ಹಿಂದೂ ಸನಾತನ ಧರ್ಮ, ಅತ್ಯಂತ ಶ್ರೇಷ್ಠ ಧರ್ಮ. ಇದನ್ನು ಅರಿತವನ ಬಾಳು ಸದಾ ಗೌರವಯುತವಾಗಿ ಇರುತ್ತದೆ. ಹಾಗೆ ಯಾವುದೇ ಕಷ್ಟದಲ್ಲೂ ಜೀವನ ನಡೆಸಬಲ್ಲ ಧೈರ್ಯ, ಹುಮ್ಮಸ್ಸು ಬರುತ್ತದೆ. ಆದರೆ ಇತ್ತೀಚೆಗೆ ನಮ್ಮ ಹಿಂದೂ ಯುವ ಜನತೆ ಈ ಬಗ್ಗೆ ತಾತ್ಸಾರದಿಂದ ಕಾಣುತ್ತಿರುವುದು ಬೇಸರದ ಸಂಗತಿ. ಅದೆಷ್ಟೂ ಹಿಂದೂ ಸಂಘಟನೆಗಳು ಈ ಬಗ್ಗೆ ಅರಿವು ಮೂಡಿಸಲು ಪ್ರಯತ್ನಪಟ್ಟರು ಅವರು ಪಾಶ್ಚಿಮಾತ್ಯ ಸಂಸ್ಕೃತಿಯತ್ತಲೇ ಸಾಗುತ್ತಿದ್ದಾರೆ. ಇದನ್ನರಿತ ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘ-ಸಂಯೋಜಿತ ಸಂಸ್ಥೆ ಹೊಸ ಹೆಜ್ಜೆಯನ್ನಿಟ್ಟಿದೆ.
ಇಂದಿನಿಂದ ಗರ್ಭ ಸಂಸ್ಕಾರ ಅಭಿಯಾನವನ್ನು ಪ್ರಾರಂಭಿಸಲು ಮುಂದಾಗಿದೆ. ಈ ಅಭಿಯಾನದ ಅಡಿಯಲ್ಲಿ ಗರ್ಭಿಣಿಯರಿಗೆ ರಾಮಾಯಣ, ಭಗವದ್ಗೀತೆ ಬೋಧಿಸಿ, ಗರ್ಭದಿಂದಲೇ ಶಿಶುಗಳಿಗೆ ಸಂಸ್ಕಾರವನ್ನು ಕಲಿಸುವ ಒಂದು ಪ್ರಯತ್ನ ಇದಾಗಿದೆ. ಭಗವದ್ಗೀತೆ ಮತ್ತು ರಾಮಾಯಣದಂತಹ ಧಾರ್ಮಿಕ ಗ್ರಂಥಗಳನ್ನು ಓದಲು, ಸಂಸ್ಕೃತ ಮಂತ್ರಗಳನ್ನು ಪಠಿಸಲು ಮತ್ತು ಯೋಗಾಭ್ಯಾಸ ಮಾಡಲು ಪ್ರೋತ್ಸಾಹಿಸಲಾಗುತ್ತದೆ, ಇದರಿಂದ ಸುಸಂಸ್ಕೃತ ಮತ್ತು ದೇಶಭಕ್ತ ಶಿಶುಗಳು ಹುಟ್ಟುತ್ತವೆ ಎಂದು ಹೇಳಿದೆ. ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ಶಿಶುಗಳು ಗರ್ಭದಲ್ಲಿ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಯುವುದನ್ನು ಖಚಿತಪಡಿಸಿಕೊಳ್ಳಲು, ಎರಡು ವರ್ಷವನ್ನು ತಲುಪುವವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಸಂವರ್ಧಿನಿ ನ್ಯಾಸ್ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.
ಯೋಗಾಭ್ಯಾಸವು ಸಹಜ ಹೆರಿಗೆಯಾಗಲು ಗರ್ಭಿಣಿಯರಿಗೆ ಸಹಾಯವಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಂಥ ಅಭ್ಯಾಸಗಳು ಶಿಶುಗಳ ಮೆದುಳಿನ ಮೇಲೆ ಆಳವಾದ ಧನಾತ್ಮಕ ಪರಿಣಾಮ ಬೀರುತ್ತವೆ. ನಾಲ್ಕು ತಿಂಗಳ ಗರ್ಭದಲ್ಲಿರುವ ಮಗು ಕೇಳಲು ಪ್ರಾರಂಭಿಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…