Advertisement
MIRROR FOCUS

ಗಾಂಧಿ ಜಯಂತಿ | ಇಂದಿಗೂ ಪ್ರಸ್ತುತವಾಗಿವೆ ಮಹಾನ್‌ ನಾಯಕನ ಚಿಂತನೆಗಳು

Share
ಶಸ್ತ್ರ ಸನ್ಯಾಸ ಮಾಡಿರುವ ನನ್ನಲ್ಲಿ, ನನ್ನನ್ನು ದ್ವೇಷಿಸುವವರಿಗೆ ಕೊಡಲು ಪ್ರೇಮ ತುಂಬಿದ ಬಟ್ಟಲಲ್ಲದೆ ಬೇರೇನೂ ಇಲ್ಲ” – ಮಹಾತ್ಮ ಗಾಂಧಿ

ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ವ್ಯಕ್ತಿಗತವಾಗಿಯೇ ನಾವು ಇದಕ್ಕೆ ಬಹಳ ಮಹತ್ವ ಕೊಡುತ್ತೇವೆ. ಹಾಗಿದ್ದಾಗ ದೇಶ ಇನ್ನೊಬ್ಬರ ಅಡಿಯಾಳಾಗಿರುವದನ್ನು ಸಹಿಸುವುದು ಸಾದ್ಯ‌ವೇ? ವ್ಯಾಪಾರದ ಉದ್ದೇಶದಿಂದ ಭಾರತದ ಬಂದರಿನಲ್ಲಿ ‌ಇಳಿದ ಆಂಗ್ಲರನ್ನು ಇಲ್ಲಿನ ಸಮೃದ್ಧ ಸಂಪತ್ತನ್ನು ಆಕರ್ಷಿಸಿತು. ಆ ದಿನಗಳಲ್ಲಿ ನಮ್ಮಲ್ಲಿದ್ದ‌ ಆಡಳಿತಾರೂಢ ಗೊಂದಲಗಳು, ಅರಾಜಕತೆ, ಒಳ ಜಗಳಗಳನ್ನು ಸಮರ್ಥವಾಗಿ ಬಳಸಿಕೊಂಡ ವಿದೇಶಿಯರು ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ದೇಶದೆಲ್ಲೆಡೆ ಹೋರಾಟ ಆರಂಭವಾಯಿತು. ಸುಧೀರ್ಘ ವಾದ ಹೋರಾಟದಲ್ಲಿ ಹೊಸ ಅಧ್ಯಾಯ ವನ್ನು ಬರೆದವರು ಮಹಾತ್ಮ ಗಾಂಧೀಜಿಯವರು. ರಕ್ತಸಿಕ್ತ ವಾದ ಹಾದಿಯಲ್ಲಿ ಅಹಿಂಸಾತ್ಮಕ ಚಳುವಳಿಯ ಭಾಷ್ಯ ಬರೆದವರು ಗಾಂಧೀಜಿಯವರು.

Advertisement
Advertisement
Advertisement
Advertisement

 

