ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಕಂಬಳ ಅಪ್ಪಟ ನೆಲದ ಕ್ರೀಡೆ. ನವೆಂಬರ್ನಿಂದ ಏಪ್ರಿಲ್ತನಕ ನಡೆಯುವ ಈ ಕ್ರೀಡೆ ಪ್ರತೀ ವಾರಾಂತ್ಯ ಶನಿವಾರ ಬೆಳಗ್ಗೆ ಆರಂಭಗೊಂಡು ಭಾನುವಾರ ಸಂಜೆ ತನಕ ನಡೆಯುತ್ತದೆ. ತುಳುನಾಡಿನ ಮಣ್ಣ ಕಂಪು ಸೂಸುವ ಜಾನಪದ ಕ್ರೀಡೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ #Bengaluru ಅದ್ಧೂರಿಯಾಗಿ ನಡೆಯಲಿದೆ. ಇದೇ ಬರುವ ನವೆಂಬರ್ 25 ಮತ್ತು 26ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕಂಬುಲ ನಡೆಯಲಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆ ನಡೆಯುತ್ತಿದೆ.
ಈ ಹಿನ್ನೆಲೆ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ ನೆರವೇರಿತು. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಕಂಬಳಕ್ಕೆ ಅದರದೇ ಆದ ರೀತಿ ನೀತಿ, ಕ್ರಮಗಳು ಇದ್ದು ಅದರಲ್ಲಿ ಪ್ರಮುಖವಾದುದು ಕರೆ ಪೂಜೆ.ಕರೆ ಪೂಜೆ ನಡೆದ ಬಳಿಕ ನಿರಂತರವಾಗಿ ವೇಗದಿಂದ ಕಂಬಳದ ಕೆಲಸ ಕಾರ್ಯಗಳು ನಡೆಯಲಿದ್ದು, ಮುಂದಿನ 25 ದಿನಗಳಲ್ಲಿ ಕಂಬಳದ ಕೋಣಗಳು ಓಡುವ ಕರೆಗಳು ಸೇರಿದಂತೆ ಎಲ್ಲಾ ತಯಾರಿಗಳು ವೇಗ ಪಡೆಯಲಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಂಬಳದ ಕರೆ ಪೂಜೆಯಲ್ಲಿ ಅನೇಕ ರಾಜಕೀಯ ನಾಯಕರು ಭಾಗಿಯಾದರು.
ಪಕ್ಷಾತೀತವಾಗಿ, ಧರ್ಮಾತೀತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಡಾ ಸಿಎನ್ ಅಶ್ವತ್ ನಾರಾಯಣ್, ಶಾಸಕ ಹ್ಯಾರೀಸ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಅನೇಕರು ಭಾಗಿಯಾದರು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ಈ ಕಂಬಳದಲ್ಲಿ ಎರಡು ದಿನಗಳ ಕಾಲ ಕೋಟ್ಯಂತರ ಮಂದಿ ಭಾಗವಹಿಸಲಿದ್ದಾರೆ.
ಇಂದಿನಿಂದ ಕಂಬಳಕ್ಕಾಗಿ ಅಖಾಡ ಸಿದ್ದಗೊಂಡಿದ್ದು, ಇಂದಿನಿಂದ ಒಂದು ತಿಂಗಳ ಕಾಲ ಕಂಬಳಕ್ಕಾಗಿ ಟ್ರ್ಯಾಕ್ (ಕಂಬಳ ಕರೆ) ತಯಾರಿಯಾಗಲಿದೆ. ಈಗಾಗಲೇ 80 ಜೋಡಿ ಕೋಣಗಳ ನೋಂದಣಿಯಾಗಿದ್ದು, ಒಟ್ಟು 125 ಜತೆ ಕೋಣಗಳು ಭಾಗಿಯಾಗಲಿದೆ. ಇಂದು ನಡೆಯುತ್ತಿರುವ ಕಂಬಳ ಕರೆ ಪೂಜೆಯಲ್ಲಿ ಅನೇಕ ಕೋಣಗಳ ಮಾಲೀಕರು, ನಿರ್ವಾಹಕರು, ಉಸ್ತುವಾರಿಗಳು ಕೂಡ ಭಾಗಿಯಾದರು. ಕಂಬಳದ ಯಶಸ್ಸಿಗೆ ತುಳು ಕೂಟ ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳು, ಬೆಂಗಳೂರು ಕಂಬಳ ಸಮಿತಿ ಸದಸ್ಯರು ವಿಶೇಷವಾಗಿ ಶ್ರಮಿಸಲಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…