ಹಾಲು ಮತ್ತು ಡೈರಿ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಎ1 ಮತ್ತು ಎ2 ಹಾಲು ಎಂದು ಇರುವ ಲೇಬಲ್‌ಗಳನ್ನು ತೆಗೆಯುವಂತೆ ಎಲ್ಲಾ ಹಾಲು ವ್ಯಾಪಾರ ನಿರ್ವಾಹಕರು ಮತ್ತು ಇ-ಕಾಮರ್ಸ್ ನ ಎಲ್ಲಾ ಹಾಲು ವಿತರಕರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಸೂಚಿಸಿದೆ.…..ಮುಂದೆ ಓದಿ….
FSSAI ಪರವಾನಗಿ ಸಂಖ್ಯೆಗಳನ್ನು ಬಳಸಿಕೊಂಡು ಎ1 ಮತ್ತುಎ2 ವರ್ಗೀಕರಣದ ಅಡಿಯಲ್ಲಿ ಹಲವಾರು ಸಂಸ್ಥೆಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಮತ್ತು ಮೊಸರುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಆಹಾರ ನಿಯಂತ್ರಕವು ಹಾಲಿನ ಎ1 ಮತ್ತು ಎ2 ವ್ಯತ್ಯಾಸವು ಮೂಲಭೂತವಾಗಿ ಪ್ರೋಟೀನ್‌ನ ವ್ಯತ್ಯಾಸಕ್ಕೆ ಸಂಬಂಧಿಸಿದೆ. ಆದ್ದರಿಂದ, ಹಾಲಿನ ಕೊಬ್ಬಿನ ಉತ್ಪನ್ನಗಳ ಮೇಲೆ ಯಾವುದೇ ಎ2 ಹಾಲಿನ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು FSSAI ಕಾಯಿದೆ 2006 ಮತ್ತು ಅದರ ನಿಬಂಧನೆಗಳಿಗೆ ಕೂಡಾ ಅನುಗುಣವಾಗಿಲ್ಲ ಎಂದು ಹೇಳಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿದ ಹಾಲಿನ ಮಾನದಂಡಗಳು,ಎ1 ಮತ್ತುಎ2 ಪ್ರಕಾರಗಳ ಆಧಾರದ ಮೇಲೆ ಹಾಲಿನ ಯಾವುದೇ ವ್ಯತ್ಯಾಸವನ್ನು ಉಲ್ಲೇಖಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು FSSAI ಹೇಳಿದೆ. ಹೀಗಾಗಿ ಮುಂದೆ ಈ ಬಗ್ಗೆ ಉಲ್ಲೇಖಿಸದಂತೆ ಸೂಚಿಸಿದೆ.