ಆಹಾರ ಭದ್ರತೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯವಾಗಿರುವುದು ಪೌಷ್ಟಿಕಾಂಶಯುಕ್ತ ಆಹಾರವೂ ಅಗತ್ಯ. ಇಂದು ಪ್ರಪಂಚದಲ್ಲಿ ಪೌಪ್ಟಿಕಾಂಶಯುಕ್ತ ಆಹಾರದ ಕಡೆಗೂ ಗಮನ ನೀಡಲಾಗುತ್ತಿದೆ. ಈ ದೃಷ್ಟಿಯಿಂದ ವಿವಿಧ ದೇಶದಲ್ಲಿ ಹಣ್ಣಿನ ಬೆಳೆಗಳ ಕಡೆಗೆ ಗಮನ ನೀಡಲಾಗುತ್ತಿದೆ. ಹೀಗಾಗಿ ಹಣ್ಣುಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಈಗಾಗಲೇ ಹಲವು ದೇಶಗಳಲ್ಲಿ ಹಣ್ಣು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಈಚೆಗೆ ಬಾಂಗ್ಲಾದೇಶವೂ ಕೂಡಾ ಹಣ್ಣು ಕೃಷಿಯ ಕಡೆಗೆ ಆದ್ಯತೆ ನೀಡಿದ್ದು ಮುಂದಿನ ಐದು ವರ್ಷಗಳಲ್ಲಿ ಮಾವು ಮತ್ತು ಹಲಸು 365 ದಿನವೂ ಲಭ್ಯವಿರುವಂತೆ ಕಾರ್ಯಯೋಜನೆ ಹಾಕಿಕೊಂಡಿದೆ.
ಹೊಸ ರೀತಿಯ ಹಣ್ಣುಗಳು ಮತ್ತು ಹೊಸ ವಿಧಾನದ ಕೃಷಿ ಬೆಳೆಗಳನ್ನು ಪರಿಚಯಿಸಲು ಬಾಂಗ್ಲಾದೇಶದಲ್ಲಿ ಸರ್ಕಾರವೇ ಕೆಲಸ ಮಾಡುತ್ತಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ವರ್ಷಪೂರ್ತಿ ಹಲಸು, ಮಾವಿನ ಹಣ್ಣು ಸಹಿತ ವಿವಿಧ ಬಗೆಯ ಹಣ್ಣಿನ ಕೃಷಿಯ ಕಡೆಗೆ ಬಾಂಗ್ಲಾದೇಶವು ಕ್ರಮ ಕೈಗೊಳ್ಳಲಿದೆ. ಈ ಮೂಲಕ ಆಹಾರ ಭದ್ರತೆ ಕಡೆಗೂ ಗಮನ ನೀಡುತ್ತಿದೆ. ಹಣ್ಣಿನ ಕೃಷಿಯ ಭವಿಷ್ಯದ ಬಗ್ಗೆಯೂ ಇದು ಮಹತ್ವದ ಸಂದೇಶ ನೀಡುತ್ತಿದೆ.
ಬಾಂಗ್ಲಾದೇಶದಲ್ಲಿ ಹೊಸ ರೀತಿಯ ಹಣ್ಣುಗಳು ಮತ್ತು ಇತರ ಕೃಷಿ ಬೆಳೆಗಳನ್ನು ಪರಿಚಯಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ವರ್ಷವಿಡೀ ಮಾವು ಮತ್ತು ಹಲಸುಗಳನ್ನು ಪಡೆಯಲಿದ್ದಾರೆ ಎಂದು ಬಾಂಗ್ಲಾದ ಕೃಷಿ ಕಾರ್ಯದರ್ಶಿ ವಹಿದಾ ಅಕ್ಟರ್ ಹೇಳಿದ್ದಾರೆ. ಸರ್ಕಾರವು ದೇಶದಲ್ಲಿ ಆಹಾರ ಭದ್ರತೆ ಮತ್ತು ಹಣ್ಣುಗಳ ಉತ್ಪಾದನೆ ಕಡೆಗೆ ಕೆಲಸ ಮಾಡುತ್ತಿದೆ. ಗುಣಮಟ್ಟದ ಹಣ್ಣು ಹಾಗೂ ಆರೋಗ್ಯದ ಹಿತದೃಷ್ಟಿಯಿಂದಲೂ ಇದು ಅಗತ್ಯವಿದೆ. ಹೀಗಾಗಿ ಹಣ್ಣುಗಳ ಉತ್ಪಾದನೆ ಭವಿಷ್ಯದ ಕೃಷಿಯಲ್ಲಿ ಅಗತ್ಯವಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ ದಿನಕ್ಕೆ ಸುಮಾರು 50 ಮಿಲಿಯನ್ ಮೊಟ್ಟೆಗಳು ಮತ್ತು ಸುಮಾರು 2.1 ಮಿಲಿಯನ್ ಟನ್ ಅಕ್ಕಿ ಅಗತ್ಯವಿದೆ. ಅಕ್ಕಿ ಉತ್ಪಾದನೆಯಲ್ಲಿ ಬಾಂಗ್ಲಾದೇಶ ಸ್ವಾವಲಂಬಿಯಾಗಿದೆ. ಆರೋಗ್ಯದ ದೃಷ್ಟಿಯಿಂದ ಹಣ್ಣಿನ ಬೆಳೆಗಳ ಅಗತ್ಯವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಣ್ಣಿನ ಉತ್ಪಾದನೆಯೂ ಪೂರ್ಣಗೊಳ್ಳಲಿದೆ. ಮುಂದಿನ ಐದು ವರ್ಷಗಳ ನಂತರ, ಮಾವು ಮತ್ತು ಹಲಸು 365 ದಿನಗಳಲ್ಲಿ ಲಭ್ಯವಿರುತ್ತದೆ ಎಂಬ ವಿಶ್ವಾಸವನ್ನು ಬಾಂಗ್ಲಾದೇಶ ಇರಿಸಿಕೊಂಡಿದೆ.