Update ಆಗುತ್ತಿದೆ ತಂತ್ರಾಂಶ | ಇಲಾಖೆಗಳ ನಡುವೆ ಸಮನ್ವಯದ ಕೊರತೆ | ಸಹಕಾರಿ ಸಂಘಗಳ ಸಂಕಷ್ಟ- ರೈತನಿಗೆ ಸುಸ್ತು…! |

December 1, 2021
10:35 PM

ಅತ್ಯುಪಯುಕ್ತವಾದ ನೂತನ ತಂತ್ರಾಶವೊಂದು ಚಾಲೂ ಆಗುತ್ತಿದೆ. ಅದು FRUITS (Farmer Registration and Unified beneficiary InformaTion System) .  ಆದರೆ ಇಲಾಖೆಗಳ ಸಮನ್ವಯದ ಕೊರತೆಯ ಕಾರಣದಿಂದ ಸಹಕಾರಿ ಸಂಘಗಳು, ಬ್ಯಾಂಕ್‌ ಗಳ ಪರದಾಟ ನಡೆಸುತ್ತಿದ್ದಾರೆ. ಕೃಷಿ ಸಾಲ ಅಥವಾ ಇತರ ಸಾಲ ಅಥವಾ ಇತರ ಸೌಲಭ್ಯ ಪಡೆಯಲು ಹೋದ ರೈತ ಸುಸ್ತಾಗಿದ್ದಾನೆ. ತಕ್ಷಣವೇ ಇಲಾಖೆಗಳು ಹಾಗೂ ಸರಕಾರ ಗಮನಿಸಬೇಕಿದೆ. 

Advertisement
Advertisement
Advertisement

ಸರಕಾರವು ಸುಲಭ ವ್ಯವಸ್ಥೆ, ಪಾರದರ್ಶಕ ವ್ಯವಸ್ಥೆ ಮಾಡಲು ಮುಂದಾಗಿದೆ. ನೂತನ ತಂತ್ರಾಂಶ FRUITS ಮೂಲಕ ಎಲ್ಲಾ ಮಾಹಿತಿಗಳೂ ಲಭ್ಯವಾಗುವುದು  ಹಾಗೂ ಕೃಷಿ ಸಾಲ ನೋಂದಣಿ ಸಹಿತ ಎಲ್ಲಾ ಅಂಶಗಳೂ ಈ ತಂತ್ರಾಂಶದಲ್ಲಿಯೇ ಲಭ್ಯವಾಗುವ ಅತ್ಯಂತ ವ್ಯವಸ್ಥಿತ ಯೋಜನೆ. ಆದರೆ ಇಲಾಖೆಗಳ ಸಮನ್ವಯದ ಕೊರತೆಯ ಕಾರಣದಿಂದ ಎಡವಿದೆ. ಇದರಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವು ಸಹಕಾರಿ ಸಂಘಗಳಲ್ಲಿ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

FRUITS ಎನ್ನುವುದು  ಈಗ ಸಿದ್ಧವಾದ ತಂತ್ರಾಂಶ(Software).  ಇದರ ಮೂಲಕ ಕೃಷಿಕರ ಎಲ್ಲಾ ಮಾಹಿತಿಗಳು ಲಭ್ಯವಾಗುವ ಹೊಸ ಯೋಜನೆ ಇದು. ಇದರಲ್ಲಿ ಬೆಳೆ ಸರ್ವೆಯಿಂದ ತೊಡಗಿ ಆರ್‌ ಟಿ ಸಿ ಮಾಹಿತಿ, ಬೆಳೆ ಮಾಹಿತಿ , ಕೃಷಿ ಸಾಲ ಹೀಗೆ ಎಲ್ಲವೂ ಲಭ್ಯವಾಗುತ್ತದೆ. ಅದರ ಜೊತೆಗೆ ಕೃಷಿ ಸಾಲ ನೋಂದಣಿಗೆ ನೋಂದಣಿ ಇಲಾಖೆಗೆ ಹೋಗದೆಯೇ ಸಹಕಾರಿ ಸಂಘ ಅಥವಾ ಬ್ಯಾಂಕ್‌ ಗಳಿಂದಲೇ ಕೆಲಸ ಮಾಡಲಾಗುತ್ತದೆ. ಇದಕ್ಕಾಗಿ ಡಿಸೆಂಬರ್‌ 1 ರಿಂದ ಸಾಲ ನೋಂದಣಿ ಮಾಡಲು ಇದೇ ನೂತನ ತಂತ್ರಾಂಶವನ್ನು ಬಳಕೆ ಮಾಡಲು ಸುತ್ತೋಲೆಯನ್ನೂ ಸರಕಾರವು ನೋಂದಣಿ ಇಲಾಖೆ ಹಾಗೂ ಸಹಕಾರಿ ಇಲಾಖೆಗೆ ಹೊರಡಿಸಿದೆ. ಇದರ ಪ್ರಕಾರ ಸಹಕಾರಿ ಸಂಘ ಅಥವಾ ಬ್ಯಾಂಕ್‌ ಗಳು  ಡಿಸೆಂಬರ್‌ ನಂತರ ನೋಂದಣಿ ಇಲಾಖೆಯ ಮೂಲಕ ಕೃಷಿ ಸಾಲ ನೋಂದಣಿ ಮಾಡುವ ಹಾಗಿಲ್ಲ.

ಸಹಕಾರಿ ಸಂಘಗಳು ಅಥವಾ ಬ್ಯಾಂಕಗಳೇ ಆನ್‌ ಲೈನ್‌ ಮೂಲಕ ಮಾಡಬೇಕು. ನೋಂದಣಿ ಇಲಾಖೆಯೂ ಈ ಕೆಲಸ ಮಾಡುವ ಹಾಗಿಲ್ಲ. ಇದು ಈಗ ಸಮಸ್ಯೆಗೆ ಕಾರಣವಾಗಿರುವ ಅಂಶವಾಗಿದೆ. ಯಾವುದೇ ತರಬೇತಿ ಇಲ್ಲದೆ ಸಹಕಾರಿ ಸಂಘದ ಸಿಬಂದಿಗಳು ಈ ಕೆಲಸ ಮಾಡುವ ಹಾಗಿಲ್ಲ, ಅದರ ಜೊತೆಗೆ ಈ ನೂತನ ತಂತ್ರಾಂಶವೂ ಸರಿಯಾಗಿ ಲಿಂಕ್‌ ಆಗುತ್ತಿಲ್ಲ. ಇದರಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದ ಕ ಜಿಲ್ಲೆಯಲ್ಲಿ  ಸಾಕಷ್ಟು ಸಹಕಾರಿ ಸಂಘಗಳನ್ನು ಈಗ ಸಾಲ ನೋಂದಣಿ ಕಾರ್ಯ ಆಗುತ್ತಿಲ್ಲ, ಇದರಿಂದ ಕೃಷಿಕರು ಸಾಲ ಅರ್ಜಿ ಸಲ್ಲಿಸಿ ಈಗ ಕಾಯಬೇಕಾಗಿದೆ. ಇದಿಷ್ಟೇ ಅಲ್ಲ, ಕೃಷಿಯ ಹಲವು ಕೆಲಸಗಳೂ ಈಗ ನೋಂದಣಿಯ ಕಾರಣದಿಂದ ವಿಳಂಬವಾಗುತ್ತಿದೆ. ಇದಕ್ಕಾಗಿ ಸಿಬಂದಿಗಳೀಗೆ ತರಬೇತಿ ನೀಡಿ ಒಂದು ತಿಂಗಳ ಅವಧಿಗೆ ಹಳೆಯ ಮಾದರಿಯನ್ನೇ ಮುಂದುವರಿಸಬೇಕು ಎಂಬುದು  ಕೃಷಿಕರು ಹಾಗೂ ಸಹಕಾರಿ ಸಂಘ ಮತ್ತು ಬ್ಯಾಂಕ್‌ ಗಳ ಒತ್ತಾಯ.

Advertisement

ನೋಂದಣಿ ಇಲಾಖೆ ಹಾಗೂ ಸಹಕಾರ ಇಲಾಖೆಗಳ ನಡುವೆ ಈ ಬಗ್ಗೆ ಸಮನ್ವಯ ಇಲ್ಲದೇ ಇದ್ದ ಕಾರಣದಿಂದ ಈ ಸಮಸ್ಯೆ ಈಗ ಕಂಡುಬಂದಿದೆ. ಈ ನೂತನ ತಂತ್ರಾಶವು ವಿವಿಧ ತಂತ್ರಾಂಶಗಳಿಗೆ ಸಂಪರ್ಕ ಹೊಂದಿ ಮಾಹಿತಿ ಪಡೆಯುತ್ತದೆ. ಆಧಾರ್‌ ಸಂಖ್ಯೆ ನೀಡಿದಾಕ್ಷಣ ಬ್ಯಾಂಕ್‌ ಮಾಹಿತಿ, ಪಹಣಿ ಮಾಹಿತಿ, ಬೆಳೆ ಮಾಹಿತಿ ಸೇರಿದಂತೆ ಕೃಷಿಕನ ಸಮಗ್ರ ಮಾಹಿತಿ ನೀಡುತ್ತದೆ.

ಈಗ FRUITS ತಂತ್ರಾಂಶವು ಕಾವೇರಿ, ಭೂಮಿ , ಬೆಳೆ ದರ್ಶಕ್‌, ವಿವಿಧ ಇಲಾಖೆಗಳಿಗೆ ಸಂಪರ್ಕ ಹೊಂದಿರುತ್ತದೆ. ಸಹಕಾರಿ ಸಂಘ ಅಥವಾ ಬ್ಯಾಂಕ್‌ ಗಳಲ್ಲಿ ಸಾಲ ಮಂಜೂರಾತಿ ಆದ ತಕ್ಷಣವೇ FRUITS ಮೂಲಕ ರೈತನ ಐಡಿಯನ್ನು ದಾಖಲಿಸಿದಾಗ ಸಂಪೂರ್ಣ ವಿವಿರ ಲಭ್ಯವಾಗುತ್ತದೆ, ಆ ಬಳಿಕ ಅಲ್ಲಿ ನೋಂದಣಿ ಮಾಡಿದ ನಂತರ ಕಾವೇರಿ ತಂತ್ರಾಂಶದಲ್ಲಿ  ನೋಂದಣಿ ಇಲಾಖೆಯಲ್ಲಿ ದಾಖಲಾದ ಬಳಿಕ ಮತ್ತೆ FRUITS ತಂತ್ರಾಶಕ್ಕೆ ಬಂದು ಅಲ್ಲಿಂದ ಭೂಮಿ ತಂತ್ರಾಂಶದಲ್ಲಿ ರೈತನ ಸಾಲ ದಾಖಲಾಗುತ್ತದೆ. ರೈತ ಯಾವ ಇಲಾಖೆಗೂ ಅಲೆದಾಟ ಮಾಡಬೇಕಾಗಿಲ್ಲ ಎನ್ನುವುದು  ಈಗಿನ ಮಾಹಿತಿ.

Advertisement

ಇಲ್ಲಿ ಯಾವ ಮಾಹಿತಿಯನ್ನೂ ಸಹಕಾರಿ ಸಂಘದ ಸಿಬಂದಿಗಳಿಗೆ ನೀಡಿದೆ ಏಕಾಏಕಿ ವ್ಯವಸ್ಥೆ ಬದಲಾಯಿಸಿದ  ಕಾರಣದಿಂದ   ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಇಲಾಖೆಗಳು ಗಮನಿಸಬೇಕಿದೆ. ಕನಿಷ್ಟ ಒಂದು ತಿಂಗಳ ಅವಧಿಗೆ ಹಿಂದಿನ ಮಾದರಿಯನ್ನೇ ಮುಂದುವರಿಸಬೇಕೆಂದು ಒತ್ತಾಯ ಕೇಳಿಬಂದಿದೆ.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror