ಸಾರ್ವಜನಿಕ ಬದುಕಿನಲ್ಲಿ ನಿರಾಸೆಯ ಸ್ಫೋಟ…

April 2, 2025
6:40 AM
ಸಾರ್ವಜನಿಕ ಬದುಕು ಅಂದರೆ ಹತ್ತಾರು ಜನರೊಡನೆ ಕೂಡಿ ಕೆಲಸ ಮಾಡಬೇಕು.ಈ ಹತ್ತಾರು ಜನ ಒಂದೇ ಮನೋಭಾವದವರಾಗಿರುವುದಿಲ್ಲ.ಇದರಲ್ಲಿ ಸ್ವಹಿತಾಸಕ್ತರು,ಮೋಸಗಾರರು,ಲಾಭಬಡುಕರುಗಳೂ ಇದ್ದೇ ಇರ್ತಾರೆ. ಹೀಗಾಗಿ ನಿರೀಕ್ಷೆಗೆ ತಕ್ಕಂತೆ ಕೆಲಸವಾಗುವುದಿಲ್ಲ, ನಿರಾಸೆ ಹೆಚ್ಚುತ್ತದೆ, ಇದು ಸ್ಫೋಟಕ್ಕೆ ಕಾರಣವಾಗುತ್ತದೆ. ಇಂದು ಬಹುತೇಕ ಕಡೆಗಳಲ್ಲಿ ಇದೇ ನಿರಾಸೆ ಸ್ಫೋಟವಾಗುತ್ತಿದೆ. ಮಧೂರಿನಲ್ಲಿ ಘಟನೆಯೂ ಅದೇ ಎನ್ನುವುದು ನನ್ನ ಅಂತರಂಗ.

ಸಾರ್ವಜನಿಕ‌ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಅಥವಾ ತೊಡಗಿಸಿ ಕೊಂಡವರನ್ನು ಖಾಸಾಗಿಯಾಗಿ ಮಾತನಾಡಿಸಿ ಕೇಳಿ ನೋಡಿ.ಯಾವತ್ತಾದರೂ frustrationಗೆ ಒಳಗಾದ ಘಳಿಗೆಗಳು ಇವೆಯೇ ಅಂತ.ಪ್ರತಿಯೊಬ್ಬರೂ ತಂತಮ್ಮ frustrationಗಳನ್ನು ಬಿಚ್ವಿಡ್ತಾರೆ ನೋಡಿ. ಯಾರು ಪ್ರಾಮಾಣಿಕರಿದ್ದಾರೋ, ಯಾರೋ ಶುದ್ಧ ಹಸ್ತರಿದ್ದಾರೋ ಅವರುಗಳ frustration ಘಟನೆಗಳು ಹೆಚ್ಚು ಇರ್ತವೆ ,ಇದಕ್ಕೆ ಸಂದೇಹವೇ ಬೇಡ.……..ಮುಂದೆ ಓದಿ…..

Advertisement

ಸಾರ್ವಜನಿಕ ಬದುಕು ಅಂದರೆ ಹತ್ತಾರು ಜನರೊಡನೆ ಕೂಡಿ ಕೆಲಸ ಮಾಡಬೇಕು.ಈ ಹತ್ತಾರು ಜನ ಒಂದೇ ಮನೋಭಾವದವರಾಗಿರುವುದಿಲ್ಲ.ಇದರಲ್ಲಿ ಸ್ವಹಿತಾಸಕ್ತರು,ಮೋಸಗಾರರು,ಲಾಭಬಡುಕರುಗಳೂ ಇದ್ದೇ ಇರ್ತಾರೆ.

ಆ ಕಾರಣದಿಂದಾಗಿಯೇ ಅಲ್ಲವೇ ಮೋದಿಯವರಿಗೆ 2014ರ ಬಳಿಕ ‘ ನ‌ ಖಾನೇ ದೂಂಗಾ’ ಅಂತ ಹೇಳುವ ಧೈರ್ಯ ಬರದೇ ಇದ್ದದ್ದು. ಸಾರ್ವಜನಿಕ‌ ಬದುಕಿನಲ್ಲಿ ಯೋಜನೆಯೊಂದನ್ನು ಹಮ್ಮಿಕೊಂಡು ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ಇಳಿದಾಗ ಸಹಾಯಹಸ್ತಗಳ ಜೊತೆಗೆ ಅಡೆತಡೆಗಳೂ ಎದುರಾಗುತ್ತವೆ.ಅಡೆತಡೆಗಳ ನಿವಾರಣೆಗಳೇ frustrationಗೆ ಕಾರಣೀಭೂತಗಳಾಗುವಂತಹವು.ಅದರಲ್ಲೂ ತಮ್ಮವರು ಎಂದುಕೊಂಡವರಿಂದಲೇ ಅಡ್ಡಿ ಎದುರಾದರೆ ಅಥವಾ ಸಹಾಯ ನಿರಾಕರಿಸಲ್ಪಟ್ಟರೆ ಆಗ ಈ frustration ನಿಯಂತ್ರಣದ ಪರಿಧಿಯಿಂದ ಹೊರಬರುತ್ತದೆ,ಅದೆಲ್ಲೋ ಆಸ್ಪೋಟ ಗೊಳ್ಳುತ್ತದೆ.

ಮಧೂರಿನಲ್ಲಾದ್ದೂ ಇದೇ ಇರಬಹುದು ಎಂಬುದು ನನ್ನ ಊಹೆ. ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಆಯ್ತು ಅಂದಾಗ ಒಂದಷ್ಟು ಭಾರ ಕಳಚಿದ ಅನುಭಾವ. ಅದನ್ನು ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಸರಕಾರದ ನಿರಾಸಕ್ತಿಯನ್ನು ಅರ್ಥೈಸಿಕೊಳ್ಳ ಬಹುದು. ಯಾಕೆಂದರೆ ಅದು ದೇವರನ್ನು ನಂಬದ , ನಾಸ್ತಿಕ ಪಕ್ಷದ ನೇತೃತ್ವದ ಸರಕಾರ. ಸರಕಾರದ ಹಣ ಬಿಡುಗಡೆ ಆಗಬೇಕು ಎಂದರೆ,ಎಲ್ಲರಿಗೂ ಗೊತ್ತಿರುವಂತಹದ್ದೇ, ಮಾನದಂಡಗಳು ಪೂರೈಕೆಯಾಗ ಬೇಕು ಮತ್ತು ಆಡಳಿತ ಯಂತ್ರದ ಚಕ್ರ ಚಲಿಸುವಂತೆ ಮಾಡಿಸುವ ಸಾಮರ್ಥ್ಯವೂ ಬೇಕು.ಇಲ್ಲಿ ರಾಜಕಾರಣಿಗಳ ಅಥವಾ ಮಧ್ಯವರ್ತಿಗಳ ಸಹಾಯ ಹಸ್ತ ಇಲ್ಲದೇ ಹಣ ಬಿಡುಗಡೆ ಮರೀಚಿಕೆಯಾದೀತು.

ಹೇಳಬಹುದು ಪದಗಳ ಬಳಕೆಯಲ್ಲಿ ಎಚ್ಚರ ಬೇಕಿತ್ತು ಅಂತ.ಆದರೆ ನೋವು ಸ್ಫೋಟದ ಹಂತದಲ್ಲಿ ಎಚ್ಚರ ವಹಿಸುವ ಸಾಮರ್ಥ್ಯ ಇರುವುದಿಲ್ಲ.ಆಗ ಎಚ್ಚರ ಬೇಕಾದ್ದು ಕೇಳುಗರಿಗೆ. frustration ಹಂತ ಮೀರಿದೆ ಅಂತ ಅರ್ಥೈಸಿಕೊಳ್ಳ ಬೇಕಾದ್ದು ಕೇಳುಗರ ಜವಾಬ್ದಾರಿ. ಮಿಕ್ಕೆಲ್ಲ ವಿಷಯಗಳೂ ಸಮರ್ಪಕವಾಗಿದೆ, ಒಂದೆಡೆ ಮಾತ್ರ ಎಡವಟ್ಟಾಗಿದೆ ಎಂಬಂತಹ ಸಂದರ್ಭದಲ್ಲಂತೂ ಇಂತಹ ಎಚ್ಚರದ ಅಗತ್ಯ ಕೇಳುಗರಿಗೆ ಹೆಚ್ಚು.

ಸಾರ್ವಜನಿಕ ಬದುಕಿನ ಅದರಲ್ಲೂ ರಾಜಕೀಯ ನಂಟು ಬಂದರೆ ಇನ್ನೊಂದೇ ಆಟ ಇಂತಹ ಸಂದರ್ಭ ನಡೆಯುತ್ತದೆ.ಎದುರಾಳಿ ತಂಡ ತನ್ನ ಸರ್ವ ಶಕ್ತಿಯನ್ನೂ ಬಳಸಿ ಈತನನ್ನು ಮಣಿಸಲು ಯತ್ನಿಸುತ್ತದೆ. ಅದರಲ್ಲೂ ಒಂದು ರಾಜಕೀಯ ಪಕ್ಷ ಹಲವು ಬಣಗಳಾಗಿ ವಿಭಜಿತ ಗೊಂಡಿದ್ದಾಗಲಂತೂ ಇಂತಹ ಹಣಿಯುವಿಕೆಯ ಯತ್ನ ತೀವ್ರಗತಿಯನ್ನು ಪಡೆಯುತ್ತದೆ. ಆತ ಒಂಟಿಯಾಗಬೇಕು ಎಂದೇ ಭಾವಿಸುತ್ತದೆ ಹಾಗೂ ಒಳಗೊಳಗೇ ಮುಸಿಮುಸಿ ನಗುತ್ತದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ
ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಸಾಗರ ತಾಲೂಕಿನ ನೀಚಡಿಯಲ್ಲೊಂದು ವಿಶಿಷ್ಟ “ಕೆರೆ ಹಬ್ಬ”
March 24, 2025
7:25 AM
by: ಪ್ರಬಂಧ ಅಂಬುತೀರ್ಥ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror

Join Our Group