ಗಾಂಧಿ ವಿಚಾರ ವೇದಿಕೆ | ಪ್ರತೀ ಹಳ್ಳಿಗಳೂ ಸ್ವಾವಲಂಬೀ ಬದುಕಿಗೆ ಪ್ರೇರಣೆಯಾಗಬೇಕು | ಸುಬ್ರಾಯ ಚೊಕ್ಕಾಡಿ ಅಭಿಮತ |

August 20, 2021
7:59 PM

ಗಾಂಧಿ ಪ್ರಣೀತವಾದ ಶಿಕ್ಷಣವು ಸಾರ್ವಕಾಲಿಕ ಸತ್ಯ.ಗಾಂಧಿ ಶಿಕ್ಷಣದಿಂದ ಸ್ವಾವಲಂಬನೆ ಪಾಠ ಲಭ್ಯವಿರುತ್ತಿತ್ತು. ಶಾಲೆಯ ಕೊನೆಗೆ ಬದುಕಿಗೆ ಅಗತ್ಯವಾದ ಸ್ವಾವಲಂಬನೆಯ ಪಾಠ ಸಿಗಬೇಕಾದ್ದು ಅಗತ್ಯ. ಪ್ರತೀ ವ್ಯಕ್ತಿಯೂ ಸ್ವಾವಲಂಬಿಯಾಗುವ ಮೂಲಕ ಪ್ರತೀ ಹಳ್ಳಿಯೂ ಸ್ವಾವಲಂಬೀ ಬದುಕಿಗೆ ಪ್ರೇರಣೆಯಾಗಬೇಕು ಎಂದು ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.

Advertisement

ಅವರು ಶುಕ್ರವಾರ ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತೀ ವ್ಯಕ್ತಿ ಸ್ವಾವಲಂಬಿಯಾಗಬೇಕು. ಅದು ಗಾಂಧೀಜಿಯವರ ಚಿಂತನೆಗಳಿಂದ ಸಾಧ್ಯವಿದೆ. ಹಿಂದೆಲ್ಲಾ ಶಿಕ್ಷಣದ ಕೊನೆಗೆ ಶಾಲೆಯಲ್ಲಿ  ಈ ಪಾಠ ಲಭ್ಯವಿತ್ತು. ಕಲಿಯಬೇಕಾದ್ದು ಕೂಡಾ ಅದೇ, ಬದುಕಿಗೆ ಅಗತ್ಯವಾದ ಶಿಕ್ಷಣ ಅದು. ಗಾಂಧೀ ಎನ್ನುವುದು ಒಂದು ಸಂಕೇತ, ರೂಪಕ, ವಾಸ್ತವೂ ಹೌದು. ಗಾಂಧೀಜಿ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಅನೇಕ ಗಾಂಧೀಜಿ ಪ್ರಣೀತವಾದ ವಿಷಯಗಳನ್ನೂ ಅನುಸರಿಸಲೂ ಸಾಧ್ಯವಿಲ್ಲ. ಆದರೆ ಕೆಲವನ್ನು ಅನುಸರಿಸಲು ಸಾಧ್ಯವಿದೆ. ವೈಜ್ಞಾನಿಕ ಚಿಂತನೆಗಳು, ಅನೇಕ ಸಂಗತಿಗಳು ಉಳಿಸಿಕೊಳ್ಳಲು ಹಾಗೂ ಬೆಳೆಸಲು, ಅನುಸರಿಸಲು ಸಾಧ್ಯ ಎಂದು ಸುಬ್ರಾಯ ಚೊಕ್ಕಾಡಿ ಹೇಳಿದರು. ದೇಶದಲ್ಲಿ ಇರುವ ಎಲ್ಲರೂ ದೇಶ ಭಕ್ತರೇ, ವೈಚಾರಿಕ ಚಿಂತನೆ ಮಾತ್ರಾ ಬೇರೆ ಬೇರೆ. ದೇಶ ಹಾಳಾಗಿ ಹೋಗಲು ಎಂದು ಯಾರೂ ಬಯಸುವುದಿಲ್ಲ, ದೇಶ ಭಕ್ತಿ ಭಾಷಣದಲ್ಲಿ ಅಲ್ಲ, ಅದು ನಾವು ಪ್ರಾರಂಭಿಸುವ ಕೆಲಸದಿಂದ ಬರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿಕ ಶ್ರೇಯಾಂಸ್‌ ಕುಮಾರ್‌ ಪಂಜ, ಗಾಂಧಿ ವಿಚಾರ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯ ಇದೆ. ಈ ಚಿಂತನೆಗೆ ಯಾವಾಗಲೂ ಮಹತ್ವ ಇದೆ. ಇವತ್ತು ಕೊಲೆಯಾಗುತ್ತಿರುವುದು ಮನುಷ್ಯ ಅಲ್ಲ, ಮನುಷ್ಯತ್ವದ ಕೊಲೆ ಎಂದರು.

Advertisement

 

ಕಾರ್ಯಕ್ರಮದಲ್ಲಿ  ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ,  ಸಮಾಜದ ಪರಿವರ್ತನೆ‌ ಮಾಡುತ್ತಾ ಹೋದಾಗ ಇನ್ನೊಂದು ಸಮಸ್ಯೆ ಇರುತ್ತದೆ. ಕಳೆ ಕಿತ್ತ ಹಾಗೇ ಕಳೆ ಬರುವ ಹಾಗೇ ಸಮಾಜದ ಪರಿವರ್ತನೆಯೂ ನಿರಂತರ ಪ್ರಕ್ರಿಯೆ. ಇಂದು ಮನುಷ್ಯ‌ ಮನುಷ್ಯನನ್ನು‌ ಕೊಲ್ಲುವುದು ಭಯಾನಕ ಸ್ಥಿತಿ. ಈಗಾಗಲೇ ವಿಶ್ವಶಾಂತಿ ಆಗಬೇಕಿತ್ತು. ಆದರೆ ಭಾರತ ಈಗಲೂ ಸತ್ತ, ಧರ್ಮದ ಮಾರ್ಗದಲ್ಲಿದೆ. ಭಾರತದಲ್ಲಿ ಇಂದಿಗೂ ಮಾನವೀಯತೆ ಉಳಿದುಕೊಂಡಿದೆ.ಯಾರೂ ನಿರಾಶರಾಗಬೇಕಾಗಿಲ್ಲ.  ಭಾರತೀಯತೆ, ಗಾಂಧಿ ಚಿಂತನೆ‌ ಉಳಿದುಕೊಂಡಿದೆ ಹೀಗಾಗಿ ಭಾರತದ ಮಾನವೀಯ ‌ಮೌಲ್ಯ ಬೆಳಗಲಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಮಾತನಾಡಿ, ಗ್ರಾಮೀಣ ಜನರು ವೃತ್ತಿ ಸ್ವಾವಲಂಬನೆ ಮೂಲಕ ಸ್ವಾತಂತ್ರ್ಯ ಪಡೆಯಬೇಕಿದೆ. ಇದಕ್ಕೆ ಗಾಂಧೀ ಚಿಂತನೆಯೇ ಪರಿಹಾರವಾಗಿದ್ದು  ಇಂದು ಸಾತ್ವಿಕ ನೆಲೆಯ ಚಿಂತನೆ ಬೇಕು.‌ ಮಾನವ ಕುಲದ ವಿವೇಕ ದೇಶದೆಲ್ಲೆಡೆ ಇರಬೇಕು ಎಂದ ಅವರು  ಗಾಂಧಿ ಗಾಂಧಿಯಾಗಿಯೇ ಆತ್ಮ ಸ್ವರೂಪಿಯಾಗಿ ಇರುತ್ತಾರೆ ಎಂದಿಗೂ ನಾಶವಾಗಲು ಸಾಧ್ಯವಿಲ್ಲ ಎಂದರು.

Advertisement

ಮಹಾತ್ಮಾಗಾಂಧಿ ವಿದ್ಯಾ ಪೀಠದ ಪುರುಷೋತ್ತಮ ಮುಡೂರು ಮಾತನಾಡಿ, ಗಾಂಧೀಜಿ ಅವರ ಚಿಂತನೆಗಳನ್ನು  ಗ್ರಾಮೀಣ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಅನುಷ್ಟಾನ ಮಾಡಲು ಪ್ರತೀ ವ್ಯಕ್ತಿ ಮುಂದೆ ಬರಬೇಕು ಎಂದರು.

ಧಾರ್ಮಿಕ ಮುಂದಾಳು ತಿಮ್ಮಪ್ಪ ಗೌಡ ಪುತ್ಯ, ಕಾರ್ಮಿಕ ಮಹಿಳೆ ಪರಮೇಶ್ವರಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀಧರ ಬಿಡೆ ಮಾತನಾಡಿ, ಗಾಂಧಿ ತತ್ತ್ವ ಹಳ್ಳಿಯಿಂದಲೇ ಈಗ ಆರಂಭವಾಗಬೇಕು. ಅದರ ಅಗತ್ಯವಿದೆ. ಗಾಂಧೀ ಅಸ್ತಿತ್ವ, ಚಿಂತನೆಗಳೇ ಪ್ರಭಾವ ಬೀರುವ ಹಾಗಿರಬೇಕು. ಎಲ್ಲರೂ ಗಾಂಧಿಯಾಗಲು ಸಾಧ್ಯವಿಲ್ಲ, ಆದರೆ ಚಿಂತನೆಯನ್ನು ಬೆಂಬಲಿಸಬಹುದು, ಒಳ್ಳೆಯದನ್ನು ಒಳ್ಳೆಯದು ಎನ್ನಬಹುದು . ಪ್ರತೀ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರಲಿ ಹೀಗಿದ್ದರೆ ನೆಮ್ಮದಿಯ ದೇಶ ನಿರ್ಮಾಣ ಮಾಡಲು ಸಾಧ್ಯವಿದೆ. ಯಾವತ್ತೂ ಯೋಗ್ಯರ ಮೌನ, ಅಯೋಗ್ಯರ ಮಾತು  ಸಮಾಜಕ್ಕೆ ಅಪಾಯಕಾರಿ ಎಂದರು.

ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ ವಂದಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ನಿರೂಪಿಸಿದರು. ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಇದೇ ವೇಳೆ ತಾಲೂಕು ಸಮಿತಿ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು.

Advertisement

 

 

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ
July 9, 2025
9:19 PM
by: The Rural Mirror ಸುದ್ದಿಜಾಲ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ
July 9, 2025
9:16 PM
by: The Rural Mirror ಸುದ್ದಿಜಾಲ
ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ
July 9, 2025
9:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group