Advertisement
MIRROR FOCUS

“ಗಾಂದೀಜಿಯವರ ಮೌಲ್ಯಗಳ ಪ್ರಸ್ತುತತೆ” -ಸಂವಾದ ಕಾರ್ಯಕ್ರಮ | ಗಾಂಧೀಜಿಯವರ ಚಿಂತನೆಗಳನ್ನು ವೈಚಾರಿಕವಾಗಿ ಕನೆಕ್ಟ್‌ ಮಾಡುವ ಕೆಲಸವಾಗಬೇಕು – ಅರವಿಂದ ಚೊಕ್ಕಾಡಿ

Share

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ಮುಸ್ಸಂಜೆಯ ಹೊಂಗಿರಣ ಪುಸ್ತಕ ಬಿಡುಗಡೆ ಹಾಗೂ ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ ಮಂಗಳವಾರ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಶಿಕ್ಷಕ , ಸಾಹಿತಿ ಅರವಿಂದ ಚೊಕ್ಕಾಡಿ ನಡೆಸಿಕೊಟ್ಟರು. ಸಭಾಧ್ಯಕ್ಷತೆಯನ್ನು ಜಿಪಂ ಮಾಜಿ ಸದಸ್ಯ ಭರತ್ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಕಿಲಂಗೋಡಿ, ಕೃಷಿಕ ರಮೇಶ್‌ ದೇಲಂಪಾಡಿ ಉಪಸ್ಥಿತರಿದ್ದರು.

Advertisement
Advertisement
Advertisement

ಸಭಾಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ, ಮನುಷ್ಯನ ಸದ್ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಬೇಕು. ಇಂದು ರಚನಾತ್ಮಕ ಟೀಕೆಗಳ ಬದಲಾಗಿ ನಕಾರಾತ್ಮಕ ಟೀಕೆಗಳು ಹೆಚ್ಚಾಗಿ. ಈ ಪರಿಸ್ಥಿತಿ ಬದಲಾಗಲು ಮೌಲ್ಯಯುತ ಸಂವಾದಗಳು ಅಗತ್ಯವಿದೆ, ಯುವಕರಿಗೆ ಈ ನೆಲೆಯಲ್ಲಿ ತಿಳಿಸುವ ಅಗತ್ಯವಿದೆ ಎಂದರು.

Advertisement

ಸಂವಾದದ ವೇದಿಕೆಯಲ್ಲಿದ್ದ ಕೃಷಿಕ ರಮೇಶ್‌ ದೇಲಂಪಾಡಿ ಮಾತನಾಡಿ ಪ್ರಾಮಾಣಿಕತೆಯಿಂದಲೇ ಗಾಂಧೀಜಿಯವರು ಶ್ರೇಷ್ಟತೆಗೆ ಏರಿದರು. ಎಡ, ಬಲ, ಆಧ್ಯಾತ್ಮ ಹೀಗೇ ವಿವಿಧ ತರ್ಕಗಳ ನಡುವೆ ಯಾವುದು ಒಪ್ಪುವುದು , ಯಾವುದು ಸರಿ ಎನ್ನುವ ಪರಿಸ್ಥಿತಿ ಈಗಿದೆ. ಹೀಗಾಗಿ ಮೌಲ್ಯಯುತವಾದ ಸಂವಾದಗಳು ಅಗತ್ಯವಿದೆ ಎಂದರು.

ಲಕ್ಷ್ಮೀಶ ಗಬ್ಲಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಅಚ್ಚುತ ಮಲ್ಕಜೆ ವಂದಿಸಿದರು. ಕೃತಿಕಾಉದಯ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

@@@@@@@@@@@@@@@@@@@@@@@@@@@@@@@@@

Advertisement

ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಶಿಕ್ಷಕ , ಸಾಹಿತಿ ಅರವಿಂದ ಚೊಕ್ಕಾಡಿ ನಡೆಸಿಕೊಟ್ಟ ಸಂವಾದದ ಪೂರ್ಣ ವಿವರ ಇಲ್ಲಿದೆ……

ಸುಳ್ಯ ನನ್ನ ಊರು. ನಿಜವಾಗಿ ನನಗೆ ಊರೆಂದು ಇಲ್ಲ. ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಎಲ್ಲೊ ಬದುಕುವ ನನಗೆ ಊರೇ ಇಲ್ಲ. ಅದಕ್ಕೇ ಋಗ್ವೇದ ಹೇಳುವುದು, ಜೀವನವು ಒಂದು ಹರಿಯುವ ನದಿಯ ಹಾಗೆ ಎಂದು. ಆದರೂ ನನ್ನ ಮೇಲೆ ಬಹಳ ಪ್ರಭಾವ ಬೀರಿದ ಊರು ಸುಳ್ಯ. ನನ್ನ ಅತ್ಯಂತ ಅಸಹಾಯಕ ಬಾಲ್ಯ ಮತ್ತು ತಾರುಣ್ಯದಲ್ಲಿ ಜೊತೆಯಾಗಿ ನಿಂತು ಬೆಂಬಲಿಸಿದವರು ಇಲ್ಲೇ ಇದ್ದಾರೆ. ಅನೇಕ ಸೋಲು, ನೋವು, ಹತಾಶೆ ಅವಮಾನಗಳನ್ನೂ ಅನುಭವಿಸಿದ್ದೇನೆ. ಇದೆಲ್ಲ ಹೀಗೆ ಆಗಿತ್ತು ಎನ್ನುವ ವಿವರಗಳಷ್ಟೆ. ಆದರೆ ಸುಳ್ಯವೆ ನನ್ನ ವೈಚಾರಿಕತೆಯ ಜನ್ಮಭೂಮಿ ಎನ್ನುವುದಂತೂ ಸತ್ಯ. ಹಕ್ಕಿಯ ಹಿಕ್ಕೆಯಾಗಿ ಬಿದ್ದ ಬೀಜ ಮರವಾಗಲು ಯತ್ನಿಸುವ ಹಾಗೆ ನನ್ನ ಪ್ರಯತ್ನ. ನೀವೆಲ್ಲ ನನ್ನೂರಿನ ನನ್ನ ಜನಗಳೇ. ನನಗೆ ನಾಲ್ಕು ಬೈದುಕೊಂಡರೂ ನನ್ನಲ್ಲಂತೂ ನನ್ನ ಜನಗಳೆಂಬ ಭಾವ ಹೋಗುವುದಿಲ್ಲ.

Advertisement

ತನ್ನ 79 ವರ್ಷಗಳ ಜೀವಿತಾವಧಿಯಲ್ಲಿ ಐವತ್ತ ಮೂರೂವರೆ ಸಾವಿರ ಪುಟಗಳಷ್ಟು ಬರೆಹವನ್ನು ಬರೆದ, ಭೂಮಿಯನ್ನು ಒಂದೂವರೆ ಬಾರಿ ಸುತ್ತಿದಷ್ಟು ನಡೆದ ಗಾಂಧೀಜಿಯ ಬಗ್ಗೆ ನನಗೆ ಗೊತ್ತಿರುವುದು ಬಲು ಕಡಿಮೆ. ಏಕೆಂದರೆ ಒಬ್ಬ ಕಲಾವಿದ ನಾಲ್ಕು ರೇಖೆಗಳಲ್ಲಿ ಬಿಡಿಸಬಹುದಾದಷ್ಟು ಸರಳ ಗಾಂಧಿ ವೈಚಾರಿಕವಾಗಿ ಬಹಳ ಸಂಕೀರ್ಣ. ಅದೊಂದು ಸಾಗರ. ನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟು ತುಂಬಿಕೊಳ್ಳಬಹುದಷ್ಟೆ. ನನ್ನ ಬೊಗಸೆಯಲ್ಲಿರುವಷ್ಟನ್ನು ನಿಮ್ಮೊಂದಿಗೆ ಮಾತನಾಡುತ್ತೇನೆ. ನಿಮ್ಮ ಬೊಗಸೆಯಲ್ಲಿರುವುದನ್ನು ನನಗೆ ಕೊಡಿ.

ಕೆಲವು ವಿಷಯಗಳಲ್ಲಿ ನಾನು ಗಾಂಧಿಯನ್ನು ಒಪ್ಪುವುದಿಲ್ಲ. ಮೊದಲನೆಯದು ಅವರಲ್ಲಿದ್ದ ತೆಳುವಾದ ಮುಸ್ಲಿಂ ಓಲೈಕೆ. ಆದರೆ ಆ ಓಲೈಕೆಗೆ ಕಾರಣಗಳಿದ್ದವು. ಆ ಸಕಾರಣವನ್ನು ಒಪ್ಪುತ್ತೇನೆ. ಅವರದನ್ನು ಮಾಡದಿದ್ದರೆ ಬ್ರಿಟಿಷರು ಸನ್ನಿವೇಶವನ್ನು ತುಂಬ ಚೆನ್ನಾಗಿ ಅವರ ಪರವಾಗಿ ಮಾಡಿಕೊಳ್ಳುತ್ತಿದ್ದರು. ಆದರೆ ಓಲೈಕೆಯನ್ನು ಒಪ್ಪುವುದಿಲ್ಲ.

Advertisement

ಎರಡನೆಯದು ಹಿಂದಿ ಇಡೀ ರಾಷ್ಟ್ರಕ್ಕೆ ಭಾಷೆ ಆಗಬೇಕು ಎಂಬ ಅವರ ನಿಲುವು. ಹಾಗೆ ಮಾಡಲು ಬರುವುದಿಲ್ಲ. ಸ್ಥಳೀಯ ಭಾಷೆಯನ್ನು ಗಮನಿಸಬೇಕಾಗುತ್ತದೆ.

ಮೂರನೆಯದು ಮಹಿಳೆಯರ ಕುರಿತ ಅವರ ಕೆಲವು ನಿಲುವುಗಳು. ಗಾಂಧಿ ಮಹಿಳೆಯರನ್ನು ಸಂಸ್ಕೃತಿಯ ಪ್ರತಿನಿಧಿಯಾಗಿ ಸ್ವೀಕರಿಸುವುದು ಜಾಸ್ತಿ. ನಿಜ, ಮಹಿಳೆ ಸಂಸ್ಕೃತಿಯ ಪ್ರತಿನಿಧಿಯೇ. ಆದರೆ ಆಕೆಗಿರುವ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಹೆಣ್ಣಿನ ಕುರಿತ ಗಾಂಧಿಯ ನಿಲುವುಗಳ ಬಗ್ಗೆ ನನ್ನ ಭಿನ್ನ‌ ನಿಲುವುಗಳಿವೆ.

Advertisement

ಇದನ್ನು ಬಿಟ್ಟರೆ

ಸ್ವರಾಜ್ಯದ ಪರಿಕಲ್ಪನೆ, ಆಧುನಿಕ ವೈದ್ಯಕೀಯ, ವಕೀಲಿಕೆಯ ಕುರಿತ ಅವರ ತಿಳಿವಳಿಕೆ, ಶಿಕ್ಷಣ, ರಾಜಕೀಯ ನೈತಿಕತೆ, ಧಾರ್ಮಿಕ ಸಾಮರಸ್ಯ, ಜಾತಿ ಸಮಾನತೆ, ಸಂಸ್ಕೃತಿ ಚಿಂತನೆ ಇವೆಲ್ಲ ಈಗಲೂ ಪ್ರಸ್ತುತ.

Advertisement

ಇನ್ನು ಸಂವಾದ ಪ್ರಾರಂಭಿಸುವ.  ಗಾಂಧಿ ಯಾಕೆ ನನಗೆ ಮುಖ್ಯ ಎಂದರೆ , ಗಾಂಧಿ ಒಬ್ಬ ಮನುಷ್ಯರಾಗಿದ್ದರು. ಮತ್ತು ಅವರು ಒಬ್ಬ ಸನಾತನಿಯಾಗಿದ್ದರು. ಸನಾತನ ಧರ್ಮ ಯಾರನ್ನೂ ಸಂಪೂರ್ಣ ಒಳ್ಳೆಯವನೆಂದೂ ಹೇಳುವುದಿಲ್ಲ. ಸಂಪೂರ್ಣ ಕೆಟ್ಟವನೆಂದೂ ಹೇಳುವುದಿಲ್ಲ. ಕೆಟ್ಟವನೇ ಆಗಿದ್ದರೂ ರಾವಣನನ್ನು ಕೊಂದಾಗ ರಾಮನ ಕಣ್ಣು ಹೋಗುತ್ತದೆ. ಏಕೆಂದರೆ ವೇದಕ್ಕೆ ನಾದವನ್ನು ಒದಗಿಸಿದ ನಾದಬ್ರಹ್ಮ ರಾವಣ. ವಿಷ್ಣು ದೇವರೇ ಆಗಿದ್ದರೂ ಲಕ್ಷ್ಮಿ ಜೊತೆಗಿದ್ದಾಗ ಮಾತ್ರ ಶ್ರೀಮನ್ನಾರಾಯಣ. ಲಕ್ಷ್ಮಿ ಹೊರಟು ಹೋದ ಕೂಡಲೇ ಅವನೂ ದರಿದ್ರ ನಾರಾಯಣನಾಗಿ ಕಾಡು ಮೇಡು ಅಲೆಯುವವನೇ. ದೇವರಲ್ಲಿ ಮನುಷ್ಯನನ್ನೂ, ಮನುಷ್ಯನಲ್ಲಿ ದೇವರನ್ನೂ ಸನಾತನ ಧರ್ಮ ಕಂಡುಕೊಳ್ಳುತ್ತದೆ. ಗಾಂಧಿ ದೇವರಲ್ಲ. ಮನುಷ್ಯರು.‌ ಮನುಷ್ಯರಲ್ಲಿ ಅತ್ಯುತ್ತಮರು. ಆದ್ದರಿಂದಲೇ ಅವರು ಪ್ರಿಯರಾದವರು.

**********************
ದಯಾನಂದ ಕೋಟೆ:  ನೀವು ಬರೆದ ಪುಸ್ತಕವನ್ನು ಓದಿದೆ. ಅದರಲ್ಲಿ 79 ಲೇಖನಗಳಿಲ್ಲ. 73 ಇವೆ. ತುಂಬ ಚಂದದ ಲೇಖನಗಳು.‌ ಮಕ್ಕಳು ಈಗ ಕತೆಯನ್ನು ಕೇಳುವುದಿಲ್ಲ; ಒಂದು ವೇಳೆ ಕೇಳುವುದಿದ್ದರೆ ಮಕ್ಕಳಿಗೆ ಹೇಳಲು ಬಹಳ ಒಳ್ಳೆಯ ಲೇಖನಗಳನ್ನು ಹೊಂದಿರುವ ಪುಸ್ತಕ ಇದು. ಯಾವುದಾದರೂ ತರಗತಿಗೆ ಈ ಪುಸ್ತಕವನ್ನು ಉಪ ಪಠ್ಯವಾಗಿ ಬಳಸಬಹುದು.

Advertisement

ನಾ. ಕಾರಂತ ಪೆರಾಜೆಯವರ ಪುಸ್ತಕದ ಬಗ್ಗೆ ಹೇಳಿದಿರಿ. ಅಲ್ಲಿ ಸ್ವಾವಲಂಬನೆ ಇದೆ. ಇವತ್ತು ಪಂಜಾಬಿನ ರೈತರು ಹೋರಾಟವನ್ನು ಮಾಡುತ್ತಿದ್ದಾರೆ. ಆದರೆ ಆ ರೈತರ ಔದಾರ್ಯ ಮತ್ತು ಸ್ವಾಭಿಮಾನ ಮೆಚ್ಚುವಂತಾದ್ದಾಗಿದೆ.

ಚೊಕ್ಕಾಡಿ :  ಗಾಂಧಿ ಚಿಂತನೆಗಳ ಪ್ರಸ್ತುತತೆಯು ಗ್ರಾಮೀಣ ಆರ್ಥಿಕತೆ ಅಂದರೆ ಕೃಷಿರಂಗದ ಸುತ್ತ ಬೆಳೆದ ಆರ್ಥಿಕತೆ ಮತ್ತು ರೈತರು ಎಂಬ ಆರ್ಥಿಕ ವ್ಯವಸ್ಥೆ, ಬಹು ಬೆಳೆಯ ಕೃಷಿಯಿಂದ ಬೆಳೆದ ಬಹು ಸಂಸ್ಕೃತಿಗಳು-ಇವುಗಳ ತಳಹದಿಯಲ್ಲೆ ಇರುತ್ತದೆ. ಥ್ಯಾಂಕ್ ಯೂ‌ ಸರ್.
*****************

Advertisement

 ಲಕ್ಷ್ಮೀಶ ಗಬ್ಲಡ್ಕ: ಗಾಂಧೀಜಿಯವರು ಸಶಸ್ತ್ರ ಹೋರಾಟದ ಪರ ಇದ್ದವರಲ್ಲ. ಅವರ ಅಹಿಂಸಾ ವಾದ ಎನ್ನುವುದು ಕ್ಷಾತ್ರದ ಅಗತ್ಯ ಇದ್ದಲ್ಲಿ ಕ್ಷಾತ್ರವನ್ನು ದುರ್ಬಲಗೊಳಿಸುವುದಿಲ್ಲವೆ? ಈಗ ನಮ್ಮ‌ ಮನೆ ಮತ್ತು ಆಸ್ತಿಯನ್ನು ಉಳಿಸಿಕೊಳ್ಳಲು ನಾವು ಕ್ಷಾತ್ರವನ್ನು ಬಳಸುತ್ತೇವೆ. ಆದರೆ ಅದೇ ಕಾಳಜಿ ರಾಷ್ಟ್ರದ ವಿಚಾರವಾದಾಗ ಏಕಿಲ್ಲ? ಇದಕ್ಕೆ ಅಹಿಂಸಾ ವಾದದಿಂದ ಸಮಸ್ಯೆ ಅಲ್ಲವೆ?

ಚೊಕ್ಕಾಡಿ: ಇಲ್ಲಿ ಅನೇಕ ಪ್ರಶ್ನೆಗಳಿವೆ. ಮೊದಲನೆಯದಾಗಿ ಸಶಸ್ತ್ರ ಹೋರಾಟದ ವಿಚಾರ. ಹೋರಾಟ ಯಾರ ವಿರುದ್ಧ? ಬ್ರಿಟಿಷರ ವಿರುದ್ಧ. ಗಾಂಧಿ ಬದುಕಿದ್ದ ಕಾಲದಲ್ಲಿ ಬ್ರಿಟಿಷರೇ ಪ್ರಭುಗಳು. ಪ್ರಭುತ್ವದ ವಿರುದ್ಧ ಹಿಂಸೆಯನ್ನು ಬಳಸಬಾರದು ಎಂದು ಶ್ರೀಮದ್ಭಾಗವತವು ಹೇಳುತ್ತದೆ. ಗಾಂಧಿ ತಮ್ಮ ಹೋರಾಟವನ್ನು ಧರ್ಮದ ತಳಹದಿಯಲ್ಲೆ ರೂಪಿಸಿದ್ದು. ಆದರೆ ಗಾಂಧೀಜಿಯವರ ಅಹಿಂಸೆ ಭಾಗವತ ಹೇಳುವ ರೀತಿಯ ಪ್ರಭುತ್ವದ ಕುರಿತ ಹೋರಾಟಕ್ಕೆ ಮಾತ್ರ ಸೀಮಿತ ಅಲ್ಲ. ಅದನ್ನೂ ದಾಟಿ ಅವರು ಮುಂದೆ ಹೋಗುತ್ತಾರೆ. ಗಾಂಧೀಜಿಯವರದು ಜೈನ ಧರ್ಮದಿಂದ ಪ್ರಭಾವಿತವಾದ ಅಹಿಂಸೆಯಾಗಿತ್ತು. ಈ ಪ್ರಶ್ನೆ ಸದಾ ಕಾಲವೂ ಇರುತ್ತದೆ. ಗಾಂಧೀಜಿಯವರ ಕಾಲದಲ್ಲೂ ಇತ್ತು. ಜನರಲ್ ಕಾರ್ಯಪ್ಪ ಅವರು ಗಾಂಧಿಯ ಬಳಿ ಒಮ್ಮೆ,”ಎಲ್ಲವೂ ಅಹಿಂಸೆಯಿಂದ ಆಗುವುದಾದರೆ ನನ್ನ ಸೈನಿಕರ ಅಗತ್ಯವೇನು? ಅವರಿಗೆ ಯಾವ ಕೆಲಸ ಕೊಡಲಿ?” ಎಂದು ಕೇಳಿದರಂತೆ. ಅದಕ್ಕೆ ಗಾಂಧಿ,” ಭಾರತಕ್ಕೊಂದು ಬಲಿಷ್ಠ ಸೈನ್ಯ ಬೇಕೇಬೇಕು. ಆದರೆ ಸೈನ್ಯವನ್ನು ಹೇಗೆ ಧನಾತ್ಮಕವಾಗಿ ಬಳಸಬಹುದು ಎಂಬ ಬಗ್ಗೆ ನನಗಿನ್ನೂ ಉತ್ತರ ಹೊಳೆದಿಲ್ಲ. ನಾನು ದೊಡ್ಡ ಮಗು, ನೀವು ಸಣ್ಣ ಮಗು ಅಷ್ಟೆ. ನಿಮಗೆ ಮೊದಲು ಉತ್ತರ ಹೊಳೆದರೆ ನೀವು ನನಗೆ ಹೇಳಿ.‌ ನನಗೆ ಮೊದಲು ಉತ್ತರ ಹೊಳೆದರೆ ನಾನು ನಿಮಗೆ ಹೇಳುತ್ತೇನೆ” ಎಂದರಂತೆ. ಅಂದರೆ ಎಲ್ಲದಕ್ಕೂ ಉತ್ತರ ಸಿಗಲೇ ಬೇಕೆಂದು ಇಲ್ಲ ಅಂತ. ನೀವೀಗ ನನ್ನನ್ನು ಅಹಿಂಸಾವಾದಿ ಎಂದರೆ ನೀವು ಅಹಿಂಸಾವಾದಿ ಅಲ್ಲ ಎಂದಾಗುತ್ತದೆ. ಹಾಗೆಂದು ನನ್ನ ಬಳಿ ಅಸಮಧಾನ ಆದ ಕೂಡಲೆ ಬಂದು ನನಗೆ ಹೊಡೆಯುತ್ತೀರಾ? ಇಲ್ಲ. ಅಂದರೆ ನಾವೆಲ್ಲರೂ ಅಹಿಂಸಾ ವಾದಿಗಳೇ. ಅಹಿಂಸಾ ವಾದದ ದೂರದಲ್ಲಿ ಮಾತ್ರ ಗಾಂಧಿಗೂ ನಮಗೂ ವ್ಯತ್ಯಾಸ ಇರುವುದು.

Advertisement

ಅಲ್ಲದೆ ಗಾಂಧಿಯ ಕಾಲದಲ್ಲಿ ಭಾರತದಂತಹ ದೊಡ್ಡ ದೇಶದಲ್ಲಿ ಬ್ರಿಟಿಷರಿಗೆ ಗೊತ್ತಾಗದ ಹಾಗೆ ಇಡೀ ದೇಶವನ್ನು ಸಂಘಟಿಸಲು ಸಾಧ್ಯವಿರಲಿಲ್ಲ. ಬ್ರಿಟಿಷರಿಗೆ ಗೊತ್ತಾಗಿಯೂ ಸಂಘಟನೆ ಮಾಡಬೇಕಾದರೆ ಅಹಿಂಸೆ ಅನಿವಾರ್ಯ.

ನಿಮ್ಮ ಪ್ರಶ್ನೆಯ ಎರಡನೆಯ ಭಾಗ. ಪ್ರಶ್ನೆಯಲ್ಲೆ ಉತ್ತರವಿದೆ. ನಮ್ಮ‌ ಆಸ್ತಿಯನ್ನು ನಾವು ಕ್ಷಾತ್ರವನ್ನು ಬಳಸಿಯಾದರೂ ಉಳಿಸಿಕೊಳ್ಳುತ್ತೇವೆ ಎಂದರೆ ಏನರ್ಥ? ಗಾಂಧೀಜಿಯ ಅಹಿಂಸೆಯಿಂದಾಗಿ ಕ್ಷಾತ್ರಕ್ಕೆ ಯಾವ ಸಮಸ್ಯೆಯೂ ಆಗಿಲ್ಲವೆಂದು. ವೈಯಕ್ತಿಕ ವಿಚಾರಕ್ಕೆ ಬಂದಾಗ ಬಿಡುವುದಿಲ್ಲ ನಾವು. ರಾಷ್ಟ್ರದ ವಿಚಾರವಾದಾಗ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರೆ ರಾಷ್ಟ್ರ ನಮಗೆ ನಮ್ಮದು ಎಂದು ಅನಿಸಿಲ್ಲ ಎಂದು ಅರ್ಥ.

Advertisement

ಯಾಕೆ ಅನಿಸಿಲ್ಲ? ನೋಡಿ, ನಮ್ಮದು ಬಹಳ ಕಷ್ಟದಿಂದ ಕಟ್ಟಿದ ರಾಷ್ಟ್ರ. 565 ಸಂಸ್ಥಾನಗಳಿತ್ತು. ಬ್ರಿಟಿಷ್ ಭಾರತವೂ ಕೂಡ ಮದ್ರಾಸಿನ ಆಡಳಿತ, ಮುಂಬೈ ಆಡಳಿತ ಎಂದೆಲ್ಲ ಇತ್ತು. ಇವೆಲ್ಲ ಒಟ್ಟಾಗಿ ಇಡೀ ರಾಷ್ಟ್ರ ನನ್ನದು ಎಂದು ಪ್ರತಿಯೊಬ್ಬನಿಗೂ ಅನಿಸುವ ಹಾಗೆ ಮಾಡಲು ಕೇವಲ ಎಪ್ಪತ್ತು ವರ್ಷ ಸಾಕಾಗುವುದಿಲ್ಲ. ಸಾಕಷ್ಟು ಶ್ರಮ‌ ಬೇಕಾಗುತ್ತದೆ. ವಿವೇಕದಿಂದ ಜನರಲ್ಲಿ ಅರಿವು ಹುಟ್ಟಿಸಬೇಕಾಗುತ್ತದೆ. ಥ್ಯಾಂಕ್ ಯೂ ಸರ್.
*****************

ಕಾರ್ಯಪ್ಪ ಗೌಡ: ಭಾಷೆಯ ಕುರಿತಾಗಿ ಇಡೀ ರಾಷ್ಟ್ರಕ್ಕೆ ಹಿಂದಿ ಎಂಬ ಧೋರಣೆಯನ್ನು ಒಪ್ಪುವುದಿಲ್ಲ ಎಂದು ಹೇಳಿದಿರಿ. ಇಂಗ್ಲಿಷ್ ಆಗಬಹುದಾದಾಗ ಹಿಂದಿ ಯಾಕೆ ಸಂಪರ್ಕ ಭಾಷೆಯಾಗಬಾರದು?

Advertisement

ಚೊಕ್ಕಾಡಿ:: ಸಂಪರ್ಕ ಭಾಷೆಯ ವಿಚಾರದ ಬಗ್ಗೆ ನಾನು ಹೇಳಿದ್ದಲ್ಲ. ಹಿಂದಿಯೂ ಇಡೀ ರಾಷ್ಟ್ರದ ಸಂಪರ್ಕ ಭಾಷೆಯಾಗಬಹುದು. ಇಂಗ್ಲಿಷೂ ಸಂಪರ್ಕ ಭಾಷೆಯಾಗಬಹುದು. ಕನ್ನಡ, ತಮಿಳು, ತೆಲುಗುಗಳೂ ಸಂಪರ್ಕ ಭಾಷೆಯಾಗಬಹುದು. ನಾನು ಹೇಳಿದ್ದು ಇಡೀ ರಾಷ್ಟ್ರಕ್ಕೆ ಒಂದೇ ಭಾಷೆ ಎಂದು ಹಿಂದಿಯನ್ನೂ ಪರಿಗಣಿಸಬಾರದು ಎಂದು. ಇಂಗ್ಲಿಷಿಗೆ ಯಾವ ವಿನಾಯಿತಿಯೂ ಇಲ್ಲ. ಇಂಗ್ಲಿಷ್ ಕೂಡ ಏಕಮಾದ್ವಿತೀಯ ಎಂದು ಆಗಬಾರದು. ಸಂಪರ್ಕದ ವಿಚಾರಕ್ಕೆ ಬಂದಾಗಲೂ ಕೂಡ ಹಿಂದಿಗಿಂತಲೂ ಹೆಚ್ಚು ಅರ್ಹತೆ ಇರುವುದು ಪ್ರಾಕೃತ ಮತ್ತು ಅದರ ಕಿರಿಯ ಕುಲೀನ ಸಹೋದರಿಯಾದ ಸಂಸ್ಕೃತ ಭಾಷೆಗಳಿಗೆ ಹೊರತು ಹಿಂದಿಗಲ್ಲ. ತೃಸ್ಟಾವೊ ಬ್ರಗಾನ್ಝ ದೆ ಕುನ್ಝ ಅಂತ, ಗೋವಾ ಸ್ವಾತಂತ್ರ್ಯದ ಪಿತ ಎಂದು ಕರೆಯುತ್ತೇವೆ. ಅವರು ‘ಡಿ ನ್ಯಾಷನಲೈಝೇಷನ್’ ಎಂಬ ಸಿದ್ಧಾಂತವನ್ನು ಮಂಡಿಸುತ್ತಾರೆ. ಈ ಸಿದ್ಧಾಂತವನ್ನು ಮಂಡಿಸಿದವರು ಮೂವರು. ಕೇಶವ ಚಂದ್ರ ಸೇನ್, ಅರವಿಂದರು ಮತ್ತು ಕುನ್ಝ. ಅದರಲ್ಲಿ ಅವರು ಸಂಸ್ಕೃತಕ್ಕೆ ಇಡೀ ಭಾರತೀಯ ಭಾಷಾ ವ್ಯವಸ್ಥೆಯನ್ನು ಸಂಪರ್ಕಿಸುವ ಶಕ್ತಿ ಹೇಗಿದೆ ಎಂದು ಹೇಳುತ್ತಾರೆ. ಸಂಸ್ಕೃತ ಅಥವಾ ಪ್ರಾಕೃತಕ್ಕೆ ಇರುವ ಈ ಶಕ್ತಿ ಮತ್ತು ವ್ಯಾಪಕತ್ವ ಹಿಂದಿಗೆ ಇಲ್ಲ.‌ ಥ್ಯಾಂಕ್ ಯೂ ಸರ್.
********************

ಕಾರ್ಯಪ್ಪ ಗೌಡ: ಭಾಷೆಯ ಕುರಿತಾಗಿ ಇಡೀ ರಾಷ್ಟ್ರಕ್ಕೆ ಹಿಂದಿ ಎಂಬ ಧೋರಣೆಯನ್ನು ಒಪ್ಪುವುದಿಲ್ಲ ಎಂದು ಹೇಳಿದಿರಿ. ಇಂಗ್ಲಿಷ್ ಆಗಬಹುದಾದಾಗ ಹಿಂದಿ ಯಾಕೆ ಸಂಪರ್ಕ ಭಾಷೆಯಾಗಬಾರದು?

Advertisement

ಚೊಕ್ಕಾಡಿ:: ಸಂಪರ್ಕ ಭಾಷೆಯ ವಿಚಾರದ ಬಗ್ಗೆ ನಾನು ಹೇಳಿದ್ದಲ್ಲ. ಹಿಂದಿಯೂ ಇಡೀ ರಾಷ್ಟ್ರದ ಸಂಪರ್ಕ ಭಾಷೆಯಾಗಬಹುದು. ಇಂಗ್ಲಿಷೂ ಸಂಪರ್ಕ ಭಾಷೆಯಾಗಬಹುದು. ಕನ್ನಡ, ತಮಿಳು, ತೆಲುಗುಗಳೂ ಸಂಪರ್ಕ ಭಾಷೆಯಾಗಬಹುದು. ನಾನು ಹೇಳಿದ್ದು ಇಡೀ ರಾಷ್ಟ್ರಕ್ಕೆ ಒಂದೇ ಭಾಷೆ ಎಂದು ಹಿಂದಿಯನ್ನೂ ಪರಿಗಣಿಸಬಾರದು ಎಂದು. ಇಂಗ್ಲಿಷಿಗೆ ಯಾವ ವಿನಾಯಿತಿಯೂ ಇಲ್ಲ. ಇಂಗ್ಲಿಷ್ ಕೂಡ ಏಕಮಾದ್ವಿತೀಯ ಎಂದು ಆಗಬಾರದು. ಸಂಪರ್ಕದ ವಿಚಾರಕ್ಕೆ ಬಂದಾಗಲೂ ಕೂಡ ಹಿಂದಿಗಿಂತಲೂ ಹೆಚ್ಚು ಅರ್ಹತೆ ಇರುವುದು ಪ್ರಾಕೃತ ಮತ್ತು ಅದರ ಕಿರಿಯ ಕುಲೀನ ಸಹೋದರಿಯಾದ ಸಂಸ್ಕೃತ ಭಾಷೆಗಳಿಗೆ ಹೊರತು ಹಿಂದಿಗಲ್ಲ. ತೃಸ್ಟಾವೊ ಬ್ರಗಾನ್ಝ ದೆ ಕುನ್ಝ ಅಂತ, ಗೋವಾ ಸ್ವಾತಂತ್ರ್ಯದ ಪಿತ ಎಂದು ಕರೆಯುತ್ತೇವೆ. ಅವರು ‘ಡಿ ನ್ಯಾಷನಲೈಝೇಷನ್’ ಎಂಬ ಸಿದ್ಧಾಂತವನ್ನು ಮಂಡಿಸುತ್ತಾರೆ. ಈ ಸಿದ್ಧಾಂತವನ್ನು ಮಂಡಿಸಿದವರು ಮೂವರು. ಕೇಶವ ಚಂದ್ರ ಸೇನ್, ಅರವಿಂದರು ಮತ್ತು ಕುನ್ಝ. ಅದರಲ್ಲಿ ಅವರು ಸಂಸ್ಕೃತಕ್ಕೆ ಇಡೀ ಭಾರತೀಯ ಭಾಷಾ ವ್ಯವಸ್ಥೆಯನ್ನು ಸಂಪರ್ಕಿಸುವ ಶಕ್ತಿ ಹೇಗಿದೆ ಎಂದು ಹೇಳುತ್ತಾರೆ. ಸಂಸ್ಕೃತ ಅಥವಾ ಪ್ರಾಕೃತಕ್ಕೆ ಇರುವ ಈ ಶಕ್ತಿ ಮತ್ತು ವ್ಯಾಪಕತ್ವ ಹಿಂದಿಗೆ ಇಲ್ಲ.‌ ಥ್ಯಾಂಕ್ ಯೂ ಸರ್.
********************

 ಪ್ರಜ್ವಲ್: ಗಾಂಧಿ ಇರ್ವಿನ್ ಒಪ್ಪಂದದಲ್ಲಿ ಭಗತ್ ಸಿಂಗ್ ಅನ್ನು ಗಾಂಧಿಗೆ ಬಿಡಿಸಬಹುದಿತ್ತು. ಆದರೆ ಅವರು ಆಸಕ್ತಿ ವಹಿಸಲಿಲ್ಲ ಎಂಬ ಒಂದು ವಿಚಾರವಿದೆ. ಎರಡನೆಯದಾಗಿ, ಆಶ್ಲೀಲ ಪ್ರಯೋಗದ ಬಗ್ಗೆ ಏನು ಹೇಳುತ್ತೀರಿ?

Advertisement

ಚೊಕ್ಕಾಡಿ:: ಭಗತ್ ಸಿಂಗ್ ಕುರಿತ ವಿಚಾರ ಸುಳ್ಳು. ಗಾಂಧಿ ಮಾಡಬಹುದಾಗಿದ್ದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. ಪಂಡಿತ್ ಸುಧಾಕರ ಚತುರ್ವೇದಿ ತಾನೇ ನೋಡಿದ್ದ ಈ ಘಟನೆಯ ಬಗ್ಗೆ ಹೇಳಿದ್ದಾರೆ. ಭಗತ್ ಸಿಂಗ್ ಮತ್ತು ಸ್ನೇಹಿತರನ್ನು ಗಲ್ಲು ಶಿಕ್ಷೆಯಿಂದ ಬಿಡಿಸಲು ಗಾಂಧಿ ಕೇಳಿದ್ದರು. ಇರ್ವಿನ್ ಕೂಡ ಒಪ್ಪಿದ್ದರು. ಆದರೆ ಪಂಜಾಬ್ ನ ಗವರ್ನರ್ ಇರ್ವಿನ್ ಜೊತೆಯಲ್ಲಿ ಪ್ರತಿಭಟನೆಗೆ ಇಳಿದುದರಿಂದ ಸಾಧ್ಯ ಆಗಲಿಲ್ಲ. ಭಗತ್ ಸಿಂಗ್ ಶಿಕ್ಷೆಯನ್ನು ರದ್ದು ಪಡಿಸುವಂತೆ ಕೋರಿ ಗಾಂಧೀಜಿ ಬರೆದ ಪತ್ರ ಆನ್ ರೆಕಾರ್ಡ್ ಈಗಲೂ ಇದೆ.

ಎರಡನೆಯ ಪ್ರಶ್ನೆ, ಅದನ್ನು ಅಶ್ಲೀಲತೆಯ ಪ್ರಯೋಗ ಎನ್ನುವುದು ಬೇಡ. ಬ್ರಹ್ಮಚರ್ಯದ ಪ್ರಯೋಗ ಎನ್ನೋಣ.‌ ಗಾಂಧಿಯ ಬ್ರಹ್ಮಚರ್ಯದ ಬಗ್ಗೆ ಪಾಶ್ಚಿಮಾತ್ಯರ ಚರ್ಚೆಯಲ್ಲು ಒಂದು ಜೋಕಿನ ರೀತಿಯಲ್ಲಿ ಚರ್ಚೆ ನಡೆದಿದೆ.

Advertisement

ಈ ಪ್ರಕರಣ ಸರಿಯಾಗಿ ಅರ್ಥ ಆಗಬೇಕಾದರೆ ಗಾಂಧಿ ಒಬ್ಬರು ಸಾಧಕರು ಎಂದು ಗೊತ್ತಿರಬೇಕು. ಒಮ್ಮೆ ರಾಜೇಂದ್ರ ಪ್ರಸಾದ್, ಬಜಾಜ್, ಕೃಪಲಾನಿ ರಮಣ ಮಹರ್ಷಿಗಳಲ್ಲಿದ್ದಾಗ ತಕ್ಷಣ ಬರಬೇಕೆಂದು ಗಾಂಧೀಜಿಯಿಂದ ಟೆಲಿಗ್ರಾಂ ಬಂದಿತ್ತು. ಹೊರಡುವಾಗ ಇವರು ರಮಣ ಮಹರ್ಷಿಗಳ ಬಳಿ ಗಾಂಧಿಗೆ ಹೇಳುವಂತಾದ್ದೇನಾದರೂ ಇದೆಯೇ? ಎಂದು ಕೇಳಿದರು. ಆಗ ರಮಣ ಮಹರ್ಷಿಗಳು,”ಇಲ್ಲ. ನಮ್ಮ ಆತ್ಮಗಳು ಮಾತನಾಡಬಲ್ಲವು” ಎಂದು ಉತ್ತರಿಸಿದ್ದರು.

ಈ ಬ್ರಹ್ಮಚರ್ಯದ ಸಾಧನೆಯಲ್ಲಿ ಲೈಂಗಿಕ ನಿಯಂತ್ರಣದ ಪರೀಕ್ಷೆಗಳೆಲ್ಲ ಬರುತ್ತವೆ. ಸಾಧಕರು ಇದನ್ನು ಮಾಡಿರುತ್ತಾರೆ. ಆದರೆ ಎಲ್ಲರೂ ಹೇಳಿರುವುದಿಲ್ಲ. ಗಾಂಧಿಯ ಈ ವಿಚಾರವನ್ನು ಹೇಳಿದ್ದು ಯಾರು ಗೊತ್ತುಂಟಾ? ಯಾವ ಗಾಂಧಿ ವಿರೋಧಿಯೂ ಕಂಡು ಹಿಡಿದ ಸಂಶೋಧನೆ ಅಲ್ಲ ಇದು. ಸ್ವತಃ ಗಾಂಧಿಯೇ ಹೇಳಿದ್ದು.

Advertisement

ದೇಶ ವಿಭಜನೆಯಾದಾಗ ಗಾಂಧಿ ಕೋಲ್ಕತ್ತಾ ಮತ್ತು ನೌಖಾಲಿಯ ಮತೀಯ ಗಲಭೆಗಳನ್ನು ನಿಯಂತ್ರಿಸಲು ಹೋಗಿರುತ್ತಾರೆ. ಅವರು ಹೋಗುವ ದಾರಿಯಲ್ಲಿ‌ಮಲ ವಿಸರ್ಜನೆ ಮಾಡಿ ಅದರ ಮೇಲೆ ಗಾಜಿನ ಚೂರನ್ನು ಹಾಕಿರುತ್ತಾರೆ. ಗಾಂಧಿ ರಕ್ತ ಬರುತ್ತಿದ್ದರೂ ಕೇರ್ ಮಾಡದೆ ಅದರ ಮೇಲೆ ನಡೆದು ಹೋಗುತ್ತಾರೆ. ಆ ಸಂದರ್ಭದಲ್ಲಿ ಗಾಂಧಿ ರಾಜ್ಕುಮಾರಿ ಅಮೃತ್ ಕೌರ್ ಅವರಿಗೆ ಬರೆದ ಪತ್ರದಲ್ಲಿ,”ಬ್ರಹ್ಮ ಚರ್ಯದ ಮುಂದೆ ಹಿಂಸೆ ನಿಲ್ಲುವುದಿಲ್ಲ. ಆದರೆ ನನ್ನ ಎದುರಿಗೆ ಹಿಂಸೆ ನಡೆಯುತ್ತಿದೆ. ಹಾಗಿರುವಾಗ ನನ್ನ ಬ್ರಹ್ಮಚರ್ಯದ ಸಾಧನೆಯೇ ಸಮರ್ಪಕವಾಗಲಿಲ್ಲವೊ ಏನೊ? ಎಂದು ಹೇಳುವಾಗ ಹೀಗೂ ಮಾಡಿದ್ದೆ ಎಂದು ಈ ವಿಚಾರವನ್ನು ಗಾಂಧಿ ಬರೆದಿದ್ದಾರೆ. ಇದನ್ನು ತಪ್ಪು ಎನ್ನುವುದಾದರೆ ಹಲವಾರು ಮಹಾ ವ್ಯಕ್ತಿಗಳು ಬ್ರಹ್ಮಚರ್ಯದ ಸಾಧನೆ ಮಾಡಿದವರಿಗೂ ಹೇಳಬೇಕಾಗುತ್ತದೆ. ಆದರೆ ಇದು ಸ್ತ್ರೀ ಶೋಷಣೆ ಅಲ್ಲವೆ? ಎಂದು ನೀವು ಕೇಳಿದರೆ ಖಂಡಿತವಾಗಿಯೂ ಹೌದು. ಅದಕ್ಕೇ ನಾನು ಮಹಿಳೆಯರ ಕುರಿತ ಗಾಂಧಿ ಚಿಂತನೆಗಳೆಲ್ಲವನ್ನೂ ನಾನು ಒಪ್ಪುವುದಿಲ್ಲ ಎಂದೇ ಹೇಳಿದ್ದೆ. ಥ್ಯಾಂಕ್ ಯೂ ಸರ್.
*****************
ರಮೇಶ್ ಕೋಟೆ: ಗಾಂಧಿಯ ಪ್ರಸ್ತುತತೆ ಈಗ ಇದೆ ಎಂದು ಹೇಗೆ ಹೇಳಲು ಸಾಧ್ಯ?

ಚೊಕ್ಕಾಡಿ:: ಕೊರೋನಾ ಬಂದಾಗ ಕಾಯಿಲೆಗೆ ಮದ್ದಿಲ್ಲ ಎಂದಾಗ ನಾವೆಲ್ಲ ನಮ್ಮ‌ ದೇಹದ ಬಗ್ಗೆ ನಾವೇ ಕಾಳಜಿ ವಹಿಸಿ ಕಶಾಯ ಎಲ್ಲ‌ ಮಾಡಿಕೊಂಡು ಕುಡಿದು ಕಾಯಿಲೆ ಬಾರದ ಹಾಗೆ ನೋಡಿಕೊಂಡೆವು.‌ ಇದೇ ಗಾಂಧೀಜಿಯ ಪ್ರಸ್ತುತತೆ. ಇದನ್ನೆ ಗಾಂಧಿ ಹೇಳಿದ್ದು. ಇಂತಾದ್ದು ಬೇಕಾದಷ್ಟು ಗಾಂಧೀಜಿಯ ಪ್ರಸ್ತುತತೆಗಳಿವೆ. ಥ್ಯಾಂಕ್ ಯೂ ಸರ್.
******************
ಎ. ಕೆ. ಹಿಮಕರ: ಚೇರ್ಕಾಡಿಯವರೊಂದಿಗೆ ನಾನು ಕೆಲಸ ಮಾಡಿದವನು. ಗಾಂಧೀಜಿಯವರ ಬಗ್ಗೆ ನನಗೆ ಗೌರವ ಇದೆ. ಆದರೆ ಸುಭಾಸ್ಚಂದ್ರ ಭೋಸರೊಂದಿಗೆ ಗಾಂಧಿಯ ವ್ಯವಹಾರದ ಬಗ್ಗೆ ಪ್ರಶ್ನೆ ಇದೆ. ಸುಭಾಸ್‌ರದು ಸಶಸ್ತ್ರ ಹೋರಾಟ. ಅವರು ಹಿಟ್ಲರ್ ಬಳಿ ಹೋದದ್ದು ಶಸ್ತ್ರಾಸ್ತ್ರ ಕೊಂಡುಕೊಳ್ಳಲು ಹಣದ ನೆರವಿಗಾಗಿ. ಈ ಬಗ್ಗೆ ಪ್ರಶ್ನೆ ಇದೆ.

Advertisement

ಎರಡನೆಯದು ಗಾಂಧಿ ಜೊತೆಗೇ ಎರಡು ಸಿದ್ಧಾಂತಗಳು ಬೆಳೆದವು. ಅಂಬೇಡ್ಕರ್‌ವಾದ ಮತ್ತು ಲೋಹಿಯಾ ವಾದ. ಅಂಬೇಡ್ಕರ್‌ವಾದ ಸುಮಾರು 25% ಜನರನ್ನು ಪ್ರತಿನಿಧಿಸುತ್ತದೆ. ಲೋಹಿಯಾ ವಾದ ಸುಮಾರು 52% ಜನರನ್ನು ಪ್ರತಿನಿಧಿಸುತ್ತದೆ. ಈ ತಳಹದಿಯಲ್ಲಿ ಗಾಂಧಿವಾದದ ಪ್ರಸ್ತುತತೆ ಏನು?

ಚೊಕ್ಕಾಡಿ:: ಸುಭಾಸ್ಚಂದ್ರ ಭೋಸರ ವಿಚಾರದಲ್ಲಿ ಗಾಂಧೀಜಿಯವರದು ತಪ್ಪೇ. ಪ್ರಜ್ವಲ್ ಅವರೇ, ಭಗತ್ ಸಿಂಗ್ ವಿಷಯದಲ್ಲಿ ನಾನು ಹೇಳುವುದಿಲ್ಲ. ಅಲ್ಲಿ ಅವರು ಪ್ರಯತ್ನ ಪಟ್ಟಿದ್ದಾರೆ. ಆದರೆ ಭೋಸರ ವಿಷಯದಲ್ಲಿ ಗಾಂಧೀಜಿಯವರ ನಡೆ ಸಮರ್ಥನೀಯ ಅಲ್ಲ. ಭೋಸರನ್ನು ಗಾಂಧಿ ತ್ಯಜಿಸಲು ಬ್ರಿಟಿಷರ ಒತ್ತಡ ಉಂಟು ಎಂದೂ ಹೇಳುತ್ತಾರೆ. ಆದರೆ ಇದನ್ನು ಸಾಕ್ಷಿ ಸಹಿತ ಹೇಳಲು ಸಾಧ್ಯವಿಲ್ಲ. ತ್ಯಜಿಸಿದ್ದು ಬಿಡಿ. ಅದು ಸೈದ್ಧಾಂತಿಕ ಭಿನ್ನತೆ ಎಂದಾಯಿತು. ಆದರೆ ಕಾಂಗ್ರೆಸ್ ಅಧಿವೇಷನದ ಅಧ್ಯಕ್ಷರಾದ ಭೋಸರು ರಾಜೀನಾಮೆ ಕೊಡುವ ಹಾಗೆ ಗಾಂಧೀಜಿ ಮಾಡಿದ್ದು ಎಷ್ಟು ಮಾತ್ರಕ್ಕೂ ಸರಿಯಲ್ಲ.

Advertisement

ಎರಡನೆಯದು ಅಂಬೇಡ್ಕರ್‌ವಾದ ಮತ್ತು ಲೋಹಿಯಾ ವಾದದ ಬಗ್ಗೆ. ಅಂಬೇಡ್ಕರ್‌ ಅವರು ತಮ್ಮ ಸಿದ್ಧಾಂತವನ್ನು ಹೇಳಿದ್ದು ಬ್ರಿಟಿಷ್ ಪ್ರಭುತ್ವದಲ್ಲಿ. ಆಗ ಬ್ರಿಟಿಷ್ ಪ್ರಭುತ್ವದ ಸ್ವಭಾವವೂ ಮುಖ್ಯವಾಗುತ್ತದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬ್ರಿಟಿಷರ ಪ್ರಮುಖ ಎದುರಾಳಿ. ಅದನ್ನು ಹಣಿಯಲು ಮುಸ್ಲಿಮರಾದರೆ ಮುಸ್ಲಿಮರು, ಪರಿಶಿಷ್ಟರಾದರೆ ಪರಿಶಿಷ್ಟರು, ಹಿಂದುಳಿದವರಾದರೆ ಹಿಂದುಳಿದವರನ್ನು ಬಳಸಿಕೊಳ್ತಾ ಇತ್ತು. ಆಗ ಸ್ವಲ್ಪ ತಮ್ಮ‌ ಪರವಾಗಿ ರಾಜಕೀಯ ಹೋರಾಟವನ್ನು ಮಾಡಿದರೆ ಕಾನೂನನ್ನು ಪಾಸ್ ಮಾಡಿಸಲು ಆಗುತ್ತಿತ್ತು. ಆದರೆ ಈಗ ಅದು ಸಾಧ್ಯವೆ? ಈಗ ಸರಕಾರ ನಮ್ಮದೇ. ಸರಕಾರದ ಮನಸು ಪರಿಶಿಷ್ಟರು ಅಥವಾ ಹಿಂದುಳಿದವರ ಪರವಾಗಿ ಇದ್ದಾಗ ರಾಜಕೀಯ ಹೋರಾಟಗಳು ಆಯಾ ಸಮುದಾಯಕ್ಕೆ ಶಾಸನಾತ್ಮಕವಾಗಿ ಸಹಾಯ ಮಾಡುತ್ತವೆ. ಆದರೆ ನಮ್ಮದೇ ಸರಕಾರ ಆ ರೀತಿ ಮಾಡಲು ಬರುವುದಿಲ್ಲ.‌ ಮತ್ತು ಮಾಡಿದಾಗ ಅದರ ಪರಿಣಾಮ ಏನಾಯಿತೆಂದೂ ಎಲ್ಲರಿಗೂ ಗೊತ್ತಿದೆ. ಪ್ರತಿಯೊಂದು ಸಮುದಾಯವೂ ತನ್ನ ಪರವಾಗಿ ವಾದಿಸುತ್ತದೆ. ಆದರೆ ಸರಕಾರ ಎಲ್ಲರನ್ನೂ ಸಮಾನವಾಗಿಯೇ ಕಾಣದಿದ್ದರೆ ಅದರ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂಬೇಡ್ಕರ್‌ವಾದ 25% ಜನರನ್ನು ಒಳಗೊಳ್ಳುತ್ತದೆ. ಆದರೆ ಉಳಿದ 75% ನಲ್ಲಿ ಯಾರನ್ನೂ ತನ್ನೊಂದಿಗೆ ತರಲು ಬೇಕಾದ ಲಿಂಕ್ ಅದರ ಬಳಿ ಇಲ್ಲ.

ಈ ಲಿಂಕ್ ಸ್ಥಾಪಿಸಲು ಲೋಹಿಯಾ ಪ್ರಯತ್ನಿಸಿದರು. ಶಿವ, ಕೃಷ್ಣ ಮುಂತಾದ ರೂಪಕಗಳ ಮೂಲಕ 52% ಜನರ ನಡುವೆ ರಾಷ್ಟ್ರೀಯ ಸಂಪರ್ಕಕ್ಕೆ ಪ್ರಯತ್ನಿಸಿದರು. ಆದರದು ಹೆಚ್ಚು ಯಶಸ್ವಿಯಾಗಲಿಲ್ಲ. ಏಕೆಂದರೆ ಅದೇ ರೂಪಕಗಳು ಬಹು ಮಟ್ಟಿಗೆ ರಾಷ್ಟ್ರೀಯವಾಗಿ ಬ್ರಾಹ್ಮಣ ಸಂಸ್ಕೃತಿಯ ಮುಖಾಂತರ ಪ್ರತಿನಿಧಿಸಲ್ಪಡುವ ಸನಾತನ ಧರ್ಮದ ರೂಪಕಗಳೂ ಹೌದು. ಮತ್ತು ಇದು ಸಾವಿರಾರು ವರ್ಷಗಳಿಂದ ಸ್ಥಾಪಿತವಾದ ರೂಪಕ. ಅಲ್ಲದೆ ಲೋಹಿಯಾವಾದಿ ರಾಜಕೀಯ ಇರಲಿ, ಚಿಂತನೆ ಇರಲಿ ಲೋಹಿಯಾವಾದಿಗಳು ಬುದ್ಧಿವಂತರಾಗಿರುವುದರಿಂದ ಅಲ್ಲಿರುವ ಅಶಿಸ್ತೇ ಅದಕ್ಕೊಂದು ದೊಡ್ಡ ಸಮಸ್ಯೆಯೂ ಹೌದು.

Advertisement

ಹಾಗಿರುವಾಗ ಅಂಬೇಡ್ಕರ್‌ವಾದ ಮತ್ತು ಲೋಹಿಯಾ ವಾದವನ್ನು ಕನೆಕ್ಟ್ ಮಾಡುವ ಹಗ್ಗ ಬೇಕಲ್ಲ; ಆ ಹಗ್ಗ ಗಾಂಧಿಯೇ. ಯಾಕೆಂದರೆ ಸಂಖ್ಯೆ ಎಷ್ಟಾದರೂ ಇರಲಿ; ಭಾರತದಾದ್ಯಂತ ಇರುವ ಸಮುದಾಯ ಮುಸ್ಲಿಂ‌ ಮತ್ತು ಬ್ರಾಹ್ಮಣ. ಇಸ್ಲಾಂ ಉಳಿದ ಸಂಸ್ಕೃತಿಗಳೊಂದಿಗೆ ಸಾಂಸ್ಕೃತಿಕ ಕನೆಕ್ಟಿವಿಟಿಯನ್ನು ಸ್ಥಾಪಿಸುವುದಿಲ್ಲ. ಒಂದೊ ಅದಕ್ಕೆ ಇಡಿಯಾಗಿ ಅದರದ್ದಾಗಬೇಕು. ಅಥವಾ ಪೂರ್ತಿಯಾಗಿ ಹೊರಗೆಯೇ ಉಳಿಯಬೇಕು. ಕೊನೆಗೆ ಅಲ್ಲಿ ಉಳಿಯುವುದು ಬ್ರಾಹ್ಮಣ ಸಂಸ್ಕೃತಿ. ಅದು ಎಲ್ಲ ಸಂಸ್ಕೃತಿಗಳೊಂದಿಗೂ ಕನೆಕ್ಟಿವಿಟಿಯನ್ನು ಸ್ಥಾಪಿಸುತ್ತದೆ. ಸನಾತನ ಸಂಸ್ಕೃತಿಗಳು ರಾಷ್ಟ್ರೀಯ ವ್ಯಾಪ್ತಿಯಲ್ಲಿ ಅಭಿವ್ಯಕ್ತಿಗೊಳ್ಳಲು ಹೊರಟಾಗ ಬ್ರಾಹ್ಮಣೀಯ ರೂಪದಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವುದು ಸಾವಿರಾರು ವರ್ಷಗಳಿಂದ ಬಂದ ಪದ್ಧತಿ.

ಇಲ್ಲಿ ಗಾಂಧಿ ಏನು ಮಾಡುತ್ತಾರೆ ಗಮನಿಸಿ. ಬ್ರಾಹ್ಮಣ ಸಂಸ್ಕೃತಿಯ ಎರಡು ಪದರಗಳಿವೆ. ಮೊದಲನೆಯದು ಅದರ ಜ್ಞಾನ ಪರಂಪರೆ. ಎರಡನೆಯದು ರೂಢಿಗತ ಆಚರಣೆ, ಸಂಪ್ರದಾಯ, ಮಡಿವಂತಿಕೆಗಳ ಪದರ. ಗಾಂಧಿ ಬ್ರಾಹ್ಮಣ ಸಂಸ್ಕೃತಿಯ ಬಹಳ ಉದಾತ್ತ ಪದರಗಳಿಂದಲೇ ತರುತ್ತಾರೆ. ಆದ್ದರಿಂದಲೆ ಗಾಂಧಿ ಈಶಾವಾಸೋಪನಿಷತ್ತನ್ನು ಆಧುನಿಕ ಸಂದರ್ಭಕ್ಕೆ ಸಂಪರ್ಕ ಕಲ್ಪಿಸುತ್ತಾರೆ. ಇದನ್ನು ಮಾಡಲು ಆಧುನಿಕ ಹಿಂದುತ್ವದ ಸಿದ್ಧಾಂತಕ್ಕೆ ಆಗುತ್ತಿಲ್ಲ. ಈ ಹಿಂದುತ್ವಕ್ಕೂ ಬ್ರಾಹ್ಮಣ ಸಂಸ್ಕೃತಿಯ ಮೂಲಕ ಅಭಿವ್ಯಕ್ತಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಬ್ರಾಹ್ಮಣ ಸಂಸ್ಕೃತಿಯ ಉದಾತ್ತ ತತ್ವಜ್ಞಾನವನ್ನು ಸ್ಪರ್ಶಿಸಲು ಆಧುನಿಕ ಹಿಂದುತ್ವಕ್ಕೆ ಕಷ್ಟ ಆಗುತ್ತದೆ. ಆದ್ದರಿಂದಲೇ ವಿವೇಕಾನಂದರನ್ನು ಅದು ಒಳಗೊಳ್ಳಬಲ್ಲುದು. ರಾಮ ಕೃಷ್ಣ ಪರಮಹಂಸರನ್ನು ಪ್ರತಿನಿಧಿಸಲು ಅದರ ಕೈಯಲ್ಲಿ ಅಗುವುದಿಲ್ಲ. ಗಾಂಧಿ ಅದಕ್ಕೆ ಕನ್ಫ್ಯೂಸ್ ಕ್ರಿಯೇಟರ್ ಆಗಿ ಕಾಣುತ್ತಾರೆ. ಗಾಂಧಿ ಚಿಂತನೆಗಳಿಗೆ ಈ ಶಕ್ತಿ ಇರುವುದರಿಂದ ಅಂಬೇಡ್ಕರ್‌ವಾದ ಮತ್ತು ಲೋಹಿಯಾ ವಾದ ಎರಡನ್ನೂ ಅದು ಸಂಪರ್ಕಿಸಿ ಏಕ ಸೂತ್ರಕ್ಕೆ ತರಬಲ್ಲುದು. ಈ ಏಕ ಸೂತ್ರ ಇದ್ದಾಗ ಮಾತ್ರ ಅಂಬೇಡ್ಕರ್‌ವಾದ ಮತ್ತು ಲೋಹಿಯಾ ವಾದವೂ ಯಶಸ್ಸು ಕಾಣಲು ಸಾಧ್ಯ. ಥ್ಯಾಂಕ್ ಯೂ ಸರ್.
*****************

Advertisement

ರಮೇಶ್: ಗಾಂಧಿ ಇಡೀ ಜಗತ್ತನ್ನು ವ್ಯಾಪಿಸಿಕೊಂಡಿದ್ದರೂ ಗಾಂಧಿ ಹತ್ಯೆ ಇಂತಾದ್ದೆ ಕಾರಣಕ್ಕೆ ಆಯಿತು ಎಂದು ಗೊತ್ತಾಗದೆ ಇರುವುದು ಒಂದು ದುರಂತ ಅಲ್ವಾ?

ಚೊಕ್ಕಾಡಿ:: ಹೌದು. ದುರಂತವೆರ. ಥ್ಯಾಂಕ್ ಯೂ ಸರ್.
******************
ಪ್ರದೀಪ: ಗಾಂಧಿಯ ಬಗ್ಗೆ ಎಷ್ಟೆಲ್ಲ ನಿರಾಕರಣೆಗಳಿವೆ. ಆದರೂ ಗಾಂಧಿ ಉಳಿದುಕೊಂಡದ್ದು ಹೇಗೆ?

Advertisement

 ಹರೀಶ್ ಬಂಟ್ವಾಳ್: ಗಾಂಧೀಜಿಯ ಅಂತಃಸ್ಸತ್ವದ ಬಗ್ಗೆ ಹೇಳಿ.

ಚೊಕ್ಕಾಡಿ:: ಪ್ರದೀಪ್ ಅವರೇ, ಗಾಂಧಿಯನ್ನು‌ ನಿರಾಕರಿಸುವ ವ್ಯವಸ್ಥೆ ಇವತ್ತು ಶುರು ಅಲ್ಲ. ಅವರ ಮೊದಲ ಸತ್ಯಾಗ್ರಹವಾದ ಚಂಪಾರಣ್ ಸತ್ಯಾಗ್ರಹದಿಂದಲೇ ಪ್ರಾರಂಭವಾಗಿದೆ. ಈಗಲೂ ಮುಂದುವರಿಯುತ್ತಲೇ ಇದೆ. ಗಾಂಧೀಜಿಯ ಐಡಿಯಾಲಜಿಗಳ ಸಹಿತ ಗಾಂಧಿಯ ಎಲ್ಲ ಅಸ್ತಿತ್ವಗಳನ್ನೂ ನಾಶಪಡಿಸುತ್ತೇನೆಂದು ಬ್ರಿಟಿಷ್ ಪ್ರಧಾನ‌ ಮಂತ್ರಿ ವಿನ್ಸ್ಟನ್ ಚರ್ಚಿಲ್ ಹೊರಟಿದ್ದರು. ಆದರೆ ಇಂದು ಇಂಗ್ಲೆಂಡ್ ನಲ್ಲಿ ಚರ್ಚಿಲ್ ಮತ್ತು ಗಾಂಧಿಯ ಪ್ರತಿಮೆಗಳು ಅಕ್ಕಪಕ್ಕದಲ್ಲೆ ಇವೆ.

Advertisement

ಗಾಂಧಿಯ ಅಂತಃಸ್ಸತ್ವ ಏನು ಎಂದರೆ ಭಾರತೀಯ ಸಮಾಜವೇ. ಗಾಂಧಿಯನ್ನು ಕೇಳಿ ಸಮಾಜ ರೂಪುಗೊಂಡಿಲ್ಲ. ಆದರೆ ಗಾಂಧಿಗೆ ಸಮಾಜ ಹೇಗೆ ರೂಪುಗೊಂಡಿದೆ ಎಂದು ಗೊತ್ತಿತ್ತು. ನಾವಿಲ್ಲಿ ಮೊಬೈಲ್ ನೆಟ್ವರ್ಕೇ ಇಲ್ಲದಲ್ಲಿ ಕೂತು ಸಾಂಸ್ಕೃತಿಕ ಚರ್ಚೆ ಮಾಡುತ್ತಿದ್ದೇವೆ. ಇದನ್ನು ನಾವು ಸಹಜವಾಗಿ ಮಾಡಿದ್ದು. ಆದರೆ ಊರಲ್ಲಿ ಈ ರೀತಿ ಚರ್ಚೆ ನಡೆಯಬೇಕೆಂದು ಗಾಂಧಿಯೂ ಹೇಳಿದ್ದರು.

ಗಾಂಧಿಯ ವಿಚಾರ ಜನರಿಗೆ ಸುಲಭ. ಭಗತ್ ಸಿಂಗ್ ಆಗುವುದು ಸುಲಭ ಅಲ್ಲ. ಅದಕ್ಕೆ ಪ್ರತಿಯೊಬ್ಬರೂ ಭಗತ್ ಸಿಂಗ್ ಹುಟ್ಟಬೇಕು;ಆದರೆ ಪಕ್ಕದ ಮನೆಯಲ್ಲಿ ಎಂದೇ ಯೋಚಿಸುವುದು. ಗಾಂಧಿ ಹಾಗಲ್ಲ. ಗಾಂಧಿಯ ವಿಚಾರಗಳನ್ನು ಎಲ್ಲಿ ಎಷ್ಟು ಸಾಧ್ಯವೊ ಅಷ್ಟನ್ನು ಅಳವಡಿಸಿಕೊಳ್ಳಬಹುದು. ಅಳವಡಿಸಿಕೊಳ್ಳುತ್ತಿದ್ದೇವೆ ಕೂಡ. ಆದ್ದರಿಂದ ಗಾಂಧಿಯ ಅಸ್ತಿತ್ವ ಉಳಿಯುತ್ತದೆ.

Advertisement

*********************

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…

8 hours ago

ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…

9 hours ago

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ

ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ  ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…

9 hours ago

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…

9 hours ago

ಹಾನಿಯಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ

ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…

9 hours ago

ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ

ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…

9 hours ago