(ಚಿತ್ರಕೃಪೆ - ಇಂಟರ್ನೆಟ್ )
ಯಕ್ಷಗಾನ ಕಲೆಯ ಪೋಷಣೆ ಹಾಗೂ ಕಲಾರಾಧನೆಯ ಸತ್ಕಾರ್ಯದೊಂದಿಗೆ ಕಲಾವಿದರನ್ನೂ ಪೋಷಿಸುವ ಸಾಮಾಜಿಕ ಕಳಕಳಿಯೊಂದಿಗೆ ಯಕ್ಷಕಲಾಭಿಮಾನಿ ಮಿತ್ರರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಅ.30 ರಂದು ಮಧ್ಯಾಹ್ನ 2.30 ರಿಂದ “ಗಾನಾರ್ಚನೆ” ನಡೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಿದ್ಧ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಭಾಗವಹಿಸಲಿದ್ದು ಚೆಂಡೆಯಲ್ಲಿ ಸುಬ್ರಹ್ಮಣ್ಯ ದೇಲಂತಮಜಲು, ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯ, ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ದುಗ್ಗಲಡ್ಕ ಭಾಗವಹಿಸುವರು. ಹರೀಶ್ ಬಳಂತಿಮೊಗ್ರು ಕಾರ್ಯಕ್ರಮ ನಿರೂಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಗೋವಿಂದ ಭಾಗವಹಿಸುವರು. ಯಕ್ಷಗಾನ ಸಂಘಟಕ ಮತ್ತು ವಿಮರ್ಶಕ ಎಸ್ ಎನ್ ಪಂಜಾಜೆ ಗೌರವ ಉಪಸ್ಥಿತರಿರುವರು.
ವಿಶೇಷ ಆಕರ್ಷಣೆಯಲ್ಲಿ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಅವರ ವಿಭಿನ್ನ ಶೈಲಿಯ ಹಾಡುಗಾರಿಕೆಯು ಗಮನ ಸೆಳೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ.
ಈಗಿನಂತೆ ವಾತಾವರಣದಲ್ಲಿ ಅಧಿಕ ತೇವಾಂಶ ಹಾಗೂ ವಿಪರೀತ ಸೆಕೆಯ ಕಾರಣ ಕರಾವಳಿಯ ಕೆಲವು…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ.ಉಡುಪಿ ಜಿಲ್ಲೆ 93.90% ರಷ್ಟು ಅತಿ ಹೆಚ್ಚು ಉತ್ತೀರ್ಣರಾಗಿದ್ದರೆ,…
ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಷೇರು ಮಾರುಕಟ್ಟೆ ಹಾಗೂ ಅಡಿಕೆ ಧಾರಣೆಯ ಮೇಲೆ…
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂಪಾಯಿ ಅಬಕಾರಿ ಸುಂಕ ಏರಿಕೆಯನ್ನು ಗ್ರಾಹಕರ…
ಧಾರವಾಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಶುದ್ಧ ಕುಡಿಯುವ ನೀರನ್ನು…
ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಹಣವೆ ಇತ್ತು. ರಾಜ್ಯದ ಅತಿ ಹೆಚ್ಚು…