು. ಈ ಮನವಿಯನ್ನು 30 ದಿನಗಳಲ್ಲಿ ಮಾಡಬೇಕು. ಜಿಲ್ಲಾ ನೋಂದಣಾಧಿಕಾರಿ ಅಥವಾ ಮುಖ್ಯ ನೋಂದಣಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ ದಿನಾಂಕದಿಂದ 90 ದಿನಗಳ ಒಳಗಾಗಿ ಇದಕ್ಕೆ ಪ್ರಕ್ರಿಯೆ ನೀಡಬೇಕು.

Source: News Agencies

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07-07-2025 | ದಿಢೀರನೆ ಬದಲಾಯ್ತು ಹವಾಮಾನ | ಹೇಗಿರಬಹುದು ಹವಾಮಾನ..? | ಕರಾವಳಿ ಭಾಗದಲ್ಲಿ ಮಳೆ ಜಾಸ್ತಿ ಇರಬಹುದು ಏಕೆ..?

ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗಿದ್ದು, ಇಂದು ರಾತ್ರಿ ಮಧ್ಯಪ್ರದೇಶ ತಲುಪುವ ನಿರೀಕ್ಷೆ…

4 hours ago

ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮ

ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮವಹಿಸುವುದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ…

7 hours ago

ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ ಹಾಲಿನ ಸಂಗ್ರಹ 10 ಲಕ್ಷಕ್ಕೆ ಏರಿಸುವ ಗುರಿ

ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 10 ಲಕ್ಷಕ್ಕೆ ಏರಿಸುವುದು ನೂತನ ಆಡಳಿತ…

7 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಾಮ್‌ ಎಂ ಪಿ ಮಠದಗದ್ದೆ, ಶೃಂಗೇರಿ

ಪ್ರಣಾಮ್‌ ಎಂ ಪಿ, ಮಠದಗದ್ದೆ, 4 ನೇ ತರಗತಿ, ಕೆಪಿಎಸ್‌ ಶಾಲೆ, ಬೇಗಾರ್‌, …

8 hours ago

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ನಿರ್ವಿ ಜಿ ಎಂ

ನಿರ್ವಿ ಜಿ ಎಂ, 2 ನೇ ತರಗತಿ,  ಸರ್ಕಾರಿ ಶಾಲೆ , ಬಳ್ಪ…

8 hours ago

ಶುಕ್ರವಾರ ಈ ಪರಿಹಾರ ಮಾಡಿ ಸಾಕು, ಹಣದ ಸಮಸ್ಯೆ ಮಾಯವಾಗುತ್ತೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago