#ನಮ್ಮ_ಗಣೇಶ | ಕೊರೋನಾ ನಡುವೆ ಬದುಕಿಗಿರಲಿ ನೆಮ್ಮದಿ | ಗಣೇಶ ಹಬ್ಬ ಆಚರಿಸೋಣ- ಸಂಭ್ರಮಿಸೋಣ |

September 9, 2021
11:29 AM

ಹಬ್ಬಗಳೆಲ್ಲಾ ಒಂದಾಗಿ, ಒಟ್ಟಾಗಿ ಆಚರಿಸುವ, ಸಂಭ್ರಮಿಸುವ ಕಾಲ. ಪ್ರತೀ ದಿನವೂ ಒಂದಾಗದೇ ಇದ್ದರೂ ಹಬ್ಬದ ಸಮಯದಲ್ಲಿ ಕುಟುಂಬದ ಮಂದಿ, ಊರಿನ ಮಂದಿ ಒಂದಾಗಿ ಸುಖ-ದು:ಖಗಳನ್ನು ಹಂಚಿಕೊಳ್ಳುವ, ಸಾಂತ್ವನ, ನೆಮ್ಮದಿಯನ್ನು ತಂದುಕೊಳ್ಳುವ ದಿನವಾಗಿಯೂ ಇರುತ್ತದೆ. ಹೀಗಾಗಿ ಯಾವುದೇ ಹಬ್ಬ, ಆಚರಣೆ, ನಂಬಿಕೆಗಳು ಮನುಷ್ಯದ ಬದುಕಿಗೆ ಪಾಸಿಟಿವ್‌ ಸಂದೇಶಗಳನ್ನು ನೀಡುವ, ಬದುಕನ್ನು ಗಟ್ಟಿ ಮಾಡುವ, ಬದುಕಿಗೆ ಧೈರ್ಯ ತುಂಬುವ ದಿನವೂ ಹೌದು.

Advertisement
ಆದರೆ, ಕಳೆದ ಎರಡು ವರ್ಷಗಳಿಂದ ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಆಚರಣೆ ಸಾರ್ವಜನಿಕವಾಗಿ ಇಲ್ಲವಾಗಿದೆ. ಕಾರಣ ಕೊರೋನಾ ವೈರಸ್.‌ ಒಂದು ಸಣ್ಣ ವೈರಸ್‌, ಕಣ್ಣಿಗೆ ಕಾಣದ ಜೀವಿ ಅನೇಕ ಸಂದಿಗ್ಧತೆಯನ್ನು ತಂದಿಟ್ಟಿತು. ಈ ಬಾರಿಯೂ ಗಣೇಶೋತ್ಸವ ಸರಳವಾಗಿ ಆಚರಣೆಯಾಗುತ್ತಿದೆ. ಒಂದು ಕಾಲದಲ್ಲಿ ಗಣೇಶೋತ್ಸವೆಂದರೆ ಸಮಾಜದ ಸಂಘಟನೆ ಎಂದೇ ಆಚರಿಸಲಾಗಿತ್ತಿತ್ತು. ಆದರೆ ಈಗ ಕಾಲದ ಪರಿಸ್ಥಿತಿ ಬದಲಾಯಿಸಿ ಬಿಟ್ಟಿತು. ಆದರೆ ಹಬ್ಬಗಳ ಆಚರಣೆ ನಡೆಯಬೇಕು, ಸರಳವಾಗಿ ಆಚರಿಸಿ ನಾವು ಸಂಭ್ರಮವನ್ನು ಹಂಚಿಕೊಳ್ಳೋಣ, ಸುಖ, ದು:ಖಗಳನ್ನು  ಹಂಚಿಕೊಳ್ಳೋಣ, ಸಾಧ್ಯವಾದರೆ ನಮ್ಮೂರಿಗೆ, ನಮ್ಮೂರಿನ ನಮ್ಮವರಿಗಾಗಿ ಒಳ್ಳೆಯದು ಮಾಡೋಣ.

ಹಾಗಿದ್ದರೆ ಈ ಬಾರಿ ಗಣೇಶೋತ್ಸವ ಸರಳವಾಗಿ ಆಚರಣೆ ಇರುತ್ತದೆ, ನಾವು ಆಚರಣೆ ಮಾಡಿದ ಗಣೇಶ ಹಬ್ಬವನ್ನು ಎಲ್ಲರ ಜೊತೆ ಹಂಚಿಕೊಳ್ಳೋಣ, ಇದು ವೈಭವಕ್ಕಾಗಿ ಅಲ್ಲ, ನಮ್ಮ ಸಂತೋಷಕ್ಕಾಗಿ, ಎಲ್ಲರೊಂದಿಗೆ ನಾವಿದ್ದೇವೆ ಎನ್ನುವುದಕ್ಕೆ. ಹೀಗಾಗಿ ಈ  ನಾವೆಲ್ಲಾ ಸೇರಿ  ಹೀಗೆ ಸಂಭ್ರಮಿಸೋಣ……

ಮನೆಯಲ್ಲಿ ಆಚರಿಸಿದ ಗಣೇಶ ಚೌತಿ, ಸಾರ್ವಜನಿಕವಾಗಿ ಭಾಗವಹಿಸುವ ಗಣೇಶ ಚೌತಿಯ ಬಗ್ಗೆ ಒಂದು ಫೋಟೋ ಹಾಗೂ ಪುಟ್ಟ ಬರಹವನ್ನು‌ ನಮಗೆ ಕಳುಹಿಸಿ.‌ ಇದನ್ನು ಮಿರರ್ ಗ್ರೂಪ್ ನಲ್ಲಿ ನಾವು ಪ್ರಕಟ ಮಾಡುತ್ತೇವೆ, ಎಲ್ಲರೂ ಜೊತೆಯಾಗಿ ಸಂಭ್ರಮಿಸೋಣ. ನಮ್ಮ  ವ್ಯಾಟ್ಸಪ್‌ ಸಂಖ್ಯೆ 9449125447 ಅಥವಾ 8861312447    
ಮಿರರ್‌ ಟೀಂ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ
July 8, 2025
7:36 PM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ
“ರೈಲ್ ಒನ್” ಆ್ಯಪ್ ಲೋಕಾರ್ಪಣೆ
July 1, 2025
9:58 PM
by: The Rural Mirror ಸುದ್ದಿಜಾಲ
ದಾವಣಗೆರೆಯಲ್ಲಿ  ಬೆಳೆ ಸಮೀಕ್ಷೆ ಕಡ್ಡಾಯ – ಕೃಷಿ ಇಲಾಖೆ
July 1, 2025
9:54 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group