#ನಮ್ಮೊಳಗಿನಗಾಂಧಿ | ಗಾಂಧಿ ಎಂದರೆ ಅದು ವ್ಯಕ್ತಿಯಲ್ಲ … ಅದೊಂದು ಚಿಂತನೆ | ನಮ್ಮೊಳಗಿನ ಗಾಂಧಿ ಈಗ ಎದ್ದು ಬರಲು ಸಮಯ |

October 2, 2021
7:00 AM

ಗಾಂಧಿ ಜಯಂತಿ. ಇದು ವ್ಯಕ್ತಿಯ ಆರಾಧನೆಯಲ್ಲ, ಇದೊಂದು ಚಿಂತನೆಯ ಆರಾಧನೆ. ಈ ಚಿಂತನೆ ಸಾರ್ವಕಾಲಿಕ ಸತ್ಯ.

Advertisement

ಈ ದೇಶದಲ್ಲಿ  ಮಹಾನ್‌ ರಾಷ್ಟ್ರಪುರುಷ ಹುಟ್ಟಿದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಸತ್ಯ, ಧರ್ಮ, ನ್ಯಾಯದ ಸಂದೇಶವನ್ನು ಸಾರಿ ರಾಷ್ಟ್ರಪಿತ ಎನಿಸಿಕೊಂಡ ಮಹಾನ್‌ ಚೇತನ. ಹೀಗಾಗಿಯೇ ಭಾರತ ಸರ್ವಶ್ರೇಷ್ಟ ಎನಿಸಿಕೊಳ್ಳಲು ಇಂತಹ ಚಿಂತನೆಗಳೂ ಒಂದು ಕಾರಣ. ಇಂದು ಉಳಿದಿರುವುದು  ಹಾಗೂ ಮುಂದೆ ಉಳಿಯುವುದು ಕೂಡಾ ಆ ಚಿಂತನೆ ಮಾತ್ರಾ. ವ್ಯಕ್ತಿ ಕೇಂದ್ರಿತವಾದ ಯಾವ ಆಚರಣೆಗಳೂ, ಯಾವ ದಿನಗಳು, ಯಾವ ಸಂಗತಿಗಳು ತಾತ್ಕಾಲಿಕ. ಈ ಚಿಂತನೆಯ ಆಚರಣೆಗಳು ಶಾಶ್ವತ. ಹೀಗಾಗಿಯೇ ಗಾಂಧೀಜಿ ಚಿಂತನೆ ಸಾರ್ವಕಾಲಿಕ ಸತ್ಯ. ಈ ಚಿಂತನೆ ಇಂದಿನ ದಿನ ಹೆಚ್ಚು ಪ್ರಸ್ತುತವಾಗಿದೆ.

ಸ್ವಚ್ಛತೆ, ಅಹಿಂಸೆ ಮೊದಲಾದವುಗಳು ಇಂದೂ ನೆನಪಾಗುತ್ತವೆ. ಗಾಂಧಿಯವರಿಗೆ, ಸತ್ಯ ಹಾಗೂ ಅಹಿಂಸೆಗಳು ಪರಂಪರೆಯಿಂದ ಬಂದ ವಿಷಯ ಆಗಿರಲಿಲ್ಲ, ಅದು ಆಚರಣೆಯ ದಾರಿಯಾಗಿತ್ತು. ಹಾಗಾಗಿಯೇ ಅದು ಈ ಮಣ್ಣಿನಲ್ಲೂ ನೆಲೆಯಾಯಿತು. ಈ ಮೌಲ್ಯಗಳ ಅನುಸರಣೆಯೇ ಅವರಿಗೆ ಒಂದು ನೆಲೆಯಲ್ಲಿ ಅಧ್ಯಾತ್ಮಿಕ ಸಾಧನೆ ಹಾಗೂ ಇನ್ನೊಂದು ನೆಲೆಯಲ್ಲಿ ರಾಜಕೀಯ ಕ್ರಿಯೆ ಆಗಿತ್ತು. ಗಾಂಧೀ ಚಿಂತನೆಗಳೆಲ್ಲವೂ ಹಾಗೆಯೇ. ಯಾವ ಕ್ಷೇತ್ರದಲ್ಲಿ ನೋಡಿದರೂ ಗಾಂಧಿ ಚಿಂತನೆ ಎದ್ದು ಕಾಣುತ್ತದೆ.

ಗಾಂಧಿವಾದವನ್ನು ಹೀಗೇ ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಅದು ಆಚರಣೆಯ ಮೂಲಕ ಜಾರಿಯಾಗಬೇಕು. ಗಾಂಧೀ ಚಿಂತನೆಯನ್ನು ಹೆಚ್ಚು ತಿಳಿಯುವ ಮೂಲಕ ಇನ್ನಷ್ಟು ಹತ್ತಿರವಾಗಬೇಕು. ಏಕೆಂದರೆ ಪ್ರಸ್ತುತ ಕಾಲಘಟ್ಟದ ಅಶಾಂತಿಯ ವಾತಾವರಣದಲ್ಲಿ ಪ್ರತೀ ವ್ಯಕ್ತಿಗೂ ಈ ಚಿಂತನೆಯ ಅವಶ್ಯಕತೆ ಇದೆ. ಸ್ವಾವಲಂಬನೆಯ ಹಾದಿ ಬೇಕಾಗಿದೆ, ಸಾತ್ವಿಕ ಹೋರಾಟದ ದಾರಿ ಅಗತ್ಯವಿದೆ. ಸ್ವಾಭಿಮಾನದ ಕಿಚ್ಚು ಬೇಕಾಗಿದೆ. ಹೀಗಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ಪ್ರೀತಿ, ಶಾಂತಿ, ಅಹಿಂಸೆ, ಸತ್ಯಗಳೆಡೆಗಿನ ನಮ್ಮ ಬದ್ಧತೆಯ ಬದುಕು ಗಟ್ಟಿಯಾಗಬೇಕು, ಅನುದಿನವೂ ನಮ್ಮ ಸಣ್ಣ ಸಣ್ಣ ಕ್ರಿಯೆಗಳಲ್ಲೂ ಈ ಚಿಂತನೆಗಳು ಪ್ರತಿಫಲಿಸಬೇಕು. ಗಾಂಧೀಜಿ ಸಾರ್ವಕಾಲಿಕ ಹಾಗೂ ಪ್ರತಿದಿನವೂ ಸತ್ಯವಾಗಿರಬೇಕು.

ಗಾಂಧಿ ಮೌಲ್ಯಗಳ ನಡುವಿನ ಮೌನ
ಈ ನೆಲೆಯಲ್ಲಿ ಸಾಹಿತಿ, ಚಿಂತಕ  ಅರವಿಂದ ಚೊಕ್ಕಾಡಿ ಅವರ ಗಾಂಧಿ ಮೌಲ್ಯಗಳ ನಡುವಿನ ಮೌನ ಪುಸ್ತಕದಿಂದ ಆಯ್ದ ಭಾಗಗಳನ್ನು ಪ್ರತಿದಿನವೂ ನಾವು ಪ್ರಕಟಿಸುತ್ತೇವೆ. ಗಾಂಧೀ ಚಿಂತನೆಯನ್ನು ಮುಂದಿನ ಪೀಳಿಗೆಗೆ “ಕನೆಕ್ಟ್”‌ ಮಾಡುವ ಅರವಿಂದ ಚೊಕ್ಕಾಡಿ ಅವರ ಚಿಂತನೆ ಅಗತ್ಯವಾಗಿ ಸಾಕಾರ ಆಗಬೇಕಾಗಿದೆ.

 

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ
ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ | ಐದು ಜನರ ಕಲಾವಿದರ ಕಲಾಕೃತಿಗಳ ಅನಾವರಣ
July 2, 2025
9:53 PM
by: The Rural Mirror ಸುದ್ದಿಜಾಲ
ಹಾಸನದಲ್ಲಿ ಹೃದಯಾಘಾತ ಪ್ರಕರಣ | ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ
July 2, 2025
9:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group