ಗಾಂಧಿ ಮಾದರಿ | ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿ ಆಚರಿಸಿದರು..! |

October 2, 2022
10:59 AM

ಎಲ್ಲೆಡೆಯೂ ಗಾಂಧಿ ಜಯಂತಿಯನ್ನು ಆಚರಿಸಿದರೆ ಸುಳ್ಯ ತಾಲೂಕಿನ ಪಂಜದ ಅಳ್ಪೆಯಲ್ಲಿ ಮಾತ್ರಾ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಮಹಾತ್ಮಾ ಗಾಂಧೀಜಿಯವರಂತೆಯೇ ವೇಷ ಧರಿಸಿ ಧ್ವಜಾರೋಹಣ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಿದವರು  ಪಂಜದ ಅಳ್ಪೆಯ ಜಿನ್ನಪ್ಪ ಅವರು.

Advertisement

ಸುಳ್ಯ ತಾಲೂಕಿನ ಪಂಜದ ಅಳ್ಪೆಯಲ್ಲಿ ಗ್ರಾಮ ಸ್ವರಾಜ್ಯ ಎಂಬ ತಂಡ ಹಲವು ಸಮಯಗಳಿಂದ ಕಾರ್ಯನಿರ್ವಹಿಸುತ್ತಿದೆ. ಗಾಂಧೀಜಿಯವರು ಕನಸಿನ ಗ್ರಾಮವನ್ನು ಕಟ್ಟುವ ಉದ್ದೇಶದೊಂದಿಗೆ ಇಲ್ಲಿ ಗ್ರಾಮ ಸ್ವರಾಜ್ಯ ಕೆಲಸ ಮಾಡುತ್ತಿದೆ. ಸ್ವಚ್ಛತೆ, ಆರೋಗ್ಯ, ವಸತಿ ಸೇರಿದಂತೆ ಗ್ರಾಮೀಣ ಭಾಗದ ಮೂಲಭೂತ ಸೇವೆಗಳ ಬಗ್ಗೆ ಸತತ ಹೋರಾಟ, ಆಂದೋಲನ, ಜಾಗೃತಿಯ ಮೂಲಕ ಊರಿನ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ. ಇದರ ನೇತೃತ್ವ ವಹಿಸಿದವರು ಜಿನ್ನಪ್ಪ ಗೌಡ ಅಳ್ಪೆ. ಇದೀಗ ಗಾಂಧಿ ಜಯಂತಿಯನ್ನು ಆಸುಪಾಸಿನ ಮಕ್ಕಳು ಹಾಗೂ ಹಿರಿಯರು ಸೇರಿಕೊಂಡು ಗಾಂಧಿಜಯಂತಿಯನ್ನು ವಿಶೇಷವಾಗಿ ಆಚರಿಸಿದರು. ಬಿಳಿ ದೋತಿ ಹಾಗೂ ಶಾಲು ಧರಿಸಿ , ಟೋಪಿ, ಕನ್ನಡಕ ಧರಿಸಿ ಗಾಂಧೀಜಿಯವರ ಚಿತ್ರ ಕಣ್ಣ ಮುಂದೆ ಬರುವಂತೆ ಮಾಡಿ ಧ್ವಜಾರೋಹಣಗೊಳಿಸಿ ಗಾಂಧಿ ಜಯಂತಿಯನ್ನು ಆಚರಿಸಿದರು.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ
April 4, 2025
7:22 AM
by: The Rural Mirror ಸುದ್ದಿಜಾಲ
ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?
April 4, 2025
7:16 AM
by: ದ ರೂರಲ್ ಮಿರರ್.ಕಾಂ
ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |
April 4, 2025
12:17 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
April 3, 2025
8:17 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group