ಎಲ್ಲೆಡೆಯೂ ಗಾಂಧಿ ಜಯಂತಿಯನ್ನು ಆಚರಿಸಿದರೆ ಸುಳ್ಯ ತಾಲೂಕಿನ ಪಂಜದ ಅಳ್ಪೆಯಲ್ಲಿ ಮಾತ್ರಾ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಣೆ ನಡೆಯಿತು. ಮಹಾತ್ಮಾ ಗಾಂಧೀಜಿಯವರಂತೆಯೇ ವೇಷ ಧರಿಸಿ ಧ್ವಜಾರೋಹಣ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಿದವರು ಪಂಜದ ಅಳ್ಪೆಯ ಜಿನ್ನಪ್ಪ ಅವರು.
ಸುಳ್ಯ ತಾಲೂಕಿನ ಪಂಜದ ಅಳ್ಪೆಯಲ್ಲಿ ಗ್ರಾಮ ಸ್ವರಾಜ್ಯ ಎಂಬ ತಂಡ ಹಲವು ಸಮಯಗಳಿಂದ ಕಾರ್ಯನಿರ್ವಹಿಸುತ್ತಿದೆ. ಗಾಂಧೀಜಿಯವರು ಕನಸಿನ ಗ್ರಾಮವನ್ನು ಕಟ್ಟುವ ಉದ್ದೇಶದೊಂದಿಗೆ ಇಲ್ಲಿ ಗ್ರಾಮ ಸ್ವರಾಜ್ಯ ಕೆಲಸ ಮಾಡುತ್ತಿದೆ. ಸ್ವಚ್ಛತೆ, ಆರೋಗ್ಯ, ವಸತಿ ಸೇರಿದಂತೆ ಗ್ರಾಮೀಣ ಭಾಗದ ಮೂಲಭೂತ ಸೇವೆಗಳ ಬಗ್ಗೆ ಸತತ ಹೋರಾಟ, ಆಂದೋಲನ, ಜಾಗೃತಿಯ ಮೂಲಕ ಊರಿನ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದೆ. ಇದರ ನೇತೃತ್ವ ವಹಿಸಿದವರು ಜಿನ್ನಪ್ಪ ಗೌಡ ಅಳ್ಪೆ. ಇದೀಗ ಗಾಂಧಿ ಜಯಂತಿಯನ್ನು ಆಸುಪಾಸಿನ ಮಕ್ಕಳು ಹಾಗೂ ಹಿರಿಯರು ಸೇರಿಕೊಂಡು ಗಾಂಧಿಜಯಂತಿಯನ್ನು ವಿಶೇಷವಾಗಿ ಆಚರಿಸಿದರು. ಬಿಳಿ ದೋತಿ ಹಾಗೂ ಶಾಲು ಧರಿಸಿ , ಟೋಪಿ, ಕನ್ನಡಕ ಧರಿಸಿ ಗಾಂಧೀಜಿಯವರ ಚಿತ್ರ ಕಣ್ಣ ಮುಂದೆ ಬರುವಂತೆ ಮಾಡಿ ಧ್ವಜಾರೋಹಣಗೊಳಿಸಿ ಗಾಂಧಿ ಜಯಂತಿಯನ್ನು ಆಚರಿಸಿದರು.
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…