ಹಾಲು ಮತ್ತು ಡೈರಿ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಎ1 ಮತ್ತು ಎ2 ಹಾಲು ಎಂದು ಇರುವ ಲೇಬಲ್‌ಗಳನ್ನು ತೆಗೆಯುವ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಹೇಳಿದೆ.…..ಮುಂದೆ ಓದಿ….
FSSAI ಪರವಾನಗಿ ಸಂಖ್ಯೆಗಳನ್ನು ಬಳಸಿಕೊಂಡು ಎ1 ಮತ್ತುಎ2 ವರ್ಗೀಕರಣದ ಅಡಿಯಲ್ಲಿ ಹಲವಾರು ಸಂಸ್ಥೆಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಮತ್ತು ಮೊಸರುಗಳನ್ನು ಮಾರಾಟ ಮಾಡುತ್ತಿದ್ದವು. ಈ ಲೇಬಲ್ ಹಿಂಪಡೆಯಬೇಕು ಎಂದು FSSAI ವಾರದ ಹಿಂದೆ ಸೂಚನೆ ನೀಡಿತ್ತು. ಇದು ಕಾಯಿದೆ 2006 ಮತ್ತು ಅದರ ನಿಬಂಧನೆಗಳಿಗೆ ಕೂಡಾ ಅನುಗುಣವಾಗಿಲ್ಲ ಎಂದು ಹೇಳಿತ್ತು. ಇದೀಗ ಮುಂದಿನ ಕೆಲವು ನಿರ್ಧಾರಗಳವರೆಗೆ ಈ ಸೂಚನೆಯನ್ನು ಹಿಂಪಡೆಯಲಾಗಿದೆ ಎಂದು FSSAI ಪ್ರಕಟಣೆ ತಿಳಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel