ಕಾಳುಮೆಣಸು ಧಾರಣೆ ಈ ಬಾರಿ ಹೇಗಿರಬಹುದು..?

November 17, 2024
6:22 PM
ಕಾಳುಮೆಣಸು ಮಾರುಕಟ್ಟೆಯಲ್ಲಿ ಈ ಬಾರಿ ಆಶಾದಾಯಕ ವಾತಾವರಣ ಇದೆ.ಪ್ರಪಂಚದ ವಿವಿದೆಡೆ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಭಾರತದಲ್ಲೂ ಧಾರಣೆ ಏರಿಕೆಯ ನಿರೀಕ್ಷೆ ಇದೆ.

ಕಾಳುಮೆಣಸು ಮಾರುಕಟ್ಟೆಯಲ್ಲಿ ಬಹುತೇಕ ಸ್ಥಿರತೆ ಇದೆ.700 ರೂಪಾಯಿ ತಲಪಿದ್ದ ಕಾಳುಮೆಣಸಿನ ಧಾರಣೆ 610ಕ್ಕೆ ತಲಪಿದೆ. ಈ ಧಾರಣೆ ಮುಂದಿನ ಎರಡು ತಿಂಗಳಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಣೆ ಹೇಳಿದೆ.…..ಮುಂದೆ ಓದಿ….

Advertisement
Advertisement
Advertisement

ಕಾಳುಮೆಣಸು ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಧಾರಣೆಯೂ ಏರಿಕೆ ಕಂಡಿತು. ಹವಾಮಾನದ ಕಾರಣದಿಂದ ಪ್ರಪಂಚದಲ್ಲಿ ಕಾಳುಮೆಣಸು ಉತ್ಪಾದನೆಯಲ್ಲಿ ಕೊರತೆಯಾದ ಕಾರಣ ಆಮದು-ರಫ್ತು ವಹಿವಾಟು ಕೂಡಾ ಸಾಧ್ಯವಾಗದೆ  ಅಂತರಾಷ್ಟ್ರೀಯ ಕಾಳುಮೆಣಸು ಧಾರಣೆಯಲ್ಲಿ ಏರಿಕೆ ಕಂಡಿತು. ಭಾರತದಲ್ಲೂ ಕಾಳುಮೆಣಸು ಧಾರಣೆ 700 ರೂಪಾಯಿ ತಲಪಿತ್ತು. ಅದಾಗಿ ನಂತರ ಕಾಳುಮೆಣಸು ಬೆಳೆಯ ಅವಧಿಯಿಂದ ಉತ್ಪಾದನೆ ಹೆಚ್ಚಾಯಿತು. ಆಮದು-ರಫ್ತು ಸ್ವಲ್ಪ ಪ್ರಮಾಣದಲ್ಲಿ ಚುರುಕಾಯ್ತು. ಈ ನಡುವೆ ಶ್ರೀಲಂಕಾದಿಂದ ಭಾರತಕ್ಕೆ ಕಳಪೆ ಗುಣಮಟ್ಟದ ಕಾಳುಮೆಣಸು ಬಂದಿರುವ ಕಾರಣದಿಂದ ಭಾರತದಲ್ಲಿ ಧಾರಣೆ ಇಳಿಕೆಗೆ ಪ್ರಮುಖ ಕಾರಣವಾಯಿತು. ಹೀಗಾಗಿ 600 ರೂಪಾಯಿ ಆಸುಪಾಸಿನಲ್ಲಿ ಕಳೆದ ಸುಮಾರು 6 ತಿಂಗಳಿನಿಂದ ಇದೆ.

Advertisement

ಶ್ರೀಲಂಕಾ, ವಿಯೆಟ್ನಾಂ, ಬ್ರೆಜಿಲ್ ಮೊದಲಾದ ಕಾಳುಮೆಣಸು ಬೆಳೆಯುವ ದೇಶಗಳಿಂದ ಭಾರತ ಕಾಳುಮೆಣಸು ಆಮದು ಮಾಡಿಕೊಳ್ಳುತ್ತದೆ. ಈ ಸಲ 12 ಸಾವಿರ ಟನ್‌ನಷ್ಟು ಕಾಳುಮೆಣಸು ದೇಶಕ್ಕೆ ಬಂದಿದೆ. ಇದರಲ್ಲಿ ಶ್ರೀಲಂಕಾದಿಂದಲೇ 10 ಸಾವಿರ ಟನ್‍ನಷ್ಟು ಕಾಳುಮೆಣಸು ಬಂದಿದೆ. ಮುಕ್ತ ವ್ಯಾಪಾರ ಮಾರುಕಟ್ಟೆ ಒಪ್ಪಂದದ ಪ್ರಕಾರ ಶ್ರೀಲಂಕಾದಿಂದ ಭಾರತಕ್ಕೆ 2,500 ಟನ್‌ ಕಾಳುಮೆಣಸನ್ನು ಯಾವುದೇ ತೆರಿಗೆ ಇಲ್ಲದೆ ತರಬಹುದಾಗಿದೆ. ಹೀಗಾಗಿ ದೇಶೀಯ ಕಾಳುಮೆಣಸು ಧಾರಣೆ ಕಳೆದ ಬಾರಿ ಇಳಿಕೆಯಾಗಿತ್ತು. ಇತರ ದೇಶಗಳಲ್ಲಿ ಕಾಳುಮೆಣಸು ಉತ್ಪಾದನೆಯೂ ಕುಂಠಿತವಾಗಿತ್ತು.

ಈ ಬಾರಿ ಇನ್ನು ಕೆಲವೇ ಸಮಯದಲ್ಲಿ ಇಳುವರಿ ಆರಂಭವಾಗುತ್ತದೆ. ಸದ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಕಾಳುಮೆಣಸು ಇಳುವರಿ ಉತ್ತಮವಾಗಿದ್ದರೆ ಹಲವು ಕಡೆಗಳಲ್ಲಿ ಉತ್ತಮ ಇಳುವರಿ ಇಲ್ಲ. ಹವಾಮಾನದ ಕಾರಣದಿಂದ ಉತ್ತಮವಾದ ಫಸಲು ಕಾಣಲಿಲ್ಲ. ಈಗಾಗಲೇ ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಕಾಳುಮೆಣಸು ಇಳುವರಿ ಹಾಗೂ ಬೇಡಿಕೆಯ ಬಗ್ಗೆ ಲೆಕ್ಕಾಚಾರಗಳು ನಡೆದಿದೆ. ಅಲ್ಲಿ ಈ ಬಾರಿಯೂ ಕಾಳುಮೆಣಸು ಕೊರತೆಯ ನಿರೀಕ್ಷೆ ಇದೆ. ಹೀಗಾಗಿ ಧಾರಣೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ವಲಯ ಅಭಿಪ್ರಾಯಪಟ್ಟಿದೆ. ವಿಯೆಟ್ನಾಂ, ಬ್ರೆಜಿಲ್‌ ಸೇರಿದಂತೆ ಕಾಳುಮೆಣಸು ಬೆಳೆಯುವ ದೇಶಗಳಲ್ಲಿ ಈಗಾಗಲೇ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಇಳುವರಿ ಕೊರತೆ-ಬೇಡಿಕೆ ಹೆಚ್ಚಿದೆ.  ಹೀಗಾಗಿ ಕೆಲವು ವ್ಯಾಪಾರಿಗಳು ಕಾಳುಮೆಣಸಿನ ಜೊತೆ ಕಾಫಿ ಖರೀದಿಯತ್ತಲೂ ಆಸಕ್ತಿ ಹೊಂದಿದ್ದಾರೆ. ಕಾಫಿ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಲು ತೊಡಗಿದ್ದಾರೆ.

Advertisement

ಮಾರುಕಟ್ಟೆ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಹವಾಮಾನದ ಕಾರಣದಿಂದಲೇ ಕಾಳುಮೆಣಸು ಇಳುವರಿ ಕಡಿಮೆಯಾಗಿ ಬೇಡಿಕೆ ಹೆಚ್ಚಲಿದೆ. ಹೀಗಾಗಿ ಭಾರತದಲ್ಲೂ ಕಾಳುಮೆಣಸು ಧಾರಣೆ ಏರಿಕೆಯ ನಿರೀಕ್ಷೆ ಇದೆ. ಆಮದು ತಡೆಗೆ ಸೂಕ್ತ ಕ್ರಮಗಳು ಆದರೆ ಕನಿಷ್ಟ 700 ರೂಪಾಯಿ ತಲಪುವ ಸಾಧ್ಯತೆ ಇದೆ ಎನ್ನುತ್ತದೆ ಮಾರುಕಟ್ಟೆ ವಲಯ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror