ಸಂಗೀತ ಪರೀಕ್ಷೆಯನ್ನು ನಡೆಸದ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ | ಪರೀಕ್ಷೆಯ ನಿರೀಕ್ಷೆಯಲ್ಲಿ ಸಂಗೀತ, ನೃತ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು

July 3, 2024
12:57 PM
ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ವತಿಯಿಂದ ಪರೀಕ್ಷೆ ನಡೆಸಲಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸುರೇಶ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಈ ಬರಹವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.

ಕರ್ನಾಟಕ ಮಾಧ್ಯಮಿಕ ಪರೀಕ್ಷಾ ಮಂಡಳಿಯು(Karnataka Board of Secondary Examination)ದಶಕಗಳಿಂದ ಪ್ರತಿ ವರ್ಷ ಶಾಸ್ತ್ರೀಯ ಸಂಗೀತ(Classical music), ವಾದ್ಯ(Instrumental) ಮತ್ತು ವಿವಿಧ ಶಾಸ್ತ್ರೀಯ ನೃತ್ಯ(classical dance) ಪ್ರಕಾರಗಳ ಪರೀಕ್ಷೆಗಳನ್ನು(Exam) ನಡೆಸುತ್ತಾ ಬರುತಿತ್ತು. ಆದರೆ ಕಳೆದ ಶೈಕ್ಷಣಿಕ ವರ್ಷದಿಂದ ಈ ಪರೀಕ್ಷೆಯನ್ನು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ(Gangubai Hanagal Music University), ಮೈಸೂರು ಇಲ್ಲಿಗೆ ಹಸ್ತಾಂತರಿಸಲಾಗಿರುತ್ತದೆ. ಪ್ರತಿ ವರ್ಷ ಹತ್ತಾರು ಸಾವಿರ ಕಲಾ ಆಕಾಂಕ್ಷಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಸಾಮಾನ್ಯವಾಗಿ, ಮಂಡಳಿಯು ಈ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸುತ್ತಿತ್ತು.

Advertisement
Advertisement

ಈ ವರ್ಷ ಆನ್ ಲೈನ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡುವ ಪ್ರಕ್ರಿಯೆಯು 2023ರ ನವೆಂಬರ್ ನಿಂದ ಪ್ರಾರಂಭವಾಗಿದೆ ಮತ್ತು ನಂತರ ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಿಂದ ಪ್ರಾರಂಭವಾಗಿ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕೊನೆಗೊಳ್ಳುವ ಹಾಗೇ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಆದರೆ ಈ ವರ್ಷ ಜೂನ್ ತಿಂಗಳು ಮುಗಿದರೂ ವಿದ್ಯಾರ್ಥಿಗಳಿಗೆ ಇನ್ನೂ ಪ್ರವೇಶ ಪತ್ರ ಕೂಡ ಬಂದಿರುವುದಿಲ್ಲ. ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಗಳ ದಿನಾಂಕಗಳು ಕೂಡ ಇನ್ನೂ ಪ್ರಕಟವಾಗಿರುವುದಿಲ್ಲ. ಮತ್ತು ಸಾಮಾನ್ಯವಾಗಿ ಕಿರಿಯ, ಹಿರಿಯ ಮತ್ತು ಪ್ರಾವೀಣ್ಯತೆಯ ಪರೀಕ್ಷೆಗಳನ್ನು ಕ್ರಮವಾಗಿ ನಡೆಸಲಾಗುತ್ತಿದ್ದು, ಪ್ರಸ್ತುತ ಯಾವ ಪರೀಕ್ಷೆಯನ್ನು ಮೊದಲು ನಡೆಸಲಾಗುವುದು ಎಂಬುದರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.

Advertisement

ಎಲ್ಲಾ ಸಂಗೀತ, ನೃತ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಇಲ್ಲಿಯವರೆಗೆ ಕತ್ತಲಲ್ಲಿ ಇರಿಸಲಾಗಿದ್ದು, ಶಾಲಾ ಕಾಲೇಜುಗಳು ಈಗ ಮತ್ತೆ ತೆರೆಯುತ್ತಿರುವುದರಿಂದ ಮತ್ತು ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಹೊರ ಹೋಗುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ.

ಥಿಯರಿ ಮತ್ತು ಪ್ರಾಕ್ಟಿಕಲ್ಗಳನ್ನು ಎರಡು ಬೇರೆ ಬೇರೆ ದಿನಗಳಲ್ಲಿ ನಡೆಸಲಾಗುವುದರಿಂದ ಈ ವಿದ್ಯಾರ್ಥಿಗಳು ಮರಳಿ ಬಂದು ಎರಡು ಬಾರಿ ಪರೀಕ್ಷೆಗೆ ಹಾಜರಾಗುವುದು ತುಂಬಾ ಅನಾನುಕೂಲವಾಗಿದೆ .ಏಕೆಂದರೆ ಈ ಹಿಂದೆ ಮಂಡಳಿಯು ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮಾತ್ರವಲ್ಲದೆ ದಾಖಲೆಯ ಪರಿಶೀಲನೆಯನ್ನು ಮಾಡಲು ದೀರ್ಘ ಸಮಯ ಕಾಯುವಂತೆಯೂ ಇರಲಿಲ್ಲ. ಆದರೆ ಈ ವರ್ಷ ಈ ರೀತಿಯ ನಡವಳಿಕೆಯು ಎಲ್ಲರಿಗೂ ಆಶ್ಚರ್ಯ ಮತ್ತು ಆಘಾತವನ್ನುಂಟು‌ ಮಾಡಿದ್ದು, ಸುಮಾರು 70 -80 ವರ್ಷ ವಯಸ್ಸಿನ ಅತ್ಯಂತ ಹಿರಿಯ ಕಲಾವಿದರು ಸೇರಿದಂತೆ ಎಲ್ಲಾ ಶಿಕ್ಷಕರನ್ನು 10 ಗಂಟೆಗೆ ವಿಶ್ವವಿದ್ಯಾನಿಲಯಕ್ಕೆ ಕರೆಸಿ , ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ ಕಾಯುವಂತೆ ಮಾಡಿದ್ದು, ನಿಜಕ್ಕೂ ಶೋಚನೀಯವಾಗಿತ್ತು.

Advertisement

ಈ ಹಿಂದೆ ಎಸ್. ಎಸ್. ಎಲ್. ಸಿ. ಮಂಡಳಿಯು ಪರೀಕ್ಷೆಯನ್ನು ನಡೆಸುತ್ತಿದ್ದಾಗ ಈ ರೀತಿ ಸಂಭವಿಸಿರಲಿಲ್ಲ. ಆಗ ದಾಖಲೆಗಳ ಪರಿಶೀಲನೆಯನ್ನು ಆನ್ ಲೈನ್ ನಲ್ಲಿ‌ ಮಾಡಲಾಗುತ್ತಿತ್ತು. ಇದಕ್ಕಾಗಿ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿದ್ದರಿಂದ ಶಿಕ್ಷಕರಿಗೆ ಆ ಸಮಯದೊಳಗೆ ಹೋಗಿ ಬರಲು ಅನುಕೂಲವಾಗುತ್ತಿತ್ತು. ಈಗ ಸಮಯ ಹಾಗೂ ದಿನಾಂಕವನ್ನು ತಿಳಿಯಲು ವಿಶ್ವವಿದ್ಯಾನಿಲಯಕ್ಕೆ ಕರೆ ಮಾಡಿದರೆ ಯಾರೂ ಪರೀಕ್ಷೆಯ ದಿನಾಂಕಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ, ಅಲ್ಲದೇ ಪ್ರವೇಶಪತ್ರಗಳನ್ನು ಇನ್ನೂ ನೀಡದೇ ಇರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ, ಜೊತೆಗೆ ಕಲಾವಿದರೊಂದಿಗೆ ಪೂರ್ವಾಭ್ಯಾಸವನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ಬಹಳ ಹಿಂದೆಯೇ ಸಿದ್ಧರಾಗಿದ್ದು, ಪರೀಕ್ಷೆಯು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

ಈ ಹಿಂದೆ ಲೋಕಸಭಾ ಚುನಾವಣೆಯ ಎಣಿಕೆ ಮುಗಿದ ಒಂದು ವಾರ ಅಥವಾ ಒಂದು ತಿಂಗಳಲ್ಲಿ ಪರೀಕ್ಷಾ ದಿನಾಂಕವನ್ನು ಘೋಷಿಸುವುದಾಗಿ ತಿಳಿಸಲಾಗಿತ್ತು. ಒಂದು ವೇಳೆ ಪರೀಕ್ಷಾ ದಿನಾಂಕವನ್ನು ಘೋಷಿಸಿದ 10 ದಿನಗಳ ನಂತರ ದಿನಾಂಕಗಳನ್ನು ನಂತರ ಪರೀಕ್ಷೆಗಳು ಪ್ರಾರಂಭವಾಗುವುದರಿಂದ ಈಗಾಗಲೇ ಜೂನ್ 30 ಕಳೆದುಹೋಗಿದ್ದು, ಈ ಬಗ್ಗೆ ಏನು ತಿಳಿದಿರುವುದಿಲ್ಲ. ನಾನು ಈ ಕುರಿತು ರಾಜ್ಯದ ಶಿಕ್ಷಣ ಕಾರ್ಯದರ್ಶಿಗಳೊಂದಿಗೆ, ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಮಾತನಾಡಿ ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ.

Advertisement

ವಿವಿಯ ಕುಲಪತಿಗಳು ಈ ತಿಂಗಳ (ಜುಲೈ) ಕೊನೆಯ ವೇಳೆಗೆ ಥಿಯರಿ ಪರೀಕ್ಷೆಗಳನ್ನು ಮಾಡಲಾಗುವುದು ಹಾಗೂ ಮುಂದಿನ ತಿಂಗಳ ಮಧ್ಯಭಾಗದ ವೇಳೆಗೆ ಪ್ರಾಕ್ಟಿಕಲ್ಸ್ ಪರೀಕ್ಷೆಗಳನ್ನು ಪೂರೈಸುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಸಾವಿರಾರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.

ಬರಹ :
ಸುರೇಶ ಕುಮಾರ್ ಎಸ್.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ‌ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ | ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ
July 5, 2024
2:46 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಲೇಖನ ಸಾಮಾಗ್ರಿ ಕೊಡುಗೆ |
July 5, 2024
2:19 PM
by: ದ ರೂರಲ್ ಮಿರರ್.ಕಾಂ
ಬೋಲೇ ಬಾಬಾ ಮತ್ತು 125 ಸಾವು….. : ಉತ್ತರ ಪ್ರದೇಶದ ಹತ್ರಾಸ್ ಭೀಕರ ಘಟನೆ…….
July 5, 2024
1:05 PM
by: The Rural Mirror ಸುದ್ದಿಜಾಲ
ಅಡಿಕೆ ಜಗಿಯುವುದರಿಂದ ಆಯಾಸ ದೂರ | ಅಧ್ಯಯನ ವರದಿಗೆ ಪೂರಕ ಮಾಹಿತಿ | ಊಟದ ನಂತರ ಅಡಿಕೆ ಪುಡಿ ಸೇವನೆ ಉತ್ತಮ ಪರಿಣಾಮ |
July 5, 2024
12:43 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror