ಹೈವೇಗಳು(highway), ಎಕ್ಸ್‌ಪ್ರೆಸ್‌ವೇಗಳು(Expressway) ಇತ್ತೀಚೆಗೆ ಬಹಳ ಅಭಿವೃದ್ಧಿ ಕಂಡಿದೆ. ಆದರೆ ಹೈವೇಗಳಲ್ಲಿ ಸಾಗಿದ್ದಷ್ಟು ದೂರ ಟೋಲ್(Toll) ಕಟ್ಟೋದೆ ದೊಡ್ಡ ತಲೆ ನೋವು. ಈಗಾಗಲೆ ಟೋಲ್ ಫೀ(Toll Fee) ಕಟ್ಟಿ ಕಟ್ಟಿ ಹೈರಾಣಾಗಿರುವ ಜನಕ್ಕೆ ಮತ್ತೆ ಇಂದಿನಿಂದ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ (National Highways) ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ (Expressways) ಟೋಲ್ ದರ (Toll Price) ಏರಿಕೆ ಆಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು3% ರಿಂದ 5% ರಷ್ಟು ಹೆಚ್ಚಿಸಿದ್ದು ಸೋಮವಾರದಿಂದಲೇ ಜಾರಿಗೆ ಬಂದಿದೆ.
Advertisement
18ನೇ ಲೋಕಸಭೆಯ ಚುನಾವಣೆಗೆ ಮತದಾನ ಮುಗಿದ ಒಂದು ದಿನದ ನಂತರ ಟೋಲ್ ಪ್ಲಾಜಾ ದರಗಳಲ್ಲಿ ಪರಿಷ್ಕರಣೆಯಾಗಿದೆ. ಪ್ರತಿ ವರ್ಷ ಏಪ್ರಿಲ್ 1 ರಿಂದ ಈ ದರ ಜಾರಿಗೆ ಬರುತ್ತದೆ. ಆದರೆ ಚುನಾವಣೆ ಇದ್ದ ಕಾರಣ ಬಳಕೆದಾರರ ಶುಲ್ಕವನ್ನು ತಡೆ ಹಿಡಿಯಲಾಗಿತ್ತು. ಸೋಮವಾರದಿಂದ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ ಟೋಲ್ ದರ ಏರಿಕೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಸೇರಿದ ಇತರ ಮಾನದಂಡಗಳನ್ನು ಪರಿಗಣಿಸಿ ದರ ಪರಿಷ್ಕರಣೆಯಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಅಡಿಯಲ್ಲಿ ಪ್ರತಿ ವರ್ಷ ಟೋಲ್ ದರ ಪರಿಷ್ಕರಣೆಯಾಗುತ್ತಿರುತ್ತದೆ.
- ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement