ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಸುಳ್ಯ ಘಟಕದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣಗೈದು ಮಾತನಾಡಿದ ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಕಾರ್ಯಪ್ಪ ಗೌಡ ಚಿಕ್ಮುಳಿ ಮಾತನಾಡಿ,”ಅನೇಕ ಹೋರಾಟಗಾರರ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಯಿತು. ಈಗ ದೇಶದಲ್ಲಿ ಕಂಡುಬರುತ್ತಿರುವ ಭ್ರಷ್ಟಾಚಾರ ಮುಕ್ತವಾಗಬೇಕಿದೆ. ಇದಕ್ಕೆ ಹಳ್ಳಿಯಿಂದ ಹೆಜ್ಜೆ ಆರಂಭವಾಗಬೇಕಿದೆ. ಹೀಗಾಗಿ ದೇಶಭಕ್ತಿ ಒಂದು ದಿನ ಕಾಣಬೇಕಾದ್ದಲ್ಲ. ಅದು ಕಲಿಸಿ ಬರುವಂತಾದ್ದೂ ಅಲ್ಲ. ಸದಾ ನಮ್ಮಲ್ಲಿ ಇರಬೇಕಾದ್ದು ಎಂದರು.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಖಂಡ ಅಶೋಕ್ ನೆಕ್ರಾಜೆ ಮಾತನಾಡಿ,” ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾಗಿದೆ. ಆದರೆ ಹಳ್ಳಿಗಳು ಇನ್ನೂ ಅಭಿವೃದ್ಧಿ ಪಥದಲ್ಲಿ ಕಾಣಬೇಕಿದೆ. ಹೀಗಾಗಿ ಅಭಿವೃದ್ಧಿಯ ನೆಲೆಯಲ್ಲಿ ಮುಂದಿನ ಹೆಜ್ಜೆ ಬೇಕಿದೆ. ಹೀಗಾಗಿ ವೈಚಾರಿಕವಾಗಿ ಪ್ರತೀ ವ್ಯಕ್ತಿ ಬೆಳೆಯಲು ಗಾಂಧಿ ವಿಚಾರ ವೇದಿಕೆಯ ಅಗತ್ಯವಿದೆ ” ಎಂದರು.
ಕ್ರೈಸ್ತ ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನೀಲಂ ಮಾತನಾಡಿ,” ಎಲ್ಲರೂ ಜನ ಸೇವೆಗೆ ಮಹತ್ವ ಕೊಟ್ಟು ಎಲ್ಲರನ್ನೂ ಪ್ರೀತಿಯಿಂದ ಕಾಣುವಂತಾಗಬೇಕು. ಅದೇ ಗಾಂಧೀಜಿಯವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದರು.
ಗಾಂಧಿ ವಿಚಾರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ಅಚ್ಚುತ ಮಲ್ಕಜೆ ಸ್ವಾಗತಿಸಿ ಗಾಂಧಿ ವಿಚಾರ ವೇದಿಕೆಯ ತಾಲೂಕು ಅಧ್ಯಕ್ಷ ಲಕ್ಷ್ಮೀಶ್ ಗಬ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಉಜಿತ್ ಶ್ಯಾಮ್ ಚಿಕ್ಮುಳಿ ವಂದಿಸಿದರು.