ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ

April 7, 2026
7:41 AM
ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ ನೆರವಿನಿಂದ ವಂಚಿತರಾಗುವ ಸಾಧ್ಯತೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ರೈತರು ‘ಫ್ರೂಟ್ಸ್’ (FRUITS) ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ತಿಳಿಸಿದ್ದಾರೆ.

ಬರಪರಿಹಾರ, ಬೆಳೆ ವಿಮೆ ಹಾಗೂ PM-Kisan ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆಗಳ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಈ ನೋಂದಣಿ ಅತ್ಯಗತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬರಪರಿಹಾರ, ಬೆಳೆ ವಿಮೆ, ಪಿ.ಎಂ. ಕಿಸಾನ್ (PM-Kisan) ಯೋಜನೆ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಈ ನೋಂದಣಿ ಅತ್ಯಗತ್ಯವಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಾಗೂ ಎಲ್ಲಾ ಜಮೀನಿನ ಪಹಣಿಗಳೊಂದಿಗೆ (RTC) ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ‘ಫ್ರೂಟ್ಸ್ ಐಡಿ’ (FRUITS ID) ಪಡೆದುಕೊಳ್ಳಬೇಕು ಎಂದು ಅವರು ವಿವರಿಸಿದರು.  ಒಂದು ವೇಳೆ ರೈತರು ಈ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಭವಿಷ್ಯದಲ್ಲಿ ಸರ್ಕಾರದಿಂದ ಸಿಗುವ ವಿವಿಧ ಆರ್ಥಿಕ ನೆರವು ಮತ್ತು ಇಲಾಖಾವಾರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು ಕೂಡಲೇ ಈ ತಂತ್ರಾಂಶದಲ್ಲಿ ತಮ್ಮ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

‘FRUITS ID’ ಪಡೆಯಲು ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಬ್ಯಾಂಕ್ ಪಾಸ್ಬುಕ್ ಪ್ರತಿ
  • ಎಲ್ಲಾ ಜಮೀನಿನ ಪಹಣಿ (RTC) ದಾಖಲೆಗಳು

ರೈತರು ಈ ದಾಖಲೆಗಳೊಂದಿಗೆ ಸಮೀಪದ

  • ರೈತ ಸಂಪರ್ಕ ಕೇಂದ್ರ
  • ಕಂದಾಯ ಇಲಾಖೆ ಕಚೇರಿ
  • ತೋಟಗಾರಿಕೆ ಇಲಾಖೆ
  • ರೇಷ್ಮೆ ಇಲಾಖೆ

ಇವುಗಳನ್ನು ಸಂಪರ್ಕಿಸಿ ತಮ್ಮ ‘FRUITS ID’ ಪಡೆಯಬಹುದು ಎಂದು ಸೂಚಿಸಲಾಗಿದೆ.

Farmers must register their land details in the FRUITS software to avail benefits of state and central government schemes. Joint Director Javeeda Naseema Khanum stated that schemes like PM-Kisan, crop insurance, and drought relief require mandatory FRUITS ID registration. Farmers are advised to complete the process with required documents to avoid missing benefits.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ
April 7, 2026
7:34 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ
April 6, 2026
7:32 PM
by: ದ ರೂರಲ್ ಮಿರರ್.ಕಾಂ
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ
April 6, 2026
6:59 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror