ಉದ್ಯಾನವನದಿಂದ ಕಾಡು ಸೇರಿದ ಮತ್ತೊಂದು ಚೀತಾ : ಸ್ವಚ್ಛಂದವಾಗಿ ತಿರುಗಾಡಲಿವೆ ಚೀತಾಗಳು

May 29, 2023
8:11 PM

ಭಾರತದಲ್ಲಿ ಚೀತಾಗಳ ತಳಿ ವಿನಾಶದಂಚಿಗೆ ತಲುಪಿದ್ದ ಕಾರಣ ದಕ್ಷಿಣ ಆಫ್ರೀಕಾದ ನಮೀಬಿಯಾದಿಂದ ಚೀತಾಗಳನ್ನು ತರಲಾಗಿತ್ತು. ಅದರ ಆರೈಕೆಗಾಗಿ ಅವುಗಳನ್ನು ಉದ್ಯಾನವನದಲ್ಲೇ ಇರಿಸಿಕೊಳ್ಳಲಾಗಿತ್ತು. ಇದೀಗ ಒಂದೋಂದೇ ಚೀತಾಗಳನ್ನು ಕಾಡಿಗೆ ಬಿಡುವ ಮೂಲಕ ಅದರ ಮೂಲ ವಾಸಸ್ಥಾನಗಳಲ್ಲಿ ಜೀವಿಸಲು ಅನುವು ಮಾಡಿಕೊಡಲಾಗುತ್ತಿದೆ.

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ (ಕೆಎನ್‌ಪಿ) ಇನ್ನೊಂದು ಚೀತಾವನ್ನು ಕಾಡಿಗೆ ಬಿಡಲಾಗಿದ್ದು, ಒಟ್ಟು ಏಳು ಚೀತಾಗಳನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ 3-4 ವರ್ಷ ವಯಸ್ಸಿನ ಹೆಣ್ಣು ಚೀತಾ ನೀರವವನ್ನು ಭಾನುವಾರ ಸಂಜೆ ಕೆಎನ್‌ಪಿಯ ಆವರಣದಿಂದ ಕಾಡಿಗೆ ಬಿಡಲಾಯಿತು ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಇಲ್ಲಿಯವರೆಗೆ, ಏಳು ಚೀತಾಗಳನ್ನು ಮುಕ್ತಗೊಳಿಸಲಾಗಿದೆ. ಆದರೆ ಇನ್ನೂ 10 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ ಎಂದು ಹೇಳಿದ್ದಾರೆ.

5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ಒಳಗೊಂಡ ಎಂಟು ನಮೀಬಿಯಾದಿಂದ ತರಲಾದ ಚೀತಾಗಳನ್ನು ಕೆಎನ್‌ಪಿಗೆ ತಂದು ಬಿಡಲಾಗಿತ್ತು, ಈ ಜಾತಿಯ ಚೀತಾಗಳು ಭಾರತದಲ್ಲಿ ನಾಶವಾದ ಕಾರಣ, ಮತ್ತೆ ಇದನ್ನು ಭಾರತದಲ್ಲಿ ಪರಿಚಯಿಸುವ ಕಾರಣದಿಂದ ಕಳೆದ ವರ್ಷ ಸೆಪ್ಟೆಂಬರ್ 17 ಮಹತ್ವದ ಚೀತಾಗಳನ್ನು ಕೆಎನ್‌ಪಿ ತಂದು ಬಿಡುವ ಕಾರ್ಯಕ್ರಮಗಳನ್ನು ಮಾಡಲಾಗಿತ್ತು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror