#BengaluruKambala | ಕರಾವಳಿಯಿಂದ ಬೆಂಗಳೂರಿಗೆ ತುಳುನಾಡ ವೈಭವ | ರಾಜಧಾನಿಯಲ್ಲಿ ನಡೆಯಲಿರುವ ಕಂಬಳಕ್ಕೆ ಭರ್ಜರಿ ತಯಾರಿ | ಪಕ್ಷಾತೀತವಾಗಿ ಅದ್ಧೂರಿಯಾಗಿ ನಡೆಯಿತು ಕರೆ ಪೂಜೆ |

October 11, 2023
2:27 PM
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ ನೆರವೇರಿತು. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಕಂಬಳಕ್ಕೆ ಅದರದೇ ಆದ ರೀತಿ ನೀತಿ, ಕ್ರಮಗಳು ಇದ್ದು ಅದರಲ್ಲಿ ಪ್ರಮುಖವಾದುದು ಕರೆ ಪೂಜೆ.ಕರೆ ಪೂಜೆ ನಡೆದ ಬಳಿಕ ನಿರಂತರವಾಗಿ ವೇಗದಿಂದ ಕಂಬಳದ ಕೆಲಸ ಕಾರ್ಯಗಳು ನಡೆಯಲಿದ್ದು, ಮುಂದಿನ 25 ದಿನಗಳಲ್ಲಿ ಕಂಬಳದ ಕೋಣಗಳು ಓಡುವ ಕರೆಗಳು ಸೇರಿದಂತೆ ಎಲ್ಲಾ ತಯಾರಿಗಳು ವೇಗ ಪಡೆಯಲಿದೆ.

ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಕಂಬಳ ಅಪ್ಪಟ ನೆಲದ ಕ್ರೀಡೆ. ನವೆಂಬರ್‌ನಿಂದ ಏಪ್ರಿಲ್‌ತನಕ ನಡೆಯುವ ಈ ಕ್ರೀಡೆ ಪ್ರತೀ ವಾರಾಂತ್ಯ ಶನಿವಾರ ಬೆಳಗ್ಗೆ ಆರಂಭಗೊಂಡು ಭಾನುವಾರ ಸಂಜೆ ತನಕ ನಡೆಯುತ್ತದೆ. ತುಳುನಾಡಿನ ಮಣ್ಣ ಕಂಪು ಸೂಸುವ ಜಾನಪದ ಕ್ರೀಡೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ #Bengaluru ಅದ್ಧೂರಿಯಾಗಿ ನಡೆಯಲಿದೆ. ಇದೇ ಬರುವ ನವೆಂಬರ್ 25 ಮತ್ತು 26ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕಂಬುಲ ನಡೆಯಲಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆ ನಡೆಯುತ್ತಿದೆ.

Advertisement
Advertisement

ಈ ಹಿನ್ನೆಲೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ ನೆರವೇರಿತು. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಕಂಬಳಕ್ಕೆ ಅದರದೇ ಆದ ರೀತಿ ನೀತಿ, ಕ್ರಮಗಳು ಇದ್ದು ಅದರಲ್ಲಿ ಪ್ರಮುಖವಾದುದು ಕರೆ ಪೂಜೆ.ಕರೆ ಪೂಜೆ ನಡೆದ ಬಳಿಕ ನಿರಂತರವಾಗಿ ವೇಗದಿಂದ ಕಂಬಳದ ಕೆಲಸ ಕಾರ್ಯಗಳು ನಡೆಯಲಿದ್ದು, ಮುಂದಿನ 25 ದಿನಗಳಲ್ಲಿ ಕಂಬಳದ ಕೋಣಗಳು ಓಡುವ ಕರೆಗಳು ಸೇರಿದಂತೆ ಎಲ್ಲಾ ತಯಾರಿಗಳು ವೇಗ ಪಡೆಯಲಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಂಬಳದ ಕರೆ ಪೂಜೆಯಲ್ಲಿ ಅನೇಕ ರಾಜಕೀಯ ನಾಯಕರು ಭಾಗಿಯಾದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |
May 28, 2025
2:27 PM
by: ಸಾಯಿಶೇಖರ್ ಕರಿಕಳ
ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!
May 28, 2025
11:04 AM
by: ದ ರೂರಲ್ ಮಿರರ್.ಕಾಂ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |
May 27, 2025
1:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group