Soil Vasu ಅವರ ಫೇಸ್ಬುಕ್ ಪೇಜ್‌ನಿಂದ | ಪಶ್ಚಿಮ ಘಟ್ಟಗಳ ಕುರಿತ ಅಪೂರ್ವ ಪುಸ್ತಕ |

February 27, 2024
11:44 AM
ಪಶ್ಚಿಮ ಘಟ್ಟಗಳ ಉಳಿವು ಹಾಗೂ ಪ್ರಾಕೃತಿಕವಾದ ಸೊಬಗು ಉಳಿಯಬೇಕಿದೆ. ಪರಿಸರದ ಮೇಲೆ ನಡೆಯುವ ಕ್ರೌರ್ಯ ನಿಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ಸಾಯಿಲ್‌ ವಾಸು ಅವರ ಪೇಸ್‌ಬುಕ್‌ ಪೇಜಿನಿಂದ ಪಡೆದ ಬರೆಹ ಇಲ್ಲಿದೆ...

ಪಶ್ಚಿಮ ಘಟ್ಟಗಳ(Western Ghats) ಕುರಿತಂತೆ ಗೆಳೆಯ ಮಾಧವ ಐತಾಳ್ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಿರುವ ಋತ ಸರಣಿಯ “ವೈವಿಧ್ಯದ ತೊಟ್ಟಿಲು” ಎಂಬ ಪುಸ್ತಕ(Book) ಓದಿ ದಿಗ್ಮೂಢನಾಗಿ ಕುಳಿತಿದ್ದೇನೆ. ನಮ್ಮ ಕಣ್ಣಳತೆಗೆ ಕಾಣುವ ಬಂಡೀಪುರ(Bandipura), ಗೋಪಾಲಸ್ವಾಮಿ ಬೆಟ್ಟ(Gopalaswami Betta), ಬಿಳಿಗಿರಿರಂಗನ ಬೆಟ್ಟ(Biligirirangana Betta), ಮಧು ಮಲೈ, ನೀಲಗಿರಿ ಇದೆಲ್ಲಾ ಕೂಡ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿವೆ. ಹಾಗಾಗಿ ಕುತೂಹಲದಿಂದ ನಾನು ಪಶ್ಚಿಮ ಘಟ್ಟಗಳ ಕುರಿತಂತೆ ಮಾಹಿತಿಗಾಗಿ ಒಂದಷ್ಟು ಓದುತ್ತಾ ಕುಳಿತೆ.

Advertisement
Advertisement

ಅಭಿವೃದ್ಧಿಯ ಹೆಸರಲ್ಲಿ ಪರಿಸರದ ಮೇಲೆ ನಡೆಯುವ ಕ್ರೌರ್ಯ, ಅಟ್ಟಹಾಸ ಹೇಗೆ ಕೋಟ್ಯಾಂತರ ಜೀವಿಗಳ ವಿನಾಶಕ್ಕೆ ಕಾರಣವಾಗುತ್ತದೆ. ಪ್ರಕೃತಿ ವಿಕೋಪಕ್ಕೆ ಮುನ್ನುಡಿ ಬರೆಯುತ್ತದೆ ಎನ್ನುವುದನ್ನು ಮಾಧವ ಗಾಡ್ಗೀಳ್, ವಂದನಾ ಶಿವ, ಪಾಂಡುರಂಗ ಹೆಗಡೆ ಸೇರಿದಂತೆ ಪರಿಸರ ತಜ್ಞರ ಲೇಖನಗಳು ಮನಮುಟ್ಟುವಂತೆ ಹೇಳುತ್ತವೆ. ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೆ ತರಲು ಹಿಂದೇಟು ಹಾಕಿದ ರಾಜಕಾರಣಿಗಳು ಅದಕ್ಕಾಗಿ ಮತ್ತೆ ಕಸ್ತೂರಿ ರಂಗನ್ ವರದಿ ತಯಾರಿಸಿ ಹೇಗೆ ಪಶ್ಚಿಮ ಘಟ್ಟಗಳ ವಿನಾಶಕ್ಕೆ ಮುಂದಾಗಿದ್ದಾರೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಕಳೆದ ಮಳೆಗಾಲದಲ್ಲಿ ಕೇರಳ ಮತ್ತು ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ಆದ ಭೀಕರ ಪ್ರಕೃತಿ ವಿಕೋಪಕ್ಕೆ ಪಶ್ಚಿಮ ಘಟ್ಟಗಳ ಮೇಲೆ ನಡೆದ ಮಾನವ ದಾಳಿಯೇ ಕಾರಣ. ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟಗಳ ನಾಶ ಹೀಗೆ ಮುಂದುವರೆದರೆ ಮನುಕುಲ ಕೂಡಾ ವಿನಾಶದ ಹಂಚಿಗೆ ಬಂದು ನಿಲ್ಲಬೇಕಾಗುತ್ತದೆ.

ಜಗತ್ತಿನ ಎಂಟು ಹಾಟೆಸ್ಟ್ ಹಾಟ್ ಸ್ಪಾಟ್ ಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳಲ್ಲಿ 7402 ಹೂ ಬಿಡುವ ಸಸ್ಯಗಳು, 1814 ಹೂ ಬಿಡದ ಸಸ್ಯಗಳು, 508 ಪಕ್ಷಿ ಪ್ರಭೇದಗಳು, 139 ಸಸ್ತನಿಗಳು, 179 ಉಭಯಜೀವಿಗಳು, 290 ತಿಳಿ ನೀರಿನ ಮತ್ಸ್ಯಗಳು, 6000ಕ್ಕೂ ಅಧಿಕ ಕೀಟ ಪ್ರಭೇಧಗಳು ಇವೆ. ಇದರಲ್ಲಿ ಸಾಕಷ್ಟು ನಿರ್ವಂಶದ ಭೀತಿ ಎದುರಿಸುತ್ತಿವೆ. ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಅಣೆಕಟ್ಟು ಕಟ್ಟಲು ಮುಂದಾದಾಗ ಪರಿಸರವಾದಿಗಳ ವಿರೋಧಕ್ಕೆ ಮಣಿದು ಪ್ರಧಾನಿ ಇಂದಿರಾಗಾಂಧಿ ಯೋಜನೆ ಜಾರಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ ಪಶ್ಚಿಮ ಘಟ್ಟಗಳ ಉಳಿಸಿ ಹೋರಾಟ ಪ್ರಬಲವಾಯಿತು. ಸುಂದರಲಾಲ್ ಬಹುಗುಣ, ಮೇಧಾ‌ಪಾಟ್ಕರ್, ಶಿವರಾಮ ಕಾರಂತ, ಪಾಂಡುರಂಗ ಹೆಗಡೆ ಮುಂತಾದ ಪರಿಸರವಾದಿಗಳು ಪಶ್ಚಿಮ ಘಟ್ಟಗಳ ಪರನಿಂತರು.

ಹುಲಿ, ಆನೆ, ಕಾಳಿಂಗ ಸರ್ಪ, ಕಪ್ಪೆಗಳು ಸೇರಿದಂತೆ ಅನೇಕ ಜೀವಿಗಳ ಆವಾಸ ಸ್ಥಾನವಾಗಿರುವ ಪಶ್ಚಿಮ ಘಟ್ಟಗಳ ಬಗ್ಗೆ ಅರಿತು ಕೊಳ್ಳಲು ಈ ಪುಸ್ತಕ ಕೈದೀವಿಗೆಯಾಗಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ದಶಕಗಳಿಂದ ತೊಡಗಿಸಿಕೊಂಡಿರುವ ವಿಜ್ಞಾನಿಗಳು \ಹೋರಾಟಗಾರರು ಬರೆದಿರುವ ಈ ಪುಸ್ತಕ ಮುಂದೆ ಬರುವ ಜನಾಂದೋಲನಗಳಿಗೆ ದಾರಿ ದೀಪವಾಗಿ ಕೆಲಸಮಾಡಲಿದೆ. ಈ ಪುಸ್ತಕ ಓದುತ್ತಿರುವಾಗ ಯು.ಆರ್.ಅನಂತಮೂರ್ತಿ ಅವರ ಪೂರ್ವ ಪರದಲ್ಲಿನ ಮೊದಲ ಲೇಖನ ಮೌನ ಕಣಿವೆ, ಲಂಕೇಶ್ ಟೀಕೆ ಟಿಪ್ಪಣಿ ಯಲ್ಲಿರುವ ಮರ ಅಪ್ಪಿಕೊಂಡವರು, ಹಿಡಿದ ಕೊಡಲಿಯ ಹಿಂದೆ ಎಂಬ ಲೇಖನಗಳು ನೆನಪಾದವು.

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group