Advertisement

ಗಾಂಧೀಜಿಯವರ ಜೀವನ ಸಿದ್ಧಾಂತವೇ ಅಪೂರ್ವ ವಾದುದು. ಅಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ, ಅಹಿಂಸೆಯೇ ದ್ವಿತೀಯ ಪ್ರಾಮುಖ್ಯತೆ. ಸತ್ಯ ಅವರ ಸಿದ್ಧಿಯಾದರೆ, ಅಹಿಂಸೆ ಜೀವನ ಸಾಧನೆ. ಇವೆರಡಕ್ಕೂ ಗಾಂಧೀಜಿಯವರೇ ಪ್ರವರ್ತಕರಲ್ಲ. ಆದರೆ ಇವೆರಡನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ತ್ರ ವಾಗಿ ಬಳಸಿ ಯಶಸ್ವಿಯಾದ ನಿಜ ಹೋರಾಟಗಾರ.ಉಪವಾಸ ,ಸತ್ಯಾಗ್ರಹ, ದೇಶದುದ್ದಕ್ಕೂ ಕಾಲ್ನಡಿಗೆಯಲ್ಲಿ ಜನಜಾಗೃತಿಯನ್ನು,  ದೇಶಪ್ರೇಮವನ್ನು ಉದ್ದೀಪನಗೊಳಿಸಿದ ಮಹಾತ್ಮ. ಹಾಗಾಗಿ ಮೋಹನದಾಸ ಕರಮಚಂದ್ರ ಗಾಂಧಿಯವರಾಗಿ ಉಳಿಯದೆ’ ರಾಷ್ಟ್ರಪಿತ’ರಾದರು. ಅವರೊಳಗೊಬ್ಬ ಉತ್ತಮ ಓದುಗನಿದ್ದ, ಬರಹಗಾರನಿದ್ದ, ಭಾಷಣಗಾರನಿದ್ದ., ವಕೀಲರೂ ಹೌದು.

ಸರಳತೆಯನ್ನೇ ಜೀವನ ಧರ್ಮವಾಗಿಸಿಕೊಂಡು ದೇಶವಾಸಿಗಳಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದವರು. ತಾವು ಆಚರಿಸಿ ಉಳಿದವರಿಗೆ ಮಾದರಿಯಾದರು. ಗ್ರಾಮ ಗ್ರಾಮಗಳಲ್ಲಿ ಖಾದಿ ಬಟ್ಟೆಗಳ ಉಪಯೋಗದ ಮಹತ್ವ ವನ್ನು ಸಾರುತ್ತಾ ಸ್ವಾವಲಂಬನೆಯ ಪಾಠವನ್ನು ಸಾರಿದರು. ಕೃಷಿ ಹಾಗು ಗುಡಿಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಪೂರಕವೆಂಬುದನ್ನು ದೃಢವಾಗಿ ನಂಬಿದ್ದರು.

Advertisement

ಪೋರಬಂದರ್ ನಲ್ಲಿ 1869  ಒಕ್ಟೋಬರ್ 2 ರಂದು ಕರಮಚಂದ್ರ ಗಾಂಧಿ ಹಾಗೂ ಪೂತಲಿಬಾಯಿಯವರ ಮಗನಾಗಿ ಮೋಹನದಾಸ್ ಕರಮಚಂದ್ರ ಗಾಂಧಿಯವರು ಜನಿಸಿದರು. ಇವರ ಹೋರಾಟದ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತವರು ಕಸ್ತೂರಬಾ ಗಾಂಧಿ ಯವರು. ಬದುಕಿನಲ್ಲಿ ಶ್ರೀಮಂತ ವರ್ಗದವರಂತೆ ಬಾಳುವ ಎಲ್ಲಾ ಅವಕಾಶಗಳಿದ್ದರೂ , ತನ್ನ ಆವಶ್ಯಕತೆನ್ನು ಕನಿಷ್ಟ ಗೊಳಿಸಿ ಬದುಕಿ ಜಗತ್ತಿಗೇ ತೋರಿಸಿದರು.

ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಿ ಬೆಳೆದ ಪರಿಗೆ ಗಾಂಧೀಜಿಯವರು ಉತ್ತಮ ಉದಾಹರಣೆ. ಅವರ ಆದರ್ಶಗಳನ್ನು , ರಾಮರಾಜ್ಯದ ಕನಸುಗಳನ್ನು ನನಸಾಗಿಸುವತ್ತ ಸಾಗುವ ಆಶಯದೊಂದಿಗೆ ಗಾಂಧಿ ಜಯಂತಿಯ ಶುಭಾಶಯಗಳು.

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

34 mins ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

42 mins ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

53 mins ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

1 hour ago

15000 ಶಿಕ್ಷಕರ ಶೀಘ್ರ ನೇಮಕ | ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…

1 hour ago

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

1 day ago